ETV Bharat / bharat

ಸಿಎಂ ನಿತೀಶ್ ಕುಮಾರ್​ ನೋಡಲು ಮುಗಿಬಿದ್ದ ಗ್ರಾಮಸ್ಥರು: ಐದು ಎಕರೆ ಬೆಳೆ ನಾಶ - ಮುಖ್ಯಮಂತ್ರಿ ನಿತೀಶ್ ಕುಮಾರ್

ಮುಖ್ಯಮಂತ್ರಿ ನಿತೀಶ್ ಕುಮಾರ್ ಭಾನುವಾರ ಭಾಗಲ್ಪುರ್ ಜಿಲ್ಲೆಯ ಬಿಹಪುರ ಗೌರಿಡಿಹ್‌ ಗ್ರಾಮಕ್ಕೆ ಭೇಟಿ ನೀಡಿದ್ದರು. ಈ ವೇಳೆ ಸಿಎಂ ಅವರನ್ನು ನೋಡಲು ಮುಗಿಬಿದ್ದ ಗ್ರಾಮಸ್ಥರು, ಐದು ಎಕರೆ ಬೆಳೆಯನ್ನು ನಾಶಪಡಿಸಿದ್ದಾರೆ.

Villagers destroyed five acres of crop after CM's arrival
ಸಿಎಂ ನಿತೀಶ್ ಕುಮಾರ್​ ಭೇಟಿಗೆ ಮುಗಿಬಿದ್ದ ಗ್ರಾಮಸ್ಥರು: ಐದು ಎಕರೆ ಬೆಳೆ ನಾಶ
author img

By

Published : Dec 22, 2020, 1:26 PM IST

ಭಾಗಲ್ಪುರ್ (ಥಾನಾ ಬಿಪುರ): ಮುಖ್ಯಮಂತ್ರಿ ನಿತೀಶ್ ಕುಮಾರ್ ನೋಡಲು ಮುಗಿಬಿದ್ದ ಭಾಗಲ್ಪುರ್ ಜಿಲ್ಲೆಯ ಬಿಹಪುರ ಗೌರಿಡಿಹ್‌ನ ಗ್ರಾಮಸ್ಥರು, ಈ ವೇಳೆ ಐದು ಎಕರೆ ಬೆಳೆ ನಾಶಪಡಿಸಿದ್ದಾರೆ.

ನಿತೀಶ್ ಕುಮಾರ್ ಭಾನುವಾರ ಬಿಹಪುರ ಗೌರಿಡಿಹ್‌ ಗ್ರಾಮಕ್ಕೆ ಭೇಟಿ ನೀಡಿದ್ದರು. ಆ ಸಂದರ್ಭದಲ್ಲಿ ಅವರ ಹೆಲಿಕ್ಯಾಪ್ಟರ್ ಗ್ರಾಮಕ್ಕೆ​ ಸಮೀಪಿಸುತ್ತಿದ್ದಂತೆ ಅವರನ್ನು ಹತ್ತಿರದಿಂದ ನೋಡಬೇಕೆಂಬ ಬಯಕೆಯಿಂದ ಗ್ರಾಮಸ್ಥರು ಬೆಳೆಗಳ ಮೇಲೆಯೇ ಓಡಿ ಹೋಗಿದ್ದಾರೆ. ಈ ವೇಳೆ ಸಮೃದ್ಧವಾಗಿ ಬೆಳೆದುನಿಂತ ಐದು ಎಕರೆ ಬೆಳೆ ನಾಶವಾಗಿದೆ. ಸ್ಥಳದಲ್ಲಿದ್ದ ಪೊಲೀಸ್ ಸಿಬ್ಬಂದಿ ಗ್ರಾಮಸ್ಥರನ್ನು ಶಾಂತಗೊಳಿಸಲು ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.

ದೊಡ್ಡ ಪ್ರಮಾಣದ ಬೆಳೆ ಹಾನಿ ವೀಕ್ಷಿಸಿದ ಭಾಗಲ್ಪುರ್ ಡಿಎಂ ಪ್ರಣಬ್ ಕುಮಾರ್, ಹಾನಿಗೊಳಗಾದ ಬೆಳೆಗಳು ಮತ್ತು ಹೊಲಗಳ ಪರಿಶೀಲನೆ ನಡೆಯುತ್ತಿದೆ. ನಂತರ ಪರಿಹಾರ ನೀಡುವ ಭರವಸೆ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.