ETV Bharat / bharat

ಉತ್ತರಪ್ರದೇಶ: ಸೈನಿಕರಿಗಾಗಿ ಸೇತುವೆ ನಿರ್ಮಿಸಿ ಸೈ ಎನಿಸಿಕೊಂಡ ಗ್ರಾಮಸ್ಥರು

author img

By

Published : Sep 17, 2020, 4:16 PM IST

ಉತ್ತರಪ್ರದೇಶದ ಪಿಲಿಭಿತ್‌ನ ಬಾಮನ್‌ಪುರ್‌ ಭಗೀರತ್‌ ಗ್ರಾಮದ ಜನರು ನೇಪಾಳದ ಗಡಿಗೆ ಹೋಗುವ ಭಾರತದ ಸೈನಿಕರಿಗಾಗಿ ಬಿದಿರಿನ ಸೇತುವೆ ನಿರ್ಮಿಸಿ ಎಲ್ಲರ ಗಮನ ಸೆಳೆದಿದ್ದಾರೆ.

villagers-build-bridge-for-ssb-troops-near-up-nepal-border
ಸೈನಿಕರಿಗಾಗಿ ಸೇತುವೆ ನಿರ್ಮಿಸಿ ಸೈ ಎನಿಸಿಕೊಂಡ ಯುಪಿ ಗ್ರಾಮಸ್ಥರು

ಪಿಲಿಭಿತ್ (ಉತ್ತರಪ್ರದೇಶ) : ಗಡಿಕಾಯುವ ಸೈನಿಕರಿಗಾಗಿ ಹಳ್ಳಿ ಜನರೇ 25 ಮೀಟರ್‌ ಉದ್ದದ ಬಿದಿರಿನ ಸೇತುವೆ ನಿರ್ಮಿಸಿ ಸೈ ಎನಿಸಿಕೊಂಡಿದ್ದಾರೆ.

ಆಳದ ನೀರಿನ ಕಾಲುವೆ ದಾಟಲು ಸಹಸ್ರ ಸೀಮಾ ಬಲದ ಸೈನಿಕರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದನ್ನು ಮನಗಂಡ ಪಿಲಿಭಿತ್‌ನ ಬಾಮನ್‌ಪುರ್‌ ಭಗೀರತ್ ಗ್ರಾಮದ ಜನರು ಖುದ್ಧು ತಾವೇ ಬಿದಿರಿನಿಂದ ಕೂಡಿದ 25 ಮೀಟರ್‌ ಉದ್ದ ಹಾಗೂ 1.2 ಮೀಟರ್‌ ಅಗಲದ ಸೇತುವೆಯನ್ನು ನಿರ್ಮಾಣ ಮಾಡಿದ್ದಾರೆ.

ಎಸ್‌ಎಸ್‌ಬಿಯ 49ನೇ ಬೆಟಾಲಿಯನ್‌ನ ಕಮಾಂಡೆಂಟ್‌ ಅಜಯ್‌ ಕುಮಾರ್‌ ಈ ಬಗ್ಗೆ ಮಾತನಾಡಿ, ಯಾವುದೇ ಆಡಚಣೆ ಇಲ್ಲದೆ ವಿಶೇಷವಾಗಿ ರಾತ್ರಿ ವೇಳೆ ಸಾಗಲು ಸೇತುವೆ ಅವಶ್ಯಕತೆ ಇತ್ತು. ಭಾರತದ ವ್ಯಾಪ್ತಿಯ ನೇಪಾಳದ ಗಡಿಗೆ ಹೋಗಲು ಇದರಿಂದ ನೆರವಾಗಲಿದೆ.

50 ಸಾವಿರ ರೂಪಾಯಿಗಳ ವೆಚ್ಚದಲ್ಲಿ ಸೆಪ್ಟೆಂಬರ್‌ 10 ರಂದು ಆರಂಭವಾದ ಸೇತುವೆ ನಿರ್ಮಾಣದ ಕಾರ್ಯ 5 ದಿನಗಳ ಪೂರ್ಣಗೊಂಡಿದೆ. ಸ್ಥಳೀಯರ ಬೆಂಬಲ ಮತ್ತು ಕೊಡಗೆ ನೀಡಿದ್ದಾರೆ ಎಂದು ಹಳ್ಳಿ ಜನರ ಸೇವೆಯನ್ನು ಅಜಯ್‌ ಕುಮಾರ್‌ ಸ್ಮರಿಸಿದ್ದಾರೆ. ಉತ್ತರಪ್ರದೇಶ-ನೇಪಾಳ ಗಡಿಯಿಂದ 200 ಮೀಟರ್‌ ದೂರದಲ್ಲಿ ಈ ಸೇತುವೆಯನ್ನು ನಿರ್ಮಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.