ETV Bharat / bharat

ಜಲ್ಲಿಕಟ್ಟಿನ ಗೂಳಿ ಸಾವು: ಲಾಕ್​ಡೌನ್​​​ ಇದ್ರೂ ಅಂತ್ಯಕ್ರಿಯೆಯಲ್ಲಿ 2000 ಮಂದಿ ಭಾಗಿ! - jalli kattu bull death

ಜಲ್ಲಿಕಟ್ಟಿನ ಗೂಳಿ ಸಾವನ್ನಪ್ಪಿದೆ ಎಂದು ಸುಮಾರು 2000 ಮಂದಿ ಗೂಳಿಯ ಅಂತ್ಯಕ್ರಿಯೆಯಲ್ಲಿ ಭಾಗಿಯಾದ ಘಟನೆ ತಮಿಳುನಾಡಿನ ಮಧುರೈನಲ್ಲಿ ನಡೆದಿದೆ. ಈ ಸಂಬಂಧ ಏಳು ಜನರನ್ನು ಬಂಧಿಸಲಾಗಿದೆ.

funeral for jallikkattu bull
ಜಲ್ಲಿಕಟ್ಟಿನ ಗೂಳಿ ಸಾವು
author img

By

Published : Apr 17, 2020, 4:37 PM IST

ಮಧುರೈ(ತಮಿಳುನಾಡು): ದೇಶದಾದ್ಯಂತ ಲಾಕ್​ಡೌನ್​ ಆಗಿದ್ದರೂ ಜಲ್ಲಿಕಟ್ಟಿನ ಗೂಳಿ ಸಾವನ್ನಪ್ಪಿದೆ ಎಂದು ಇಲ್ಲಿನ ಸುಮಾರು 2000 ಮಂದಿ ಗೂಳಿಯ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಗ್ರಾಮದ 7 ಜನರ ವಿರುದ್ಧ ಕೇಸು ದಾಖಲಿಸಿ ಬಂಧಿಸಿದ್ದಾರೆ.

ಅಲಂಗನಲ್ಲೂರು ಬಳಿಯ ಮುದುವರ್​ಪಟ್ಟಿ ಗ್ರಾಮದ ಚೆಯ್ಯಾಲಿ ಅಮ್ಮನ್​ ದೇವಸ್ಥಾನದಲ್ಲಿ ಬೆಳೆದ ಮೂಲಿ ಎಂಬ ಗೂಳಿ ಏಪ್ರಿಲ್​ 12ರಂದು ಸಾವನ್ನಪ್ಪಿದೆ. ಈ ಹಿನ್ನೆಲೆಯಲ್ಲಿ ಗೂಳಿಯ ಮೃತದೇಹವನ್ನು ಅಲಂಕಾರ ಮಾಡಿ ಗ್ರಾಮದ ಮಧ್ಯದಲ್ಲಿ ಇರಿಸಲಾಗಿತ್ತು. ಅಲ್ಲಿಗೆ ಸುಮಾರು 2000 ಜನರು ಆಗಮಿಸಿದ್ದಾರೆ ಎಂದು ತಿಳಿದುಬಂದಿದೆ.

ಜಲ್ಲಿಕಟ್ಟಿನ ಗೂಳಿ ಸಾವು

ಈ ಘಟನೆ ಕುರಿತು ಮಾತನಾಡಿದ ಮಧುರೈನ ಸೂಪರಿಂಟೆಂಡೆಂಟ್​ ಆಫ್​ ಪೊಲೀಸ್​ ಮಣಿವಣ್ಣನ್​, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿದಾಡಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಆದರೆ ಈ ಘಟನೆಯನ್ನು ಮುಚ್ಚಿಹಾಕಲು ಕೆಲ ಅಧಿಕಾರಿಗಳು ಪ್ರಯತ್ನಿಸಿದ್ದು, ಅವರ ವಿರುದ್ಧ ಕ್ರಮ ಕೈಗೊಂಡು ಅವರನ್ನು ವರ್ಗಾಯಿಸಲಾಗಿದೆ. ಅಷ್ಟೇ ಅಲ್ಲದೆ ಈ ಸಂಬಂಧ ಗ್ರಾಮದ ಹಿರಿಯ ಮಲೈಚಾಮಿ (70) ಎಂಬವರು ಸೇರಿ 7 ಜನರನ್ನು ಬಂಧಿಸಲಾಗಿದೆ ಎಂದರು.

ಘಟನೆ ಕುರಿತು ಹೆಚ್ಚಿನ ತನಿಖೆ ನಡೆಸಲು ಪಲಮೇಡು ಠಾಣಾ ಸಬ್​ ಇನ್ಸ್​ಪೆಕ್ಟರ್​ ಜಯಕಣ್ಣನ್​ ಹಾಗೂ ವಿಶೇಷ ತನಿಖಾ ತಂಡದ ಪೇದೆ ಮಣಿರಾಜ್​ ಅವರನ್ನು ನಿಯೋಜನೆ ಮಾಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.