ನವದೆಹಲಿ: ಭಾರತದ ಪ್ರತಿ ಇಂಚು ಭೂಮಿ ಭದ್ರಪಡಿಸಿಕೊಳ್ಳುವ ಬಗ್ಗೆ ಮೋದಿ ಸರ್ಕಾರ ಸಂಪೂರ್ಣ ಎಚ್ಚರಿಕೆ ವಹಿಸುತ್ತಿದೆ. ಅದನ್ನು ಯಾರಿಂದಲೂ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ಕೇಂದ್ರ ಗೃಹ ಸಚಿತ ಅಮಿತ್ ಶಾ ಹೇಳಿದರು.
ಚೀನಾದೊಂದಿಗೆ ಲಡಾಖ್ ವ್ಯಾಪ್ತಿಯ ಗಡಿ ಸಮಸ್ಯೆ ಪರಿಹರಿಸಲು ಸರ್ಕಾರವು ಎಲ್ಲ ವಿಧದ ಮಿಲಿಟರಿ ಮತ್ತು ರಾಜತಾಂತ್ರಿಕ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದರು.
ನಮ್ಮ ಭೂಮಿಯ ಪ್ರತಿ ಅಂಗುಲಕ್ಕೂ ನಾವು ಜಾಗರೂಕರಾಗಿರುತ್ತೇವೆ. ಅದನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ. ನಮ್ಮ ರಕ್ಷಣಾ ಪಡೆಗಳು ಮತ್ತು ನಾಯಕತ್ವವು ದೇಶದ ಸಾರ್ವಭೌಮತ್ವ ಮತ್ತು ಗಡಿಯನ್ನು ರಕ್ಷಿಸಲು ಸಮರ್ಥವಾಗಿದೆ ಎಂದು ಹೇಳಿದರು.
ದೇಶದ ಸಾರ್ವಭೌಮತ್ವ ಮತ್ತು ರಾಷ್ಟ್ರೀಯ ಭದ್ರತೆಗೆ ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಗೃಹ ಸಚಿವರು ಹೇಳಿದರು.
ಮುಂದಿನ ವರ್ಷದ ವಿಧಾನಸಭಾ ಚುನಾವಣೆಯ ನಂತರ ಪಶ್ಚಿಮ ಬಂಗಾಳದಲ್ಲಿ ಸರ್ಕಾರದ ಬದಲಾವಣೆಯಾಗಲಿದೆ. ಅಲ್ಲಿ ಬಿಜೆಪಿ ಸರ್ಕಾರ ಅಧಿಕಾರ ವಹಿಸಿಕೊಳ್ಳಲಿದೆ. ಪಶ್ಚಿಮ ಬಂಗಾಳದಲ್ಲಿ ನಾವು ದೃಢ ನಿಶ್ಚಯದ ಹೋರಾಟ ಮಾಡುತ್ತಿದ್ದೇವೆ. ನಾವು ಸರ್ಕಾರ ರಚಿಸುತ್ತೇವೆ ಎಂಬ ಭಾವನೆ ಇದೆ. ಅಲ್ಲಿ ಕಾನೂನು ಸುವ್ಯವಸ್ಥೆ ಗಂಭೀರವಾಗಿದೆ ಎಂದು ದೂರಿದರು.