ETV Bharat / bharat

ಸರಪಳಿ ಬಿಗಿದು ನಾಯಿಯನ್ನು 1ಕಿ.ಮೀ ಎಳೆದೊಯ್ದ ದುರುಳರ ವಿರುದ್ಧ ಪ್ರಕರಣ - ಅಲಿಗರ್

ಪ್ರಾಣಿಗಳ ಮೇಲೆ ಮನುಷ್ಯನ ದೌರ್ಜನ್ಯ ದಿನೇ ದಿನೇ ಹೆಚ್ಚಾಗುತ್ತಿದೆ. ಕೇರಳದ ಗರ್ಭಿಣಿ ಆನೆ ಸಾವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡಿತ್ತು. ಆದರೆ ಆ ಘಟನೆ ಜನಮಾನಸದಿಂದ ಮಾಸುವ ಮುನ್ನವೇ ಮತ್ತೆ ಇದೇ ರೀತಿಯ ಅಮಾನವೀಯ ಘಟನೆಗಳು ನಡೆಯುತ್ತಿವೆ.

dog
ನಾಯಿ
author img

By

Published : Jun 7, 2020, 11:28 AM IST

ಔರಂಗಬಾದ್ ​(ಮಹಾರಾಷ್ಟ್ರ): ಬೈಕ್​ ಚಲಾಯಿಸುತ್ತಾ ಇಬ್ಬರು ಪುರುಷರು ನಾಯಿಯೊಂದನ್ನು ಸುಮಾರು ಒಂದು ಕಿ.ಮೀ ದೂರ ಎಳೆದೊಯ್ದಿರುವ ಅಮಾನವೀಯ ಘಟನೆ ಔರಂಗಾಬಾದ್​ನಲ್ಲಿ ನಡೆದಿದೆ.

ನಾಯಿಯ ಕುತ್ತಿಗೆಗೆ ಸರಪಳಿಯಿಂದ ಬಿಗಿದು ಬೈಕ್​ ಹತ್ತಿದ ಯುವಕರು ಹಾಗೆಯೇ 1ಕಿ.ಮೀ ದೂರ ಎಳೆದೊಯ್ದಿರುವ ವಿಡಿಯೋ ವೈರಲ್​ ಆಗಿತ್ತು. ಔರಂಗಬಾದ್ ಪೊಲೀಸರು ಇಬ್ಬರು ಯುವಕರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.

ಇದೇ ತರಹದ ಇನ್ನೊಂದು ಘಟನೆಗೆ ಉತ್ತರ ಪ್ರದೇಶದ ಅಲಿಢದಲ್ಲಿ ನಡೆದಿದೆ. ಅಲ್ಲಿ ನಾಯಿಯೊಂದನ್ನು ಜನರ ಗುಂಪೊಂದು ಹೊಡೆದು ಸಾಯಿಸಿತ್ತು. ಘಟನೆಯ ವಿಡಿಯೋ ವೈರಲ್ ಆಗಿದೆ. ಈ ಘಟನೆ ಚಾರ್ರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ ಎಂದು ತಿಳಿದುಬಂದಿದೆ. ಘಟನಾ ಸ್ಥಳದಲ್ಲಿದ್ದ ಜನರು ಮತ್ತು ಸ್ಥಳದ ವಿವರಗಳನ್ನು ಪತ್ತೆ ಮಾಡಲಾಗುತ್ತಿದೆ. ಈ ಬಗ್ಗೆ ಮಾಹಿತಿ ಪಡೆದ ಕೂಡಲೇ ಆರೋಪಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಗ್ರಾಮೀಣ ಪೊಲೀಸ್ ಅಧೀಕ್ಷಕ ಅತುಲ್ ಶರ್ಮಾ ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.