ETV Bharat / bharat

ಕೊರೊನಾದಿಂದಾಗಿ ಒಡಿಯಾ ಚಿತ್ರರಂಗದ ಹಿರಿಯ ನಟ ಅಜಿತ್ ದಾಸ್ ನಿಧನ

ಕೊರೊನಾ ಸೋಂಕಿನಿಂದಾಗಿ ಒಡಿಯಾ ಸಿನಿಮಾ ರಂಗದ ಹಿರಿಯ ನಟ ಅಜಿತ್ ದಾಸ್ ಮೃತಪಟ್ಟಿದ್ದು, ರಾಜಕೀಯ ಹಾಗೂ ಸಿನಿಮಾ ಕ್ಷೇತ್ರದ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

Ajit Das
ಅಜಿತ್ ದಾಸ್
author img

By

Published : Sep 13, 2020, 8:10 PM IST

ಭುವನೇಶ್ವರ್ (ಒಡಿಶಾ): ಒಡಿಯಾ ಸಿನಿಮಾರಂಗದ ಹಿರಿಯ ನಟ ಅಜಿತ್ ದಾಸ್ (71) ಕೊರೊನಾ ಸೋಂಕಿನಿಂದ ಭುವನೇಶ್ವರದ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಕೆಲವು ದಿನಗಳ ಹಿಂದೆ ಇವರಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, ಭುವನೇಶ್ವರದ ಎಸ್​ಯುಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಅಜಿತ್ ದಾಸ್ ಕೊನೆಯುಸಿರೆಳೆದಿದ್ದಾರೆ.

ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ (ಎನ್​ಎಸ್​ಡಿ)ಯ ಹಳೆಯ ವಿದ್ಯಾರ್ಥಿಯಾದ ಅವರು 60ಕ್ಕೂ ಹೆಚ್ಚು ಒಡಿಯಾ ಚಿತ್ರಗಳಲ್ಲಿ ಅಭಿನಯಿಸಿದ್ದು, ಹಲವಾರು ಚಿತ್ರಗಳಿಗೆ ನಿರ್ದೇಶನ ಕೂಡಾ ಮಾಡಿದ್ದರು.

1949ರಲ್ಲಿ ಮಯೂರ್​ಭಂಜ್​ ಜಿಲ್ಲೆಯಲ್ಲಿ ಜನಿಸಿದ ಅವರು 1976ರಲ್ಲಿ ಸಿಂಧೂರ ಬಿಂದು ಎಂಬ ಚಿತ್ರದಿಂದ ಸಿನಿ ಪಯಣ ಆರಂಭಿಸಿದ್ದರು.

ಅಜಿತ್ ದಾಸ್ ಅಗಲಿಕೆಗೆ ಸಿಎಂ ನವೀನ್ ಪಟ್ನಾಯಕ್​, ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್, ಪ್ರತಾಪ್ ಸಾರಂಗಿ ಮತ್ತು ಹಲವು ರಾಜಕೀಯ ಗಣ್ಯರು ಹಾಗೂ ಸಿನಿ ಗಣ್ಯರು ಸಂತಾಪ ಸೂಚಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.