ಹೈದರಾಬಾದ್: ಪಶು ವೈದ್ಯೆ ಮೇಲೆ ಅತ್ಯಾಚಾರ ಎಸಗಿ ಸುಟ್ಟುಹಾಕಿದ್ದ ಅತ್ಯಾಚಾರಿಗಳು ಕೊನೆಗೂ ಎನ್ಕೌಂಟರ್ ಆಗಿದ್ದಾರೆ.
ಎನ್ಕೌಂಟರ್ ನಡೆದ ಸ್ಥಳದಲ್ಲಿ ಶವಗಳು ಬಿದ್ದಿರುವ ಚಿತ್ರ ಈಟಿವಿ ಭಾರತಕ್ಕೆ ಲಭ್ಯವಾಗಿದೆ.
ಪೊಲೀಸ್ ಅಧಿಕಾರಿಗಳು ಶವಗಳ ಸುತ್ತ ನಿಂತಿದ್ದು ಮಹಜರು ನಡೆಸುತ್ತಿದ್ದಾರೆ. ಹೈದರಾಬಾದ್ನ ಶಾದ್ನಗರದಲ್ಲಿ ಅತ್ಯಾಚಾರ ಎಸಗಿದ್ದ ದುಷ್ಕರ್ಮಿಗಳು, ಆಕೆಯನ್ನು ಸುಟ್ಟು ಕೊಂದಿದ್ದರು. ಈ ಪ್ರಕರಣದ ಪ್ರಮುಖ ಆರೋಪಿಗಳಾದ ಆರೀಫ್ ಮತ್ತು ಆತನ ಮೂವರು ಸಹಚರರು ಎನ್ಕೌಂಟರ್ಗೆ ಬಲಿಯಾಗಿದ್ದಾರೆ.