ಹೈದರಾಬಾದ್ (ತೆಲಂಗಾಣ) : ಹೈದರಾಬಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಂದೇ ಭಾರತ್ ಮಿಷನ್ ಅಡಿಯಲ್ಲಿ ಗುರುವಾರ ವಿವಿಧ ಕಡೆಗಳಿಂದ ವಿಮಾನಗಳು ಆಗಮಿಸಿದೆ.
ಜಿದ್ದಾದಿಂದ ವಿಜಯವಾಡ ಮೂಲಕ ಬಂದ ಮೊದಲ ಏರ್ ಇಂಡಿಯಾ ವಿಮಾನ ಎಐ 1914 ಮಧ್ಯಾಹ್ನ 12.24 ರ ಸುಮಾರಿಗೆ ತಲುಪಿದ್ದು, ಈ ವಿಮಾನದಲ್ಲಿ ಸುಮಾರು 68 ಪ್ರಯಾಣಿಕರು ಆಗಮಿಸಿದ್ದಾರೆ.
ಎರಡನೇ ಏರ್ ಇಂಡಿಯಾ ಎಐ 174 ವಿಮಾನ ಸ್ಯಾನ್ ಫ್ರಾನ್ಸಿಸ್ಕೋ (ಯುಎಸ್) ನಿಂದ ಬೆಂಗಳೂರು ಮೂಲಕ ಹೈದರಾಬಾದ್‌ಗೆ ಮಧ್ಯಾಹ್ನ 12.16 ರಕ್ಕೆ ಆಗಮಿಸಿದ್ದು, ಈ ವಿಮಾನದಲ್ಲಿ ಸುಮಾರಿಗೆ 81 ಪ್ರಯಾಣಿಕರು ಬಂದಿಳಿದಿದ್ದಾರೆ.
ಮೂರನೇ ವಿಮಾನ ಏರ್ ಇಂಡಿಯಾ ಎಐ 1347 ಸಿಂಗಾಪುರದಿಂದ ಹೈದರಾಬಾದ್‌ಗೆ ರಾತ್ರಿ 8.35 ರ ಸುಮಾರಿಗೆ ಆಗಮಿಸಿದೆ, ಈ ವಿಮಾನದಲ್ಲಿ 149 ಪ್ರಯಾಣಿಕರು ತಾಯ್ನಾಡು ತಲುಪಿದ್ದಾರೆ.
ವಿಮಾನಗಳು ಆಗಮಿಸುತ್ತಿದ್ದಂತೆ ಎಲ್ಲಾ ಪ್ರಯಾಣಿಕರನ್ನು ಥರ್ಮಲ್ ಸ್ಕೀನಿಂಗ್ಗೆ ಒಳಪಡಿಸಿ ಕ್ವಾರಂಟೈನ್ ಕೇಂದ್ರಗಳಿಗೆ ಕರೆದೊಯ್ಯಲಾಯಿತು. ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಗುರುವಾರದವರೆಗೆ ವಂದೇ ಭಾರತ್ ಮಿಷನ್ ಅಡಿಯಲ್ಲಿ 20 ಸಾವಿರ ಭಾರತೀಯರನ್ನು ಮರಳಿ ಕರೆತರಲಾಗಿದೆ ಮತ್ತು ಮುಂದಿನ ದಿನಗಳಲ್ಲಿ ಈ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದೆ ಎಂದಿದ್ದಾರೆ.