ETV Bharat / bharat

ಕೊರೊನಾ ಕಾಟದಿಂದ ಮುಚ್ಚಿದ ಕಾಶ್ಮೀರ ದ್ವಾರ... ವೈಷ್ಣೋದೇವಿ ಯಾತ್ರೆ ರದ್ದಿಗೆ ಭಕ್ತರ ಬೇಸರ

author img

By

Published : Mar 18, 2020, 3:26 PM IST

ದೇಶಾದ್ಯಂತ ಕೊರೊನಾ ವೈರಸ್​​ ಭೀತಿ ಹಿನ್ನೆಲೆ ವೈಷ್ಣೊದೇವಿ ಯಾತ್ರೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಗೊಳಿಸಲಾಗಿದೆ.

ಕೃಪೆ-twitter
ಕೃಪೆ-twitter

ಜಮ್ಮು: ಮಹಾಮಾರಿ ಕೋವಿಡ್​-19 ವೈರಸ್​​ ಹರಡುವಿಕೆ ತಡೆಯಲು ವೈಷ್ಣೊದೇವಿ ಯಾತ್ರೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಗೊಳಿಸಲಾಗಿದೆ.

ಜೊತೆಗೆ ಜಮ್ಮು ಮತ್ತು ಕಾಶ್ಮೀರ ರಾಜ್ಯದೊಳಗೆ ಪರ ರಾಜ್ಯದ ಬಸ್​ಗಳು ಬರದಂತೆ ಅಲ್ಲಿನ ಸರ್ಕಾರ ಬುಧವಾರ ಆದೇಶ ಹೊರಡಿಸಿದೆ. ಕೊರೊನಾ ವೈರಸ್ ಹರಡುವಿಕೆಯನ್ನು ತಡೆಗಟ್ಟಲು ಈ ಕ್ರಮ ಕೈಗೊಳ್ಳಲಾಗಿದೆ.

'ಶ್ರೀ ಮಾತಾ ವೈಷ್ಣೊ ದೇವಿ ಯಾತ್ರೆಯನ್ನು ಇಂದಿನಿಂದಲೇ ರದ್ದುಪಡಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರದಿಂದ ಬಸ್​ಗಳು ಹೊರರಾಜ್ಯಕ್ಕೆ ತೆರಳುವುದು ಹಾಗೂ ಹೊರ ರಾಜ್ಯದ ಬಸ್​ಗಳು ರಾಜ್ಯದೊಳಗೆ ಬರುವುದನ್ನು ಇಂದಿನಿಂದಲೇ ನಿಷೇಧಿಸಲಾಗಿದೆ,' ಎಂದು ಜಮ್ಮು ಮತ್ತು ಕಾಶ್ಮೀರ ರಾಜ್ಯದ ವಾರ್ತಾ ಮತ್ತು ಸಂಪರ್ಕ ಇಲಾಖೆ ಟ್ವೀಟ್ ಮೂಲಕ ತಿಳಿಸಿದೆ.

ಉಧಮಪುರ ಜಿಲ್ಲಾಡಳಿತವು ಎಲ್ಲ ಬಗೆಯ ಸಾರಿಗೆ ವ್ಯವಸ್ಥೆಯನ್ನು ರದ್ದುಗೊಳಿಸಿದೆ. ಹಾಗೆಯೇ ಜಮ್ಮುವಿನ ಬಾಗ್-ಎ-ಬಹು ಉದ್ಯಾನ ಮತ್ತು ಪೂಂಛ್ ಜಿಲ್ಲೆಯ ಎಲ್ಲ ಸಾರ್ವಜನಿಕ ಉದ್ಯಾನಗಳನ್ನು ಮುಂದಿನ ಆದೇಶದವರೆಗೆ ಮುಚ್ಚಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.