ETV Bharat / bharat

ಆಗಸ್ಟ್ 16 ರಿಂದ ವೈಷ್ಣೋದೇವಿ ಯಾತ್ರೆ ಆರಂಭ: ಈ ಸೂಚನೆಗಳು ನಿಮಗೆ ಗೊತ್ತಿರಲಿ.. - Sri Mata Vaishno Devi Yatra

ವಿಶ್ವ ಪ್ರಸಿದ್ಧ ವೈಷ್ಣೋ ದೇವಿ ಯಾತ್ರೆಯನ್ನು ಕೋವಿಡ್-19ರ ಕಠಿಣ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಿ ಆಗಸ್ಟ್ 16ರಿಂದ ಪ್ರಾರಂಭಿಸಲಾಗುತ್ತಿದೆ.

The Vaishno Devi Yatra will resume on August 16: Here are the instructions to follow
ಆಗಸ್ಟ್ 16 ರಿಂದ ಪುನರಾರಂಭಗೊಳ್ಳಲಿದೆ ವೈಷ್ಣೋ ದೇವಿ ಯಾತ್ರೆ: ಇಲ್ಲಿವೆ ಅನುಸರಿಸಬೇಕಾದ ಸೂಚನೆಗಳು
author img

By

Published : Aug 12, 2020, 2:59 PM IST

ಉಧಂಪುರ (ಜಮ್ಮು ಕಾಶ್ಮೀರ): ಕಠಿಣ ಕೋವಿಡ್ ನಿಯಮಗಳನ್ನು ಅನುಸರಿಸುವುದರೊಂದಿಗೆ ಆಗಸ್ಟ್ 16ರಿಂದ ಮಾತಾ ವೈಷ್ಣೋದೇವಿ ಯಾತ್ರೆ ಶುರುವಾಗಲಿದೆ.

The Vaishno Devi Yatra will resume on August 16: Here are the instructions to follow
ವೈಷ್ಣೋದೇವಿ ಯಾತ್ರೆಗೆ ಸಂಬಂಧಿಸಿದ ಜಮ್ಮು ಕಾಶ್ಮೀರ ಸರ್ಕಾರದ ಸೂಚನೆಗಳು​

ಸೆಪ್ಟೆಂಬರ್ 30 ರವರೆಗೆ ಗರಿಷ್ಠ 5 ಸಾವಿರ ಭಕ್ತರಿಗೆ ವೈಷ್ಣೋದೇವಿ ಯಾತ್ರೆ ಮಾಡಲು ಅವಕಾಶವಿದೆ. ದೇಶದ ಇತರೆ ರಾಜ್ಯಗಳಿಂದ ಬರುವ ಭಕ್ತರು ಕೋವಿಡ್ ಬಗ್ಗೆ ಅಗತ್ಯ ಪರೀಕ್ಷೆ ಸೇರಿದಂತೆ ಕೆಲವು ನಿಯಮಗಳನ್ನು ಪಾಲಿಸಬೇಕು.

ಈ ಮಾರ್ಗಸೂಚಿಗಳನ್ನು ಅನುಸರಿಸಬೇಕು:

- 60 ವರ್ಷಕ್ಕಿಂತ ಹೆಚ್ಚು ವಯಸ್ಸಿನವರು, ಗರ್ಭಿಣಿಯರು ಮತ್ತು 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಧಾರ್ಮಿಕ ತೀರ್ಥಯಾತ್ರೆಗೆ ಹೋಗಲು ಅವಕಾಶವಿರುವುದಿಲ್ಲ.

- ಯಾತ್ರಿಕರು ಪರಸ್ಪರ 6 ಅಡಿ ಅಂತರವನ್ನು ಕಾಯ್ದುಕೊಳ್ಳಬೇಕು. ಜೊತೆಗೆ ಮುಖಗವಸು ಧರಿಸಿರಬೇಕು.

- ಕೊರೊನಾದ ಯಾವುದೇ ಲಕ್ಷಣಗಳಿಲ್ಲದವರಿಗೆ ಮಾತ್ರ ಧಾರ್ಮಿಕ ಸ್ಥಳಗಳಿಗೆ ಹೋಗಲು ಸಾಧ್ಯ.

- ದೇಗುಲ ಪ್ರವೇಶಿಸುವ ಮೊದಲು ಕೈ, ಕಾಲುಗಳನ್ನು ಸೋಪ್ ಮತ್ತು ನೀರಿನಿಂದ ತೊಳೆಯಬೇಕು. ಸಂಬಂಧಿತ ಸಂಸ್ಥೆಗಳು ಈ ಸೌಲಭ್ಯವನ್ನು ಒದಗಿಸುತ್ತವೆ. ವಿಗ್ರಹಗಳು ಅಥವಾ ಧಾರ್ಮಿಕ ಪವಿತ್ರ ಗ್ರಂಥಗಳ ಸ್ಪರ್ಶಿಸಲು ಅನುಮತಿ ಇಲ್ಲ.

- ಮುಂದಿನ ಆದೇಶದವರೆಗೆ ಧಾರ್ಮಿಕ ಸ್ಥಳಗಳಲ್ಲಿ ದೊಡ್ಡ ಸಮಾರಂಭಗಳು ನಡೆಯುವುದಿಲ್ಲ.

- ಪ್ರಸಾದ ವಿತರಿಸಲು ಅನುಮತಿ ಇಲ್ಲ.

- ಧಾರ್ಮಿಕ ತಾಣಗಳನ್ನು ಕಾಲಕಾಲಕ್ಕೆ ಸ್ವಚ್ಛಗೊಳಿಸಬೇಕು.

- ಆರೋಗ್ಯ ಸೇತು ಅಪ್ಲಿಕೇಶನ್ ಭರ್ತಿ ಮಾಡುವುದು ಎಲ್ಲಾ ಭಕ್ತರಿಗೂ ಕಡ್ಡಾಯ.

- ಚಪ್ಪಲಿ, ಬೂಟುಗಳನ್ನು ರೈಲುಗಳಲ್ಲೇ ಬಿಡಬೇಕು.

- ಉಪಯೋಗಿಸಿ ಕಳಚಿದ ಮುಖಗವಸು ಅಥವಾ ಕೈಗವಸುಗಳನ್ನು ವಿಲೇವಾರಿ ಮಾಡಬೇಕಾಗುತ್ತದೆ.

- ಎಲ್ಲಾ ಧಾರ್ಮಿಕ ಸ್ಥಳಗಳಲ್ಲಿ, ಅವರ ಮೊಬೈಲ್ ಸಂಖ್ಯೆಯೊಂದಿಗೆ ಭಕ್ತರ ಪಟ್ಟಿಯನ್ನು ಮಾಡಬೇಕಾಗುತ್ತದೆ.

- ಕೊರೊನಾ ಅನುಮಾನಾಸ್ಪದ ಅಥವಾ ಸೋಂಕಿಗೆ ಒಳಗಾಗಿದ್ದರೆ ಅಂಥವರನ್ನು ಬೇರ್ಪಡಿಸಿ ಕೂಡಲೇ ಹತ್ತಿರದ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಬೇಕಾಗುತ್ತದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.