ಪೌರಿ ಗರ್ವಾಲ್(ಉತ್ತರಾಖಂಡ್): ಮೇ 23ರಂದು ಉತ್ತರಾಖಂಡ್ನ ಶ್ರೀನಗರ ಬಳಿಯ ಕಾಡಿನಲ್ಲಿ ಕಾಣಿಸಿಕೊಂಡಿದ್ದ ಬೆಂಕಿ ಇಂದಿಗೂ ಉರಿಯುತ್ತಲೇ ಇದ್ದು, ಬೆಂಕಿಯ ತೀವ್ರತೆ ಹೆಚ್ಚಿದೆ.
ಅರಣ್ಯ ಇಲಾಖೆಯ ಪ್ರಕಾರ, ಶ್ರೀನಗರದಿಂದ 3 ಕಿ.ಮೀ. ದೂರದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅರಣ್ಯದ ವ್ಯಾಪ್ತಿಗೂ ಹರಡಿದೆ. ಈ ವರ್ಷ ಕುಮಾವೂನ್ ಮತ್ತು ಗರ್ವಾಲ್ ಪ್ರದೇಶಗಳಲ್ಲಿ 900 ಹೆಕ್ಟೇರ್ನಷ್ಟು ಅರಣ್ಯ ಕಾಡ್ಗಿಚ್ಚಿನಿಂದ ನಾಶವಾಗಿದೆ ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪಿ.ಕೆ.ಸಿಂಗ್ ತಿಳಿಸಿದ್ದಾರೆ.
ಇಲ್ಲಿಯವರೆಗೆ ಬೆಂಕಿ ಆವರಿಸಿರುವ ಪ್ರದೇಶ 924.335 ಹೆಕ್ಟೇರ್ ಆಗಿದ್ದು, ಅದರಲ್ಲಿ 719.535 ಹೆಕ್ಟೇರ್ ಮೀಸಲು ಅರಣ್ಯ ಪ್ರದೇಶದ ವ್ಯಾಪ್ತಿಗೆ ಬಂದರೆ, 204.8 ಹೆಕ್ಟೇರ್ ವ್ಯಾನ್ ಪಂಚಾಯತ್ ಪ್ರದೇಶವಾಗಿದೆ ಎಂದು ಹೇಳಿದ್ದಾರೆ.
ಪ್ರತಿ ವರ್ಷ ಫೆಬ್ರವರಿ 15ರಿಂದ ಜೂನ್ 15ರವರೆಗೆ ರಾಜ್ಯದಲ್ಲಿ ಕಾಡ್ಗಿಚ್ಚಿನಂತಹ ಘಟನೆಗಳು ಕಾಣಿಸಿಕೊಳ್ಳಲಿದ್ದು, ಈ ಸಮಯದಲ್ಲಿ ರಾಜ್ಯ ಅಗ್ನಿಶಾಮಕ ಇಲಾಖೆಯು ಯಾವುದೇ ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು ಸಜ್ಜಾಗಿದೆ. ಏಪ್ರಿಲ್ನಲ್ಲಿ ಸುರಿದ ಮಳೆ ಮುಂದುವರೆಯುವ ನಿರೀಕ್ಷೆ ಇತ್ತು. ಆದರೆ ಇದ್ದಕ್ಕಿದ್ದಂತೆ ಕಾಣಿಸಿಕೊಂಡ ಕಾಡ್ಗಿಚ್ಚು ಆತಂಕಕ್ಕೆ ಕಾರಣವಾಗಿ ಎಂದಿದ್ದಾರೆ.