ಡೆಹ್ರಾಡೂನ್: ಉತ್ತರಾಖಂಡ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಅವರನ್ನು ಡೆಹ್ರಾಡೂನ್‌ನ ಡೂನ್ ಆಸ್ಪತ್ರೆಯಿಂದ ದೆಹಲಿಯ ಏಮ್ಸ್ ಗೆ ಸ್ಥಳಾಂತರಿಸಲಾಗುತ್ತಿದೆ ಎಂದು ಉತ್ತರಾಖಂಡ ಸಿಎಂ ಕಚೇರಿ ಮಾಹಿತಿ ನೀಡಿದೆ.
ನಿನ್ನೆ ಉತ್ತರಾಖಂಡ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಅವರನ್ನು ಡೆಹ್ರಾಡೂನ್‌ನ ಡೂನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯ ಡಾ.ಎನ್.ಎಸ್. ಬಿಶ್ಟ್ ಅವರ ಪ್ರಕಾರ, ತ್ರಿವೇಂದ್ರ ಸಿಂಗ್ ರಾವತ್ ಅವರ ಎದೆಯಲ್ಲಿ ಸೋಂಕು ಪತ್ತೆಯಾಗಿದೆ.
ಇದನ್ನು ಓದಿ: ಉತ್ತರಾಖಂಡ್ ಸಿಎಂ ತ್ರಿವೇಂದ್ರ ಸಿಂಗ್ ರಾವತ್ ಆಸ್ಪತ್ರೆಗೆ ದಾಖಲು
ಡಿಸೆಂಬರ್ 18 ರಂದು ರಾವತ್ ಅವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಇದಾದ ನಂತರ ಅವರು ಹೋಂ ಐಸೋಲೇಷನ್ನಲ್ಲಿದ್ದರು.
ಭಾನುವಾರ ಸಂಜೆ ಸ್ವಲ್ಪಮಟ್ಟಿನ ಜ್ವರ ಕಾಣಿಸಿಕೊಂಡ ಬೆನ್ನಲ್ಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲು ಸಲಹೆ ನೀಡಿದ್ದೆವು. ಅವರ ಆರೋಗ್ಯ ಚೆನ್ನಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಆಸ್ಪತ್ರೆಗೆ ದಾಖಲು ಮಾಡಿಕೊಳ್ಳಲಾಗಿದೆ ಎಂದು ಡೂನ್ ಆಸ್ಪತ್ರೆಯ ಕೋವಿಡ್-19 ನೋಡಲ್ ಅಧಿಕಾರಿ ಡಾ. ಅನುರಾಗ್ ಅಗರ್ವಾಲ್ ತಿಳಿಸಿದ್ದರು.