ಲಖನೌ(ಉತ್ತರ ಪ್ರದೇಶ): ಮಕ್ಕಳ ಮೇಲಿನ ದೌರ್ಜನ್ಯದ ಮತ್ತೊಂದು ಆಘಾತಕಾರಿ ಘಟನೆಯಲ್ಲಿ, ಉತ್ತರ ಪ್ರದೇಶದ ಅಲಿಗಡ್ ಜಿಲ್ಲೆಯಲ್ಲಿ ಅಪ್ರಾಪ್ತೆಗೆ ಕಿರುಕುಳ ನೀಡಿದ ಆರೋಪದ ಮೇಲೆ ಮಲತಾಯಿಯನ್ನು ಬಂಧಿಸಲಾಗಿದೆ.
ಜಿತೇಂದ್ರ ಕುಮಾರ್ ಶರ್ಮಾ ಎಂಬ ವ್ಯಕ್ತಿಯ ಪತ್ನಿ ನಿಧನರಾಗಿದ್ದು, ಅವರಿಗೆ ಮೂವರು ಪುತ್ರಿಯರು ಮತ್ತು ಓರ್ವ ಪುತ್ರನಿದ್ದಾನೆ. ಫೇಸ್ಬುಕ್ ಮೂಲಕ ಜಿತೇಂದ್ರ ಕುಮಾರ್ ಶರ್ಮಾಗೆ ಪರಿಚಯವಾದ ಮಹಿಳೆ ತಾನು ನರ್ಸ್ ಎಂದು ಹೇಳಿಕೊಂಡು, ಆಮಿಷವೊಡ್ಡಿ ವಿವಾಹವಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಕ್ಕಳಿಗೆ ಡ್ರಗ್ಸ್ ನೀಡುತ್ತಿದ್ದ ಮಹಿಳೆಯು ಅವರು ಪ್ರಜ್ಞಾಹೀನರಾಗಿದ್ದಾಗ ಕಿರುಕುಳ ನೀಡುತ್ತಿದ್ದಳು ಎನ್ನಲಾಗ್ತಿದೆ. ಈ ಕುರಿತು ಹಿರಿಯರು ನೀಡಿದ ದೂರಿನ ಮೇರೆಗೆ ಮಹಿಳೆಯನ್ನು ಬಂಧಿಸಲಾಗಿದೆ.
ಮೂಲಗಳ ಪ್ರಕಾರ, ಇದೇ ಮಹಿಳೆ ಈ ಹಿಂದೆ ಮೂರು ಬಾರಿ ವಿವಾಹವಾಗಿದ್ದಳು. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354 ಮತ್ತು ಪೊಕ್ಸೊ ಕಾಯ್ದೆಯಡಿ ಈಕೆಯ ವಿರುದ್ಧ ಪ್ರಕರಣ ದಾಖಲಾಗಿದೆ.