ETV Bharat / bharat

ಬೆಚ್ಚಿಬೀಳಿಸುವ ಘಟನೆ: ಪತ್ನಿಯ ರುಂಡ ಕತ್ತರಿಸಿ ಪೊಲೀಸ್​ ಠಾಣೆಗೆ ತಂದ ಪತಿ! - ಪತ್ನಿಯ ರುಂಡ ಕತ್ತರಿಸಿದ ಪತಿ

ಕೌಟುಂಬಿಕ ಕಲಹದ ಹಿನ್ನೆಲೆ, ಪತ್ನಿಯೊಂದಿಗೆ ಜಗಳವಾಡಿದ ಪತಿವೋರ್ವ ಸಿಟ್ಟಿನಲ್ಲಿ ಆಕೆಯ ರುಂಡವನ್ನೇ ಕತ್ತರಿಸಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

-man-beheads-wife
ಮಡದಿಯ ರುಂಡ ಕತ್ತರಿಸಿದ ಪತಿ
author img

By

Published : Oct 9, 2020, 1:18 PM IST

ಬಂಡಾ(ಉತ್ತರ ಪ್ರದೇಶ): ದಾಂಪತ್ಯದಲ್ಲಿನ ಕ್ಷುಲ್ಲಕ ಕಾರಣಕ್ಕೆ ಕಲಹ ಉಂಟಾದ ಹಿನ್ನೆಲೆ, ಪತ್ನಿ ಮೇಲೆ ಕುಪಿತಗೊಂಡ ಪತಿವೋರ್ವ ಆಕೆಯ ರುಂಡವನ್ನೇ ಕತ್ತರಿಸಿ ಪೊಲೀಸರ ಮುಂದೆ ಶರಣಾಗಿರುವ ಘಟನೆ ಜಿಲ್ಲೆಯ ನೇತಾರ ನಗರದಲ್ಲಿ ನಡೆದಿದೆ.

ಬಂಡಾದ ನೇತಾರ ನಗರದ ನಿವಾಸಿಯಾಗಿರುವ ಚಿನ್ನಾರ್ ಯಾದವ್ ಎಂಬಾತ ಇಂದು ಬೆಳಗ್ಗೆ 7.30ರ ಸುಮಾರಿಗೆ ಪತ್ನಿ ವಿಮ್ಲಾ (35) ಜೊತೆ ಜಗಳವಾಡಿದ್ದಾನೆ. ಕೌಟುಂಬಿಕ ಕಲಹ ವಿಕೋಪಕ್ಕೆ ತಿರುಗಿದ್ದು, ಹೆಂಡತಿ ಮಾತಿಗೆ ಕೋಪಗೊಂಡ ಗಂಡ ಸ್ಥಳದಲ್ಲಿದ್ದ ಹರಿತವಾದ ಆಯುಧದಿಂದ ಆಕೆಯ ಶಿರವನ್ನೇ ತುಂಡರಿಸಿಬಿಟ್ಟಿದ್ದಾನೆ. ಬಳಿಕ ಪತ್ನಿಯ ರುಂಡವನ್ನು ಕೊಂಡೊಯ್ದು ಪೊಲೀಸ್​ ಠಾಣೆ ಮುಂದಿಟ್ಟಿದ್ದಾನೆ. ಕೋಪದಿಂದ ತನ್ನ ಮಡದಿಯನ್ನು ಕೊಲೆಗೈದಿರುವುದಾಗಿ ಒಪ್ಪಿಕೊಂಡಿದ್ದಾನೆ.

ಬಾಬೆರು ಪೊಲೀಸರು ಆರೋಪಿ ಯಾದವ್‌ನನ್ನು ಬಂಧಿಸಿ ಕೊಲೆಗೆ ಬಳಸಿದ ಆಯುಧವನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಸಂತ್ರಸ್ತೆಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಮಹೇಂದ್ರ ಪ್ರತಾಪ್ ಸಿಂಗ್ ಚೌಹಾಣ್​ ತಿಳಿಸಿದ್ದಾರೆ.

ಆರೋಪಿ ಚಿನ್ನಾರ್​ ತುಂಡರಿಸಿದ ತಲೆ ಹಿಡಿದುಕೊಂಡು ರಸ್ತೆಯಲ್ಲಿ ಸಾಗುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.