ಹಾಲು, ಮೊಸರು, ಮಜ್ಜಿಗೆ ಯಾರ ಮನೆಯಲ್ಲಿ ಇರಲ್ಲ ಹೇಳಿ. ನಮ್ಮ ದೇಶದಲ್ಲಿ ಹಾಲು ಹಾಗೂ ಅದರ ಉತ್ಪನ್ನಗಳ ಬಳಕೆ ಅದು ಅನಾದಿ ಕಾಲದಿಂದಲೂ ಬಂದಂತಹ ಸಂಪ್ರದಾಯದಂತೆ ಆಗಿದೆ. ಹಾಲು ಹಾಗೂ ಹಾಲಿನ ಉತ್ಪನ್ನಗಳು ಕಿರಿಯರಿಂದ ಹಿಡಿದು ವಯಸ್ಸಾದವರಿಗೆ ಸಮಾನ ಪೋಷಣೆಯನ್ನು ನೀಡುತ್ತದೆ.
ಆದ್ರೆ, ಇತ್ತೀಚಿನ ದಿನಗಳಲ್ಲಿ ಹಾಲು ನೈಜತೆಯನ್ನು ಕಳೆದುಕೊಳ್ಳುತ್ತಿದೆ. ತಾಜಾ ಹಾಲೆಂಬುದು ಮಾರುಕಟ್ಟೆಯಲ್ಲಿ ಸಿಗುವುದೇ ಅಪರೂಪವಾಗಿಬಿಟ್ಟಿದೆ. ಹಾಲನ್ನು ಪಾಶ್ಚೀಕರಿಸಿದ ನಂತರ ಅದರಿಂದ ಮೊಸರು, ಮಜ್ಜಿಗೆ ತಯಾರಿಸಲಾಗುತ್ತಿದೆ. ಆಯುರ್ವೇದದಲ್ಲಿ ವಿವರಿಸಿರುವಂತೆ ಹಾಲಿನ ಗುಣಲಕ್ಷಣಗಳು ಇಂದು ಸಿಗುತ್ತಿಲ್ಲ ಅಂತಾರೆ ಆಯುರ್ವೇದ ಪ್ರಾಧ್ಯಾಪಕಿ ಡಾ. ರಾಜಲಕ್ಷ್ಮಿ ಮಾಧವಂ.
ಆಯುರ್ವೇದ ಪ್ರೊ. ರಾಜಲಕ್ಷ್ಮಿ ಹೇಳುವಂತೆ ಹಾಲು ಮತ್ತು ಮೊಸರು ಆರೋಗ್ಯಕರ ಜೀವನಕ್ಕೆ ಪ್ರಮುಖ ಆಹಾರವಾಗಿದೆ. ಆಯುರ್ವೇದದಲ್ಲಿ ಮೊಸರನ್ನು ದಾದಿ ಎನ್ನಲಾಗುತ್ತದೆ. ಮೊಸರು ನಮ್ಮ ಜೀರ್ಣಕಾರಿ ಶಕ್ತಿಯನ್ನು ಪೋಷಿಸಿ, ಸುಧಾರಿಸುತ್ತದೆ. ಅಷ್ಟೇ ಅಲ್ಲದೆ, ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ಅನಿಯಮಿತ ಜ್ವರ, ಅತಿಸಾರ, ಸವೆತ, ಡಿಸೂರಿಯಾ, ನೆಗಡಿಯನ್ನು ಕಡಿಮೆ ಮಾಡುವಲ್ಲಿ ಉಪಯುಕ್ತವಾಗಿದೆ.
ಈ ಹಾಲಿನ ಉತ್ಪನ್ನಗಳ ಬಗ್ಗೆ ನೀವು ಇನ್ನಷ್ಟು ತಿಳಿದುಕೊಳ್ಳಬೇಕಂದ್ರೆ ನಿಮಗಾಗಿ ಇನ್ನಷ್ಟು ಮಾಹಿತಿ:
- ಬೊಜ್ಜು, ರಕ್ತಸ್ರಾವದ ಅಸ್ವಸ್ಥತೆ, ಉರಿಯೂತದ ಸ್ಥಿತಿಯಲ್ಲಿ ಮೊಸರಿನ ಸೇವನೆ ಬೇಡ.
- ಹೈಪರ್ ಆ್ಯಸಿಡಿಟಿ ಮತ್ತು ಜಠರದುರಿ ಇದ್ದಲ್ಲಿ ಹುಳಿ ಮೊಸರನ್ನು ತಪ್ಪಿಸಿ. ಸಾಧ್ಯವಿಲ್ಲವೆಂದರೆ ಹುಳಿ ಮೊಸರಿಗೆ ಸ್ವಲ್ಪ ಸಕ್ಕರೆ ಸೇರಿಸಿ ಸೇವಿಸಿ.
- ಯಾವುದೇ ಕಾರಣಕ್ಕೂ ಮೊಸರನ್ನು ಬಿಸಿ ಮಾಡಬೇಡಿ. ಇದರಲ್ಲಿರುವ ಉಪಯುಕ್ತ ಬ್ಯಾಕ್ಟೀರಿಯಾವನ್ನು ಉಷ್ಣತೆಯು ನಾಶಪಡಿಸುತ್ತದೆ.
- ಸಿಹಿ ಮೊಸರು ದೇಹದ ಕೊಬ್ಬು ಮತ್ತು ಕಫವನ್ನು ಹೆಚ್ಚಿಸುವ ವಾತ ಹಾಗೂ ಪಿತ್ತವನ್ನು ಶಮನಗೊಳಿಸುತ್ತದೆ.
- ಹುಳಿ ಮೊಸರು ಜೀರ್ಣಕಾರಿ ಉರಿ, ಪಿತ್ತ ಹಾಗೂ ಕಫವನ್ನು ಹೆಚ್ಚಿಸುತ್ತದೆ.
- ಆಡು(ಮೇಕೆ) ಹಾಲಿನಿಂದ ತಯಾರಿಸಿದ ಮೊಸರು ದೇಹದ ಎಲ್ಲಾ ತೊಂದರೆಗಳನ್ನು ಸಮತೋಲನಗೊಳಿಸುತ್ತದೆ. ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಅದರೊಂದಿಗೆ ಉಸಿರಾಟದ ಕಾಯಿಲೆಗಳಿಗೂ ಉಪಯುಕ್ತವಾಗಿದೆ.
- ಇನ್ನು ಎಮ್ಮೆ ಹಾಲಿನಿಂದ ತಯಾರಿಸಿದ ಮೊಸರು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ.
ರಾತ್ರಿಯ ಮೊಸರು ಸೇವನೆ:
- ರಾತ್ರಿಯಲ್ಲಿ ಮೊಸರು ಸೇವನೆಯನ್ನು ತಪ್ಪಿಸಬೇಕು. ಏಕೆಂದರೆ ಅದು ದೇಹದಲ್ಲಿನ ನಾಳಗಳನ್ನು ನಿರ್ಬಂಧಿಸಬಹುದು (ಸ್ರೋಟಾಸ್)
- ನೀವು ರಾತ್ರಿ ಮೊಸರು ತಿನ್ನಲು ಬಯಸಿದರೆ ಅದಕ್ಕೆ ತುಪ್ಪ, ಸಕ್ಕರೆ, ಜೇನುತುಪ್ಪ, ಹೆಸರು ಅಥವಾ ನೆಲ್ಲಿಕಾಯಿ ಅಥವಾ ಒಂದು ಚಿಟಿಕೆ ಕರಿಮೆಣಸಿನ ಪುಡಿ ಸೇರಿಸಿ ಸೇವಿಸಿ.
- ಮಳೆಗಾಲ, ಬೇಸಿಗೆ ಮತ್ತು ವಸಂತ ಋತುಗಳಲ್ಲಿ ಹುಳಿ ಮೊಸರು ತೆಗೆದುಕೊಳ್ಳುವುದು ಆರೋಗ್ಯಕ್ಕೆ ಹಾನಿಕಾರಕ.
- ಅಪೂರ್ಣವಾಗಿ ತಯಾರಾದ ಮೊಸರನ್ನು ಸೇವಿಸುವುದರಿಂದ ಇದು ಮಧುಮೇಹಕ್ಕೆ ಹಾದಿ ಮಾಡಿಕೊಡುತ್ತದೆ.
ಮಜ್ಜಿಗೆ:
ಆಯುರ್ವೇದದಲ್ಲಿ ತಕ್ರ ಎಂದು ಕರೆಯಲ್ಪಡುವ ಮಜ್ಜಿಗೆ ಕೂಡಾ ಆರೋಗ್ಯಕ್ಕೆ ಉತ್ತಮವಾಗಿದೆ. ಹಾಲಿನಿಂದ ಮೊಸರಾದ ನಂತರ ಅದನ್ನು ಕಡೆದು ಬೆಣ್ಣೆ ತೆಗೆದು ಬಳಿಕ ಉಳಿಯುವ ದ್ರವವೇ ಮಜ್ಜಿಗೆ.
ಆಯುರ್ವೇದದಲ್ಲಿ ಒಂದು ಮಾತಿದೆ.. ಮಕರಂದ (ಅಮೃತ) ದೇವರಿಗೆ, ಮಜ್ಜಿಗೆ ಮಾನವರಿಗೆ ಎಂದು. ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಹಾಗೂ ಉರಿಯೂತವನ್ನು ಕಡಿಮೆ ಮಾಡುತ್ತದೆ.
- ಕರುಳಿನ ಸಹಲಕ್ಷಣಗಳು, ಕ್ರೋನ್ಸ್ ಕಾಯಿಲೆ, ಮಧುಮೇಹ, ಬೊಜ್ಜು ಇತ್ಯಾದಿ ರೋಗಿಗಳಿಗೆ ಮಜ್ಜಿಗೆಯನ್ನು ನೀಡಬಹುದು.
- ಮಜ್ಜಿಗೆ ಪೊಟ್ಯಾಶಿಯಮ್, ಕ್ಯಾಲ್ಸಿಯಂ, ರಂಜಕ, ವಿಟಿಬಿ 12, ರಿಬೋಫ್ಲಾವಿನ್ ಮತ್ತು ಪ್ರೋಬಯಾಟಿಕ್‌ಗಳು ಸಮೃದ್ಧವಾಗಿರುವ ಮೂಲವಾಗಿದೆ.
- ಮಜ್ಜಿಗೆಯ ದೈನಂದಿನ ಸೇವನೆಯಿಂದ ವಯೋಸಹಜ ಕಾಯಿಲೆಯನ್ನು ದೂರ ಮಾಡುತ್ತದೆ. ಅಲ್ಲದೆ ಪೋಷಣೆಯನ್ನೂ ಸುಧಾರಿಸುತ್ತದೆ.
- ಮಜ್ಜಿಗೆಯನ್ನು ಸಂಪೂರ್ಣವಾಗಿ ಬೆಣ್ಣೆ ತೆಗೆದು, ಅರ್ಧ ಬೆಣ್ಣೆ ತೆಗೆದು ಅಥವಾ ಬೆಣ್ಣೆಯೊಂದಿಗೂ ತೆಗೆದುಕೊಳ್ಳಬಹುದು. ಇದು ವ್ಯಕ್ತಿಯ ಜೀರ್ಣ ಶಕ್ತಿಯನ್ನು ಹೆಚ್ಚಿಸುತ್ತದೆ.
- ಬೇಸಿಗೆಯಲ್ಲಿ ಹುಳಿ ಮಜ್ಜಿಗೆ, ಬೆಣ್ಣೆ ಹಾಲಿನ ಸೇವನೆಯನ್ನು ತಪ್ಪಿಸಬೇಕು.
- ಮಜ್ಜಿಗೆಯನ್ನು ನಿಯಮಿತವಾಗಿ ಸೇವಿಸುವುದರಿಂದ ಮಲಬದ್ಧತೆಯನ್ನು ಗುಣಪಡಿಸುತ್ತದೆ.
ಮೊಸರು ಮತ್ತು ಮಜ್ಜಿಗೆ ಎರಡೂ ಹಾಲಿನ ಉತ್ಪನ್ನಗಳಾಗಿವೆ. ಇವೆರಡೂ ಒಂದೇ ಪೋಷಕಾಂಶಗಳು ಹಾಗೂ ಒಂದೇ ಸಂಯೋಜನೆಯನ್ನು ಹೊಂದಿವೆ. ಆದರೂ ಅದರ ಸಂಗ್ರಹಣೆ, ಸಂರಕ್ಷಿತ ಹಾಲಿನ ಪರಿಣಾಮಕಾರಿತ್ವದಲ್ಲಿ ಬದಲಾಗಬಹುದು.