ಹವಾಯಿ ಹೊನಳುನಲ್ಲಿ ನಡೆದ ಡಿಕೆಐ-ಎಪಿಸಿಎಸ್ಎಸ್ (ಡೇನಿಯಲ್ ಕೆ ಇನೌಯೆ- ಏಷ್ಯಾ ಪೆಸಿಫಿಕ್ ಸೆಂಟರ್ ಫಾರ್ ಸೆಕ್ಯುರಿಟಿ ಸ್ಟಡೀಸ್) ಏಷ್ಯಾ-ಪೆಸಿಪಕ್ ಭದ್ರಾತಾ ಅಧ್ಯಯನ ಕೇಂದ್ರ ಆಯೋಜಿಸಿದ್ದ 25 ನೇ ವಾರ್ಷಿಕೋತ್ಸವದ ವರ್ಚುವಲ್ ಸಭೆಯ ಪ್ರಮುಖ ಭಾಷಣಕಾರರಾಗಿ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಡಾ. ಮಾರ್ಕ್ ಟಿ. ಎಸ್ಪರ್ ಮಾತನಾಡುತ್ತಿದ್ದರು. ರಕ್ಷಣಾ ಇಲಾಖೆಯ ಅಧೀನದಲ್ಲಿರುವ ಡಿಕೆಐ-ಎಪಿಸಿಎಸ್ಎಸ್ ಸಂಸ್ಥೆ 1995ರಲ್ಲಿ ಸ್ಥಾಪನೆಯಾಯಿತು.ಈ ಸಂಸ್ಥೆ ಇಂಡೊ ಪೆಸಿಫಿಕ್ ವಲಯದಲ್ಲಿ 100 ಕ್ಕೂ ಹೆಚ್ಚು ಮಿಲಿಟರಿ ಮತ್ತು ನಾಗರಿಕ ಭದ್ರತಾ ಸಾಧಕರ ನಡುವೆ ಸಂವಾದ ಹಾಗೂ ವಿಚಾರ ವಿನಿಮಯವನ್ನು ಉತ್ತೇಜಿಸುತ್ತದೆ.
ಮುಂದುವರಿದ ಮತ್ತು ಮುಕ್ತ ಇಂಡೋ-ಪೆಸಿಫಿಕ್ ಪ್ರಾದೇಶಿಕ ಮತ್ತು ಜಾಗತಿಕ ಕಾರ್ಯತಂತ್ರ ವಿಷಯದ ಕುರಿತು ಮಾತನಾಡಿದ ಎಸ್ಪರ್ “ನಮ್ಮ ಬಲಿಷ್ಟ ಪಾಲುದಾರರು ಮತ್ತು ಮಿತ್ರರಾಷ್ಟ್ರಗಳ ಜಾಲವು ನಮ್ಮ ಹತ್ರಿರದ ಶತ್ರುಗಳ ವಿರುದ್ದ ಅತ್ಯಂತ ಸಡಿಲಗೊಂಡಿದ್ದು ಮುಖ್ಯವಾಗಿ ಚೀನಾ ಅದನ್ನು ತನ್ನ ಹಿತಾಸಕ್ತಿಗೆ ಅನುಕೂಲಕರವಾಗಿ ಬಳಸಿಕೊಳ್ಳುತ್ರಿದೆ. ಅಲ್ಲದೆ ಚೀನಾ ತನಗೆ ಬೇಕಾದ ಹಾಗೆ ನಿಯಮಗಳನ್ನು ಮುರಿಯುತ್ತಿದೆ ಮತ್ತು ಇತರರ ವೆಚ್ಚದಲ್ಲಿ ಲಾಭ ಗಳಿಸುವುದು ಅದರ ಉದ್ದೇಶವಾಗಿದೆ ಎಂದು ಅವರು ಹೇಳಿದರು.” 2018ರಲ್ಲಿ ಹೊರಡಿಸಲಾದ ರಾಷ್ಟ್ರೀಯ ರಕ್ಷಣಾ ಕಾರ್ಯತಂತ್ರದ ಮಾರ್ಗಸೂಚಿಗಳ ಅಡಿಯಲ್ಲಿ ಅಮೆರಿಕವು ತನ್ನ ರಾಷ್ಟ್ರೀಯ ರಕ್ಷಣಾ ವಿಶ್ವವಿದ್ಯಾಲಯ ತನ್ನ ಪಠ್ಯಕ್ರಮದ 50 ಪ್ರತಿಶತವನ್ನು ಚೀನಾಕ್ಕೆ ಕೇಂದ್ರೀಕರಿಸಿದೆ ಮತ್ತು ಪಿಆರ್‌ಸಿ (ಚೀನಾ ಗಣತಂತ್ರ)ವು ನಮ್ಮ ಶಾಲೆಗಳು, ಕಾರ್ಯಕ್ರಮಗಳು ಮತ್ತು ತರಬೇತಿಗೆ ಬೆದರಿಕೆ ಒಡ್ಡಿದೆ ಎಂದು ಎಸ್ಪರ್ ಹೇಳಿದರು.
"ಚೀನಾದ ಕಮ್ಯುನಿಸ್ಟ್ ಪಕ್ಷದ ನಾಯಕತ್ವದಲ್ಲಿ, ಬೀಜಿಂಗ್ ಈ ಕೆಳಗಿನವುಗಳನ್ನು ಮಾಡುವ ಭರವಸೆಗಳನ್ನು ಪದೇ ಪದೆ ಹುಸಿಗೊಳಿಸಿದೆ. ಮೊದಲನೇಯದಾಗಿ ಅಂತಾರಾಷ್ಟ್ರೀಯ ನೀತಿಗೆ ಬದ್ಧವಾಗಿರುವುದು, ನೀತಿ-ನಿಯಮಗಳನ್ನು ಗೌರವಿಸುದು ಬಿಟ್ಟು ಅಂತಾರಾಷ್ಟ್ರೀಯ ವ್ಯವಸ್ಥೆಗಳು ಮತ್ತು ಮುಕ್ತ ಮಾರುಕಟ್ಟೆಗಳ ಲಾಭವನ್ನು ಪಡೆದುಕೊಳ್ಳವುದು ಅದರ ಉದ್ದೇಶವಾಗಿದೆ. ಎರಡನೇಯದು ಹಾಂಗ್ ಕಾಂಗ್‌ನ ಸ್ವಾಯತ್ತತೆಯನ್ನು ಉಳಿಸುವ ಭರವಸೆಗಳನ್ನು ಒಳಗೊಂಡಂತೆ ದಕ್ಷಿಣ ಚೀನಾ ಸಮುದ್ರದಲ್ಲಿ ರಕ್ಷಣೆ ವ್ಯವಸ್ಥೆ ಮಾಡಬಾರದು ಎಂದು ಅಂತಾರಾಷ್ಟ್ರೀಯ ಸಮುದಾಯಕ್ಕೆ ಮಾಡಿರುವ ಭರವಸೆ ಎಂದು ಎಸ್ಪರ್ ತಿಳಿಸಿದರು.
ಆದಾಗ್ಯೂ ಕೇವಲ ಇಂಡೋ-ಪೆಸಿಫಿಕ್ ಪ್ರದೇಶಕ್ಕೆ ಪ್ರತ್ಯೇಕವಾಗಿಲ್ಲ. ಪ್ರಪಂಚದಾದ್ಯಂತದ ನಮ್ಮ ಸಮಾನ ಮನಸ್ಸಿನ ಪಾಲುದಾರರು ಸಿ.ಸಿ.ಪಿ ಯ ವ್ಯವಸ್ಥಿತ ನಿಯಮ ಉಲ್ಲಂಘನೆ, ಸಾಲ ಬೆಂಬಲಿತ ಆರ್ಥಿಕ ದಬ್ಬಾಳಿಕೆ ಮತ್ತು ಇತರ ದುರುದ್ದೇಶಪೂರಿತ ಚಟುವಟಿಕೆಗಳನ್ನು ನಿಯಮಗಳ ಆಧಾರಿತ ಉಚಿತ ಕ್ರಮವನ್ನು ದುರ್ಬಲಗೊಳಿಸಲು ಎಲ್ಲಾ ಗಾತ್ರದ ರಾಷ್ಟ್ರಗಳಿಗೆ ಪ್ರಯೋಜನವನ್ನು ನೀಡುತ್ತಿದ್ದಾರೆ.
ಬೀಜಿಂಗ್‌ನ ಸ್ವಯಂ ವರ್ತನೆ ಕೇವಲ ಇಂಡೋ-ಪೆಸಿಫಿಕ್ ಪ್ರದೇಶಕ್ಕೆ ಮಾತ್ರ ಸೀಮಿತವಾಗಿಲ್ಲ. ಪ್ರಪಂಚದಾದ್ಯಂತದ ನಮ್ಮ ಸಮಾನ ಮನಸ್ಸಿನ ಪಾಲುದಾರರಿಗೆ ಇದರ ಅನುಭವ ಆಗಿದ್ದು ಚೀನಾದ ಕಮ್ಯುನಿಸ್ಟ್ ಪಕ್ಷವು ನಿಯಮಗಳ ಆಧಾರದ ಮೇಲೆ ಉಚಿತ ಕ್ರಮಗಳನ್ನು ದುರ್ಬಲಗೊಳಿಸಲು ಚೀನಾ ದೇಶ ಒಳಗೊಂಡಂತೆ ಎಲ್ಲಾ ಘಾತ್ರದ ದೇಶಗಳಿಗೆ ಸಹಾಯ ಹಸ್ತ ಚಾಚುತ್ತಿದೆ. ಇದನ್ನು ಸಾಧಿಸಲು ಸಿ.ಸಿ.ಪಿ ಯು ವ್ಯವಸ್ಥಿತ ನಿಯಮ ಉಲ್ಲಂಘನೆ, ಸಾಲ ಬೆಂಬಲಿತ ಆರ್ಥಿಕ ದಬ್ಬಾಳಿಕೆ ಮತ್ತು ಇತರ ದುರುದ್ದೇಶ ಪೂರಿತ ಚಟುವಟಿಕೆಗಳ ಮೊರೆ ಹೋಗಿದೆ.
ಟ್ರಂಪ್ ಆಡಳಿತದ ಉನ್ನತ ಸಚಿವರು ಚೀನಾದ ಮಿಲಿಟರಿ ಪಿಎಲ್‌ಎ (ಪೀಪಲ್ಸ್ ಲಿಬರೇಶನ್ ಆರ್ಮಿ) ಒಂದು ರಾಷ್ಟ್ರ ಅಥವಾ ಅದರ ಸಂವಿಧಾನಕ್ಕೆ ಸೇವೆ ಸಲ್ಲಿಸುತ್ತಿಲ್ಲ, ಆದರೆ ರಾಜಕೀಯ ಘಟಕಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಆರೋಪಿಸಿದರು. “ಇದಲ್ಲದೆ ಪಿಆರ್‌ಸಿಯ ಅಸ್ಥಿರಗೊಳಿಸುವ ಕ್ರಮಗಳು ಅದರ ವಿಧ್ವಂಸಕ ರಾಜಕೀಯ ಮತ್ತು ಆರ್ಥಿಕ ಚಟುವಟಿಕೆಯನ್ನು ಮೀರಿವೆ" ಎಂದು ರಕ್ಷಣಾ ಸಚಿವರು ಹೇಳಿದರು. ಮುಂದುವರಿದು "ತನ್ನ ನಿಗ್ರಹಿಸುವ ಕಾರ್ಯಸೂಚಿಯನ್ನು ಮುನ್ನಡೆಸಲು ಪೀಪಲ್ಸ್ ಲಿಬರೇಶನ್ ಆರ್ಮಿ ಶತಮಾನದ ಮಧ್ಯಭಾಗದಲ್ಲಿ ವಿಶ್ವ ದರ್ಜೆಯ ಮಿಲಿಟರಿಯನ್ನು ಸಾಧಿಸಲು ಆಕ್ರಮಣಕಾರಿ ಆಧುನೀಕರಣ ಯೋಜನೆಯನ್ನು ಮುಂದುವರಿಸಿದೆ" ಎಂದರು.
ಇದು ನಿಸ್ಸಂದೇಹವಾಗಿ ದಕ್ಷಿಣ ಮತ್ತು ಪೂರ್ವ ಚೀನಾ ಸಮುದ್ರಗಳಲ್ಲಿ ಪಿಎಲ್‌ಎ ತನ್ನ ಪ್ರಚೋದನಕಾರಿ ನಡೆಯ ಮೂಲಕ ತನ್ನ ಶಕ್ತಿಯನ್ನು ಹೆಚ್ಚಿಸಿಕೊಳ್ಳುತ್ತದೆ ಮತ್ತು ಬೇರೆ ಎಲ್ಲಾ ಪ್ರದೇಶಗಳಲ್ಲಿಯೂ ಕೂಡ ಚೀನಾ ಸರ್ಕಾರವು ತನ್ನ ಪರಿಗಣಿತ ಹಿತಾಸಕ್ತಿಗಳಿಗೆ ನಿರ್ಣಾಯಕವೆಂದು ಭಾವಿಸಿದೆ ” ಎಂದು ರಕ್ಷಣಾ ಕಾರ್ಯದರ್ಶಿ ಹೇಳಿದರು.
ಇಂಡೋ ಪೆಸಿಫಿಕ್ ಜಿಡಿಪಿಯ 60 ಪ್ರತಿಶತಕ್ಕಿಂತ ಹೆಚ್ಚಿನದನ್ನು ಹೊಂದಿದೆ ಎಂದು ಡಾ. ಎಸ್ಪರ್ ಒತ್ತಿ ಹೇಳಿದ್ದಾರೆ ಮತ್ತು ಇದು 6 ಪರಮಾಣು ರಾಷ್ಟ್ರಗಳಿಗೆ ನೆಲೆಯಾಗಿದೆ ಮತ್ತು ವಿಶ್ವದ 10 ಅತಿದೊಡ್ಡ ಸುಸಜ್ಜಿತ ಸೈನ್ಯಗಳಲ್ಲಿ 7 ಸೈನ್ಯಗಳು ಇಂಡೊ- ಪೆಸಿಫಿಕ್ ವಲಯದಲ್ಲಿವೆ. "ಇಂಡೋ- ಪೆಸಿಫಿಕ್ ದೊಡ್ಡ ಶಕ್ತಿ ಕೇಂದ್ರವಾಗಿ ಚೀನಾದ ಜೊತೆ ಸ್ಪರ್ಧೆಯಡ್ಡಿದೆ" ಎಂದು ಎಸ್ಪರ್ ಹೇಳಿದರು. ಈ ವಲಯದಲ್ಲಿ ಅಮೆರಿಕ ಮತ್ತು ಅದರ ಪಾಲುದಾರರು ಮತ್ತು ಮಿತ್ರರಾಷ್ಟ್ರಗಳು ಮತ್ತು ಸಣ್ಣ ರಾಷ್ಟ್ರಗಳ ನಡುವೆ ನಿಕಟ ಹೊಂದಾಣಿಕೆ ಅಗತ್ಯವಾಗಿದೆ ಎಂಬುದನ್ನು ಸ್ಪಷ್ಟಪಡಿಸಿದರು.
21 ನೇ ಶತಮಾನದಲ್ಲಿ ಅಮೆರಿಕದೊಂದಿಗಿನ ಭಾರತದ ಸಂಬಂಧ ಅತ್ಯಂತ ಪರಿಣಾಮಕಾರಿಯಾದದ್ದು ಎಂದು ಹೇಳುವ ಎಸ್ಪರ್, ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ ಉದ್ವಿಗ್ನತೆಯ ಪ್ರಶ್ನೆಗೆ ಉತ್ತರವಾಗಿ ಇದನ್ನು ವಿಶಿಷ್ಟವಾದ ‘ಚೀನೀ ಕೆಟ್ಟ ನಡವಳಿಕೆ’ ಎಂದು ಉಲ್ಲೇಖಿಸಿದ್ದಾರೆ. “ನಾನು ಚೀನಾದಲ್ಲಿನ ಈ ಉದ್ವಿಗ್ನತೆಗಳ ಬಗ್ಗೆ ಇತ್ತಿಚಿನ ಮಾತುಕತೆಗಳಲ್ಲದೆ ಭಾರತದ ರಕ್ಷಣಾ ಸಚಿವರೊಂದಿಗೆ ಹಲವಾರು ಬಾರಿ ಮಾತನಾಡಿದ್ದೇನೆ. ಕರೋನಾ ವೈರಸ್ ಅನ್ನು ಚೀನಾ ಹೇಗೆ ಬಳಸಿಕೊಳ್ಳುತ್ತದೆ ಮತ್ತು ಲಾಭ ಪಡೆಯುತ್ತದೆ ಎಂಬುದಕ್ಕೆ ಇದು ಮತ್ತೊಂದು ಉದಾಹರಣೆಯಾಗಿದೆ ಮತ್ತು ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಲಾಭ ಮಾಡಿಕೊಳ್ಳಲು ಜಾಗತಿಕವಾಗಿ ಏನು ಮಾಡುತ್ತಿದೆ ಜಗತ್ತಿಗೆ ತಿಳಿಯುತ್ತಿದೆ. ಅನಗತ್ಯವಾದ ಚೀನೀ ಕೆಟ್ಟ ನಡವಳಿಕೆಯ ಮತ್ತೊಂದು ಉದಾಹರಣೆ ಇಲ್ಲಿದೆ. ಗಡಿ ವಿವಾದ ಉಲ್ಬಣಗೊಳ್ಳುವುದನ್ನು ತಡೆಯಲು ಎರಡೂ ದೇಶಗಳು ಮಾತು ಕತೆಗೆ ಮುಂದಾಗಿರುವುದು ಉತ್ತಮ ಬೆಳವಣಿಗೆ ಎಂದು ಹೇಳಿದರು. ನಾವು ಅದನ್ನು ಬೆಂಬಲಿಸುತ್ತೇವೆ ಮತ್ರು ಇದೇ ಸಂದರ್ಭದಲ್ಲಿ ಭಾರತದ ಜೊತೆಗಿನ ನಮ್ಮ ಸಂಬಂಧವನ್ನು ಕೂಡ ಗಟ್ಟಿ ಗೊಳಿಸಲು ಪ್ರಯತ್ನಿಸುತ್ತೇವೆ ಎಂದು ಎಸ್ಪರ್ ಹೇಳಿದರು.
ಭಾರತ ಮತ್ತು ಅಮೆರಿಕದ ವಿದೇಶಾಂಗ ಮತ್ತು ರಕ್ಷಣಾ ಸಚಿವರ ಎರಡನೇ ಹಂತದ ಮಾತುಕತೆ ಮುಂದಿನ ಕೆಲವು ವಾರಗಳಲ್ಲಿ ಆನ್ ಲೈನ್ ಮುಲಕ ನಡೆಯುವ ಸಾಧ್ಯತೆ ಇದೆ. ಪಾಲುದಾರರು ಮತ್ತು ಮಿತ್ರರಾಷ್ಟ್ರಗಳ ಸಶಸ್ತ್ರ ಪಡೆಗಳನ್ನು ಬಲಪಡಿಸಲು, ಕಾರ್ಯಸಾಧ್ಯತೆಯನ್ನು ಹೆಚ್ಚಿಸಲು ಮತ್ತು ಸಮಯಕ್ಕೆ ನಿರ್ಣಾಯಕ ಆಯುಧವನ್ನು ಬಳಸಲು ಅಮೆರಿಕದ ವಿದೇಶಿ ರಕ್ಷಣಾ ಸಾಮಗ್ರಿ ಮಾರಾಟ ಯೋಜನೆಯಲ್ಲಿ ಸುಧಾರಣೆ ಮತ್ತು ಬದಲಾವಣೆ ತರಲಾಗಿದೆ ಎಂದು ಡಾ. ಎಸ್ಪರ್ ಹೇಳಿದರು. ಜಪಾನ್‌ಗೆ ಎಫ್ 35 ಹೆಲಿಕಾಪ್ಟರ್‌ಗಳು, ಸಮುದ್ರ ಸಮರ ದೋಣಿಗಳು ಮತ್ತು ಭಾರತಕ್ಕೆ ಅಪಾಚೆ ಯುದ್ದ ವಿಮಾನಗಳು ಮತ್ತು ತೈವಾನ್ ಗೆ ಎಫ್ 16 ಫೈಟರ್ ಜೆಟ್‌ಗಳನ್ನು ಸರಬರಾಜು ಮಾಡುವುದನ್ನು ಅವರು ಉದಾಹರಣೆಯಾಗಿ ಉಲ್ಲೇಖಿಸಿದರು.
ನಾವು 21 ನೇ ಶತಮಾನದ ಹೊಸ ಜಂಟಿ ಯುದ್ಧ ಹೋರಾಟದ ಪರಿಕಲ್ಪನೆಯನ್ನು ಅಭಿವೃದ್ಧಿಪಡಿಸುವ ಮೂಲಕ ಮತ್ತು ನಮ್ಮ ಕಾರ್ಯ ತಂತ್ರವನ್ನು ವ್ಯವಸ್ಥಿತವಾಗಿ ರೂಪಿಸುವ ಮೂಲಕ, ನಮ್ಮ ಯೋಜನೆ ನಮ್ಮ ಪಾಲುದಾರರಿಗೆ ಉಹೆ ಮಾಡಲು ಸಾಧ್ಯವಾದರೂ ನಮ್ಮ ವೈರಿಗಳಿಗೆ ಅದು ಊಹಿಸಲು ಕಷ್ಟಕರ ಆಗಬೇಕು. ಈ ಪ್ರಯತ್ನಗಳು ಭವಿಷ್ಯದ ಸಂಘರ್ಷಗಳಿಗೆ ನಮ್ಮ ಸೇನೆಯನ್ನು ಸಿದ್ಧಪಡಿಸುವುದರಿಂದ ನಾವು ಯುದ್ಧ ಮಾಡದೆಯೆ ಗೆಲುವು ಸಾಧಿಸುವಂತಾಗಬೇಕು ಎಂದು ಅವರು ವಿವರಿಸಿದರು.
ಪ್ರಾಸಂಗಿಕವಾಗಿ, ಸಕಷಿಣ ಚೀನಾ ಸಮುದ್ರ ಪ್ರದೇಶದಲ್ಲಿ ಚೀನಾ ದೇಶ ದುರುದ್ದೇಶ ಪೂರಿತ ಕ್ರಮಗಳಿಗೆ ಮುಂದಾದಾಗ ಅಮೆರಿಕದ ರಕ್ಷಣಾ ಇಲಾಖೆಯು ಚೀನಾ ಸ್ವಾಮ್ಯದ ಉದ್ಯಮಗಳು ಮತ್ತು ಕಾರ್ಯ ನಿರ್ವಾಹಕರಿಗೆ ನಿರ್ಬಂಧವನ್ನು ಹೇರಿತು. ತಮ್ಮ ಪಾಲುದಾರ ರಾಷ್ಟ್ರಗಳು ಚೀನೀ ಮಾರಾಟಗಾರರೊಂದಿಗೆ 5 ಜಿ ತಂತ್ರಜ್ಞಾನ ಕ್ಕೆ ಸಂಬಂಧಿಸಿದಂತೆ ಯಾವುದೇ ವ್ಯವಹಾರ ಮಡಬರದು ಎಂದು ಡಾ. ಎಸ್ಪರ್ ಇಲೊತ್ತಿ ಹೇಳಿದರು.
"ಅಮೆರಿಕ ಮತ್ತು ಅದರ ಮಿತ್ರ ರಾಷ್ಟ್ರಗಳು ಚೀನಾದ ಕುತಂತ್ರದಿಂದ ಕೂಡಿದ ಕ್ರಮಗಳು ಹಾಗೂ ತಮ್ಮ ತಂತ್ರಗಾರಿಕೆಯನ್ನು ನಿಷ್ಪಲಗೊಳಿಸುವ ಕ್ರಮಗಳು ಮುಖ್ಯವಾಗಿ 5ಜಿ ತಂತ್ರಜ್ಞಾನ ನಿರಾಕರಿಸುವ ಚೀನಾದ ನಿರ್ಧಾರದ ಬಗ್ಗೆ ನಾವು ನಿರ್ಣಾಯಕ ಕ್ರಮಗಳನ್ನು ಕೈಗೊಂಡಿದ್ದೇವೆ. ಜಪಾನ್, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಈ ಮೊದಲೇ ಚೀನಾದ ಈ ಕುತಂತ್ರಕ್ಲೆ ಬಲಿಯಾಗಿದ್ದವು.
ದೂರಸಂಪರ್ಕ ಮೂಲಸೌಕರ್ಯಕ್ಕೆ ಸಂಬಂಧಿಸಿದಂತೆ ಅವರ ಆಯ್ಕೆಗಳನ್ನು ಎಚ್ಚರಿಕೆಯಿಂದ ಪರಿಗಣಿಸಬೇಕು.ಜಾಗೆಯೇ ಚೀನಾದ ಬೆಂಬಲಿತ ಮಾರಾಟಗಾರರನ್ನು ಬಳಸಿಕೊಳ್ಉವಲ್ಲಿ ಬರಬಹುದಾದ ದೀರ್ಘಕಾಲೀನ ಸಾಮೂಹಿಕ ಅಪಾಯಗಳನ್ನು ತಿಳಿದುಕೊಳ್ಳಬೇಕು. ಈ ವಿಚಾರದಲ್ಲಿ ತನ್ನ ಪಾಲುದಾರ ರಾಷ್ಟ್ರಗಳು ಎಚ್ಚರಿಕೆಯ ಹೆಜ್ಜೆ ಇಡಬೇಕೆಂದು ಡಾ. ಎಸ್ಪರ್ ಒತ್ತಾಯಿಸಿದರು. ವಿಶ್ವ ಆರೋಗ್ಯ ಸಂಸ್ಥೆಯ ಜೊತೆಗೆ ತನ್ನ ಪಾರದರ್ಶಕತೆಯ ಕೊರತೆಯಿಂದಾಗಿ ಕರೋನಾ ವೈರಸ್ ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸುವ ಜಾಗತಿಕ ಪ್ರಯತ್ನಗಳಿಗೆ ಬೀಜಿಂಗ್ ಅಡ್ಡಿಯಾಗಿದೆ ಎಂದು ಅವರು ಆರೋಪಿಸಿದರು.