ETV Bharat / bharat

60 ರಾಷ್ಟ್ರಗಳ ತನ್ನ ಪ್ರಜೆಗಳನ್ನು ಕರೆಸಿಕೊಳ್ಳೋಕೆ ಅಮೆರಿಕ ಮುಂದು: ಭಾರತದ ಲಾಕ್​ಡೌನ್​ಗೆ ಶ್ಲಾಘನೆ - ಅಮೆರಿಕ

ಅಮೆರಿಕದಲ್ಲಿ ಈಗ ಸುಮಾರು 2 ಲಕ್ಷಕ್ಕೂ ಹೆಚ್ಚು ಕೊರೊನಾ ಸೋಂಕಿತರು ಪತ್ತೆಯಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಈ ವೇಳೆ ಸುಮಾರು 5 ಸಾವಿರ ಮಂದಿ ಸಾವನ್ನಪ್ಪಿದ್ದು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದರ ಜೊತೆಗೆ ಎಲ್ಲಾ ರಾಷ್ಟ್ರಗಳಲ್ಲಿರುವ ತನ್ನ ದೇಶದ ಪ್ರಜೆಗಳನ್ನು ಕರೆಸಿಕೊಳ್ಳೋಕೆ ಮುಂದಾಗಿದೆ.

US begins repatriation of its nationals from India
ತನ್ನ ಪ್ರಜೆಗಳನ್ನು ಕರೆಸಿಕೊಳ್ಳೋಕೆ ಅಮೆರಿಕ ಮುಂದು
author img

By

Published : Apr 2, 2020, 10:36 AM IST

ವಾಷಿಂಗ್ಟನ್ (ಅಮೆರಿಕ)​ : ಅಮೆರಿಕ ದೇಶ ಭಾರತದಲ್ಲಿರುವ ತನ್ನ ಪ್ರಜೆಗಳನ್ನು ವಾಪಸ್​ ಕರೆಸಿಕೊಳ್ಳಲು ತಯಾರಿ ನಡೆಸಿದೆ. ಇದಕ್ಕಾಗಿ ಭಾರತ ಸರ್ಕಾರದ ಸಹಾಯವನ್ನು ಕೇಳಿದೆ. ಭಾರತದಲ್ಲಿ ಈಗ ಸದ್ಯಕ್ಕೆ ಲಾಕ್​ಡೌನ್​ ಘೋಷಣೆಯಾಗಿದ್ದು ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಅಮೆರಿಕದ ರಾಜತಾಂತ್ರಿಕ ಅಧಿಕಾರಿಯೊಬ್ಬರು ಶ್ಲಾಘಿಸಿದ್ದಾರೆ.

ಭಾರತದಿಂದ ಮಾತ್ರವಲ್ಲದೇ ವಿಶ್ವದ ಸುಮಾರು 60 ರಾಷ್ಟ್ರಗಳಿಂದ ತನ್ನ ಪ್ರಜೆಗಳನ್ನು ಕರೆಸಿಕೊಳ್ಳಲು ತಯಾರಿ ನಡೆಸುತ್ತಿದೆ. ಸುಮಾರು 30 ಸಾವಿರ ಅಮೆರಿಕ ಪ್ರಜೆಗಳನ್ನು ಕರೆಸಿಕೊಳ್ಳಲು 350 ವಿಮಾನಗಳನ್ನು ಕೂಡಾ ಸಜ್ಜುಗೊಳಿಸಲಾಗುತ್ತಿದೆ. ಭಾರತದಲ್ಲಿ ಸುಮಾರು 170 ಅಮೆರಿಕನ್​ ಪ್ರಜೆಗಳನ್ನು ವಾಪಸ್​ ಕರೆಸಿಕೊಳ್ಳುವ ಪ್ರಕ್ರಿಯೆ ಶುರುಮಾಡಿದ್ದೇವೆ ಎಂದು ರಾಯಭಾರ ವ್ಯವಹಾರಗಳ ಪ್ರಿನ್ಸಿಪಲ್​ ಡೆಪ್ಯುಟಿ ಅಸಿಸ್ಟೆಂಟ್​ ಸೆಕ್ರೆಟರಿ ಇಯಾನ್​ ಬ್ರೌನ್ಲಿ ಕಾನ್ಫರೆನ್ಸ್​ ವೇಳೆ ತಿಳಿಸಿದ್ದಾರೆ.

ಇದರ ಜೊತೆಗೆ ಈ ವಾರದ ಕೊನೆಯಲ್ಲಿ ದೆಹಲಿ ಹಾಗೂ ಮುಂಬೈಗೆ ವಿಮಾನವನ್ನು ಕಳಿಸಲಿದ್ದು, ಭಾರತ ಸರ್ಕಾರ ಈ ವಿಚಾರದಲ್ಲಿ ಸಹಕಾರ ನೀಡುತ್ತಿದೆ. ಭಾರತಕ್ಕೆ ನಾವು ಧನ್ಯವಾದ ಅರ್ಪಿಸುತ್ತೇವೆ ಎಂದು ಬ್ರೌನ್ಲಿ ತಿಳಿಸಿದ್ದಾರೆ. ಆಫ್ರಿಕಾದ ಅಮೆರಿಕ ಪ್ರಜೆಗಳನ್ನು ವಾಪಸ್ ಕರೆಸಿಕೊಳ್ಳಲು ಸ್ವಲ್ಪ ದ್ವಂದ್ವಗಳಿವೆ. ಅಫ್ರಿಕಾದಲ್ಲಿ ವಾಯುಮಾರ್ಗವನ್ನು ರದ್ದು ಮಾಡಿರುವ ಕಾರಣದಿಂದ ಸ್ವಲ್ಪ ಅಡೆತಡೆಗಳಿವೆ ಎಂದಿದ್ದಾರೆ.

ಅಮೆರಿಕದಲ್ಲಿ ಈಗ ಸುಮಾರು 2 ಲಕ್ಷಕ್ಕೂ ಹೆಚ್ಚು ಕೊರೊನಾ ಸೋಂಕಿತರು ಪತ್ತೆಯಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಈ ವೇಳೆ ಸುಮಾರು 5 ಸಾವಿರ ಮಂದಿ ಸಾವನ್ನಪ್ಪಿದ್ದು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದರ ಜೊತೆಗೆ ಎಲ್ಲಾ ರಾಷ್ಟ್ರಗಳಲ್ಲಿರುವ ಅಮೆರಿಕ ಪ್ರಜೆಗಳನ್ನು ಕರೆಸಿಕೊಳ್ಳೋಕೆ ಮುಂದಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.