ಇಟಾವಾ, (ಉತ್ತರಪ್ರದೇಶ) : ಪೊಲೀಸರು ಎಲ್ಲೇ ಇದ್ದರೂ ಅವರ ಕರ್ತವ್ಯಪ್ರಜ್ಞೆ ಜಾಗೃತವಾಗಿರುತ್ತೆ. ಗಂಡಹೆಂಡ್ತಿ ಹೈವೇಯಲ್ಲಿ ಬೈಕ್‌ನಲ್ಲಿ ಸ್ಪೀಡಾಗಿ ಹೋಗ್ತಿದ್ದರು. ಹಾಗೇ ಹೋಗುವಾಗ ಬೈಕ್‌ನ ಹಿಂದಿನ ಭಾಗದಲ್ಲಿ ಬೆಂಕಿ ತಗುಲಿತ್ತು. ಆದರೆ, ಇದು ಬೈಕ್ ಮೇಲಿದ್ದ ದಂಪತಿಗೆ ತಿಳಿದಿರಲಿಲ್ಲ. ಒಂಚೂರು ಯಾಮಾರಿದ್ದರೂ ಎರಡು ಜೀವ ಬೆಂಕಿಗೆ ಆಹುತಿಯಾಗುತ್ತಿದ್ದವು. ಅಷ್ಟೊತ್ತಿಗೇ ಪೊಲೀಸರು ಬಂದು ಎರಡು ಜೀವ ಉಳಿಸಿರೋ ಘಟನೆ ಆಗ್ರಾ ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ನಡೆದಿದೆ.
ಆಗ್ರಾ ಎಕ್ಸ್‌ಪ್ರೆಸ್‌ವೇದಲ್ಲಿ ಬೈಕ್‌ವೊಂದು ಸಿಕ್ಕಾಪಟ್ಟೆ ಸ್ಪೀಡಾಗಿ ಹೋಗ್ತಾಯಿತ್ತು. ಬೈಕ್‌ನ ಹಿಂದೆ ಬೆಂಕಿ ಅದ್ಹೇಗೋ ತಗುಲಿಕೊಂಡಿತ್ತು. ಇದು ಬೈಕ್ ಚಲಾಯಿಸುತ್ತಿದ್ದ ಪತಿಗಾಗಲಿ ಇಲ್ಲ ಹಿಂಬದಿ ಸವಾರಳಾಗಿದ್ದ ಪತ್ನಿಗೂ ಗೊತ್ತಾಗಿರಲಿಲ್ಲ. ಆದರೆ, ಹೆದ್ದಾರಿಯಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸರಿಗೆ ಸುಟ್ಟ ವಾಸನೆ ಬರುತ್ತಾಯಿತ್ತು. ಆಗ ಎಲ್ಲಿಂದ ಈ ಸುಟ್ಟ ವಾಸನೆ ಬರುತ್ತಾಯಿದೆ ಗೊತ್ತಾಗಲಿಲ್ಲ. ಆದರೆ, ಆಗ್ರಾ ಎಕ್ಸ್‌ಪ್ರೆಸ್‌ವೇನಲ್ಲಿ ತೆರಳಿದಾಗ ಕೆಲ ನಿಮಿಷಗಳಲ್ಲಿ ಬೈಕ್‌ವೊಂದು ಕಣ್ಣೆದುರಿಗೆ ಬಿದ್ದಿತ್ತು. ಆ ಬೈಕ್‌ನ ಹಿಂದೆ ಬೆಂಕಿ ತಗುಲಿದ್ದು ಕಾಣಿಸಿತ್ತು.
ಬೈಕ್ ಓಡಿಸೋವಾತನಿಗೆ ಈ ಬಗ್ಗೆ ಯಾವುದೇ ಅರಿವು ಇರಲಿಲ್ಲ. ಪೊಲೀಸರು ತುರ್ತು ಹಾರ್ನ್ ಹಾಕಿದರೂ ಅದನ್ನ ಕೇಳಿಸಿಕೊಳ್ಳುವ ಸ್ಥಿತಿಯಲ್ಲಿ ಬೈಕ್ ಸವಾರ ಇರಲಿಲ್ಲ. 4 ಕಿ.ಮೀ ಸ್ಪೀಡಾಗಿ ಚೇಸ್ ಮಾಡಿ ಹೋದ ಪೊಲೀಸರು ಜೋರಾಗಿ ಕೂಗಿ ಬೈಕ್ ನಿಲ್ಲಿಸುವಂತೆ ಹೇಳಿದ್ದಾರೆ. ಕೊನೆಗೆ ಬೈಕ್ ನಿಲ್ಲಿಸಿದ್ದಾನೆ ಬೈಕ್ ಸವಾರ. ತಕ್ಷಣವೇ ಬೈಕ್‌ನ ಹಿಂದುಗಡೆಗಿದ್ದ ಬ್ಯಾಗ್‌ಗೆ ತಗುಲಿದ್ದ ಬೆಂಕಿ ನಂದಿಸಲಾಗಿದೆ. ಯಾಮಾರಿದ್ದರೆ ಬೈಕ್ ಸಂಪೂರ್ಣವಾಗಿ ಸುಟ್ಟು ಕರಕಲಾಗುವ ಸಾಧ್ಯತೆಯಿತ್ತು. ಆದರೆ, ಯುಪಿ ಪೊಲೀಸರ ಜಾಗರೂಕತೆಯಿಂದಾಗಿ 2 ಜೀವಗಳು ಬದುಕುಳಿದವು. ಅಷ್ಟೇ ಅಲ್ಲ, ಬೈಕ್ ಕೂಡ ಬೆಂಕಿಗೆ ಆಹುತಿಯಾಗದೆ ಬಚಾವಾಗಿದೆ. ಇದೇ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲಾಗಿದೆ. ಯುಪಿ ಪೊಲೀಸರ ಕರ್ತವ್ಯಪ್ರಜ್ಞೆಗೆ ನೆಟಿಜನ್ಸ್ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.