ETV Bharat / bharat

ದಿವ್ಯಾಂಗ ವ್ಯಕ್ತಿಗೆ ಥಳಿಸಿದ ಪೊಲೀಸ್ ಕಾನ್ಸ್​ಟೇಬಲ್ ಅಮಾನತು!

author img

By

Published : Sep 20, 2020, 10:40 PM IST

ವರದಿಗಳ ಪ್ರಕಾರ ಸಂತ್ರಸ್ತ ವ್ಯಕ್ತಿಯು ಇ-ರಿಕ್ಷಾ ಓಡಿಸುತ್ತಿದ್ದು, ರಸ್ತೆಯ ಪಕ್ಕದಲ್ಲಿ ನಿಂತಿದ್ದ ಪ್ರಯಾಣಿಕರನ್ನು ಕರೆದುಕೊಂಡು ಹೋಗಿದ್ದಕ್ಕಾಗಿ ಕಾನ್ಸ್​ಟೇಬಲ್ ಹಲ್ಲೆ ನಡೆಸಿ ನಿಂದಿಸಿದ್ದಾನೆ..

police
ಪೊಲೀಸ್

ಕನ್ನೌಜ್(ಉತ್ತರ ಪ್ರದೇಶ): ವಿಶೇಷ ಚೇತನ ವ್ಯಕ್ತಿಯನ್ನು ಥಳಿಸಿದ ಉತ್ತರಪ್ರದೇಶದ ಪೊಲೀಸ್ ಕಾನ್ಸ್​ಟೇಬಲ್​ ಒಬ್ಬರನ್ನು ಶನಿವಾರ ತಡರಾತ್ರಿ ಅಮಾನತುಗೊಳಿಸಲಾಗಿದೆ.

ಇಲ್ಲಿನ ಕನ್ನೌಜ್ ಪೊಲೀಸರು, ಕಾನ್ಸ್​ಟೇಬಲ್ ಅಮಾನತುಗೊಂಡಿರುವ ವಿಚಾರವನ್ನು ಟ್ವಿಟರ್​ ಖಾತೆಯ ಮೂಲಕ ತಿಳಿಸಿದ್ದಾರೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಈ ಕ್ರಮ ಕೈಗೊಳ್ಳಲಾಗಿದೆ.

ವೈರಲ್​ ಆದ ವಿಡಿಯೋದಲ್ಲಿ, ಕನ್ನೌಜ್‌ನ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಕಾನ್ಸ್​ಟೇಬಲ್ ದಿವ್ಯಾಂಗ ವ್ಯಕ್ತಿಯ ತಲೆಗೆ ಹೊಡೆದು ನೆಲಕ್ಕೆ ತಳ್ಳುವುದು ಕಂಡು ಬರುತ್ತದೆ. ವರದಿಗಳ ಪ್ರಕಾರ, ಸಂತ್ರಸ್ತ ವ್ಯಕ್ತಿಯು ಇ-ರಿಕ್ಷಾ ಓಡಿಸುತ್ತಿದ್ದು, ರಸ್ತೆಯ ಪಕ್ಕದಲ್ಲಿ ನಿಂತಿದ್ದ ಪ್ರಯಾಣಿಕರನ್ನು ಕರೆದುಕೊಂಡು ಹೋಗಿದ್ದಕ್ಕಾಗಿ ಕಾನ್ಸ್​ಟೇಬಲ್ ಹಲ್ಲೆ ನಡೆಸಿ ನಿಂದಿಸಿದ್ದಾನೆ ಎಂದು ತಿಳಿದು ಬಂದಿದೆ.

ಈ ಬಗ್ಗೆ ಮಾತನಾಡಿರುವ ಕನ್ನೌಜ್ ಪೊಲೀಸ್ ವರಿಷ್ಠಾಧಿಕಾರಿ ಅಮರೇಂದ್ರ ಪ್ರತಾಪ್‌ ಸಿಂಗ್, ಕಾನ್ಸ್​ಟೇಬಲ್​ನನ್ನು ಕರ್ತವ್ಯದಿಂದ ತೆಗೆದು ಹಾಕಲಾಗಿದೆ. ಘಟನೆ ಕುರಿತು ಹೆಚ್ಚಿನ ತನಿಖೆಗೆ ಆದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.