ಬಂಡಾ(ಉತ್ತರಪ್ರದೇಶ): ಶೀತ, ಕೆಮ್ಮು ಬಾಧೆಯಿಂದ ಬಳಲುತ್ತಿದ್ದ ವ್ಯಕ್ತಿ ತನಗೆ ಕೊರೊನಾ ಬಂದಿದೆಯೇನೋ ಎಂಬ ಭಯ, ಆತಂಕದಿಂದ ಪ್ರಾಣ ಕಳೆದುಕೊಂಡಿದ್ದಾನೆ.
ಉತ್ತರಪ್ರದೇಶದ ಬಂಡಾ ಪ್ರದೇಶದ ಜಮಾಲ್ಪುರ್ ಗ್ರಾಮದ 35 ವರ್ಷದ ವ್ಯಕ್ತಿಯಲ್ಲಿ ಶೀತ, ಕೆಮ್ಮು ಕಾಣಿಸಿಕೊಂಡಿತ್ತು. ಈ ಬಗ್ಗೆ ಸಹೋದರ ಮಾವ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಮನೆಗೆ ಬಂದ ಪೊಲೀಸರು ಆತನಿಗೆ ಎರಡು ವಾರಗಳ ಕಾಲ ಮನೆಯ ರೂಂನಲ್ಲಿ ಪ್ರತ್ಯೇಕವಾಗಿ ಕಾಲ ಕಳೆಯುವಂತೆ ಕಟ್ಟುನಿಟ್ಟಾಗಿ ತಿಳಿಸಿದ್ದಾರೆ.
ಈ ವಿಚಾರ ತಿಳಿದ ಗ್ರಾಮಸ್ಥರು ಆತನಿಗೆ ಕೋವಿಡ್ ಇದೆ ಎಂದು ಗಾಳಿ ಮಾತು ಹಬ್ಬಿಸಲು ಶುರು ಮಾಡಿದ್ದಾರೆ. ಈ ಬೆಳವಣಿಗೆಯಿಂದ ತನಗೆ ಕೊರೊನಾ ಬಂದಿದೆಯೇನೋ ಎಂದು ಶಂಕಿಸಿದ ರಾಜೇಂದ್ರ ಎಂಬ ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿದ್ದಾನೆ.