ಗೋರಖ್ಪುರ: ದೈಹಿಕ ಸಂಪರ್ಕಕ್ಕೆ ಒಪ್ಪದ ಪತ್ನಿಯನ್ನು ಕೊಂದ ವ್ಯಕ್ತಿಯೊಬ್ಬ, ತನ್ನ ಗುಪ್ತಾಂಗವನ್ನೂ ಕತ್ತರಿಸಿಕೊಂಡ ಘಟನೆ ಉತ್ತರ ಪ್ರದೇಶದ ಸಿದ್ಧಾರ್ಥನಗರ ಜಿಲ್ಲೆಯಲ್ಲಿ ನಡೆದಿದೆ.
ಕಕ್ರ ಪೊಖರ್ ಗ್ರಾಮದ ಅನ್ವರುಲ್ಲಾ ಹಸನ್ (24) ಎಂಬಾತ ಪತ್ನಿ ಮೆಹ್ನಾಜ್(21)ಳ ಕತ್ತು ಹಿಸುಕು ಕೊಂದಿದ್ದಾನೆ ಎಂದು ಆರೋಪಿಸಲಾಗಿದೆ. ಹಸನ್ ತನ್ನ ಗುಪ್ತಾಂಗವನ್ನು ಕತ್ತರಿಸಿಕೊಂಡಿರುವುದರಿಂದ ಗೋರಖ್ಪುರದ ಬಾಬಾ ರಾಘವ್ ದಾಸ್ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಘಟನೆ ನಡೆದ ದಿನ ಮೆಹ್ನಾಜ್ಳು ಜೋರಾಗಿ ಕಿರುಚಾಡುತ್ತಿದಿದ್ದು ನೆರೆಮನೆಯವರಿಗೆ ಕೇಳಿಸಿದೆ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿ, ಮನೆಗೆ ತೆರಳಿ ನೋಡಿದಾಗ ಆಕೆಯೊಂದಿಗೆ, ಹಸನ್ ಸಹ ರಕ್ತದ ಮಡುವಿನಲ್ಲಿ ಬಿದ್ದಿದ್ದ. ಇಬ್ಬರನ್ನೂ ತಕ್ಷಣ ಆಸ್ಪತ್ರೆಗೆ ರವಾನಿಸಲಾಗಿತ್ತು.
ಕಳೆದ ವರ್ಷವಷ್ಟೇ ಮದುವೆಯಾಗಿದ್ದ ಜೋಡಿ ನಡುವೆ ದೈಹಿಕ ಸಂಪರ್ಕ ಹೊಂದುವ ಸಲುವಾಗಿ ಜಗಳವಾಗಿದೆ. ಸೆಕ್ಸ್ಗೆ ಸಮ್ಮತಿಸದ ಕಾರಣ ಪತ್ನಿಯ ಕತ್ತು ಹಿಸುಕಿ ಕೊಂದಿದ್ದಾಗಿ ಹಸನ್ ಹೇಳಿಕೆ ನೀಡಿದ್ದಾನೆ. ಅನಂತರ ತನ್ನ ಗುಪ್ತಾಂಗವನ್ನು ಕತ್ತರಿಸಿಕೊಂಡೆ ಎಂದು ಹೇಳಿದ್ದಾಗಿ ಪೊಲೀಸರು ಹೇಳಿದ್ದಾರೆ.
ಮೆಹ್ನಾಜ್ಳ ತಂದೆ ನೀಡಿರುವ ದೂರಿನ ಪ್ರಕಾರ ಹಸನ್ ವರದಕ್ಷಿಣೆಗಾಗಿ ಪೀಡಿಸುತ್ತಿದ ಎನ್ನಲಾಗಿದೆ.