ETV Bharat / bharat

ಸಾರ್ವಜನಿಕವಾಗಿ ಮೂತ್ರ ವಿಸರ್ಜನೆ ಮಾಡಿದ ಯುವಕನಿಗೆ ಮಾರಣಾಂತಿಕ ಹಲ್ಲೆ: ಸಾವು..!! - ಸಾರ್ವಜನಿಕವಾಗಿ ಮೂತ್ರ ವಿಸರ್ಜನೆ ಮಾಡಿದ ಯುವಕನಿಗೆ ಹಲ್ಲೆ

ಸಾರ್ವಜನಿಕ ಸ್ಥಳದಲ್ಲಿ ನೈಸರ್ಗಿಕ ಕರೆಗೆ ಉತ್ತರ ನೀಡುತ್ತಿದ್ದ ಯುವಕನೊಬ್ಬನನ್ನು ನೆರೆಹೊರೆ ಮಂದಿ ಸೇರಿ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಥಳಿತಕ್ಕೆ ಯುವಕ ಮೃತಪಟ್ಟಿದ್ದು, ಮೂವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

beaten
ಹಲ್ಲೆ
author img

By

Published : Nov 16, 2020, 4:43 PM IST

ಬಹ್ರೇಚ್(ಉತ್ತರ ಪ್ರದೇಶ): ಯುವಕನೊಬ್ಬನಿಗೆ ಸಾರ್ವಜನಿಕವಾಗಿ ಮೂತ್ರ ವಿಸರ್ಜನೆ ಮಾಡಿದ ಕಾರಣ ಸ್ಥಳೀಯರು ಮಾರಣಾಂತಿಕವಾಗಿ ಥಳಿಸಿದ ಘಟನೆ ಬಹ್ರೇಚ್ ಜಿಲ್ಲೆಯ ಖೈರಿ ಡಿಕೋಲಿ ಗ್ರಾಮದಲ್ಲಿ ನಡೆದಿದೆ. ಈ ಘಟನೆಯಲ್ಲಿ ಯುವಕ ಮೃತಪಟ್ಟಿದ್ದಾನೆ.

ಸೊಹೆಲ್ (23) ಮೃತ ದುರ್ದೈವಿ. ಸೊಹೆಲ್ ತನ್ನ ಚಿಕ್ಕಪ್ಪನ ಮನೆಯ ಮುಂದೆ ಮೂತ್ರ ವಿಸರ್ಜನೆಗೆ ಎಂದು ತೆರಳಿದ್ದ. ಈ ವೇಳೆ, ಕ್ರೋಧಗೊಂಡ ನೆರೆಹೊರೆಯವರಾದ ರಾಮ್ ಮೂರತ್, ಆತ್ಮಾ ರಾಮ್, ರಾಂಪಾಲ್, ಸನೆಹಿ ಮತ್ತು ಮಂಜೀತ್ ಜೊತೆಗೆ ಕೆಲ ಮಂದಿ ಸೇರಿ ಕೋಲುಗಳಿಂದ ಹಿಗ್ಗಾಮುಗ್ಗಾ ಥಳಿಸಿ ಹಲ್ಲೆ ಮಾಡಿದ್ದಾರೆ ಎಂದು ವರದಿಗಳು ತಿಳಿಸಿವೆ.

ಗಂಭೀರ ಗಾಯಗೊಂಡ ಸೊಹೇಲ್​ನನ್ನು ತಕ್ಷಣವೇ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ. ಆದಾಗ್ಯೂ, ತೀವ್ರ ಗಾಯಗೊಂಡ ಅವರು ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿರುವುದಾಗಿ ಪೊಲೀಸ್ ವರಿಷ್ಠಾಧಿಕಾರಿ ವಿಪಿನ್ ಮಿಶ್ರಾ ತಿಳಿಸಿದ್ದಾರೆ.

ಇನ್ನು ಘಟನೆ ಕುರಿತು ಚಿಕ್ಕಪ್ಪ ಚಿಂತಾರಾಮ್ ದೂರು ದಾಖಲಿಸಿದ್ದು, ಅದರ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ. ರಾಮ್ ಮೂರತ್, ಸಾನೆಹಿ ಮತ್ತು ಮಂಜೀತ್ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದ್ದು, ಉಳಿದ ಆರೋಪಿಗಳಿಗಾಗಿ ಶೋಧ ಕಾರ್ಯ ನಡೆದಿದ್ದು, ಶೀಘ್ರವೇ ಬಂಧಿಸಲಾಗಿವುದು ಎಂದು ಎಂದು ಮಿಶ್ರಾ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.