ನವದೆಹಲಿ: ಕೋವಿಡ್-19 ಮಧ್ಯೆಯೂ ಮಾಹಿತಿ ನೀಡುವ ಪ್ರಮುಖ ಕರ್ತವ್ಯವ ನಿರ್ವಹಿಸುತ್ತಿರುವ ಪತ್ರಕರ್ತರಿಗೆ ವಿಮಾ ಸೌಲಭ್ಯ ನೀಡುವಂತೆ ಕಾಂಗ್ರೆಸ್ ಮುಖಂಡೆ ಪ್ರಿಯಾಂಕಾ ಗಾಂಧಿ ವಾದ್ರಾ ಉತ್ತರಪ್ರದೇಶ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಕೋವಿಡ್-19ನಿಂದಾಗಿ ಯುವ ಪತ್ರಕರ್ತ ನೀಲಂಶು ಶುಕ್ಲಾ ಸಾವನ್ನಪ್ಪಿದ ಬಳಿಕ ಅವರು ಸರ್ಕಾರಕ್ಕೆ ಈ ಮನವಿ ಮಾಡಿದ್ದಾರೆ.
"ಬಹಳ ದುಃಖದ ಸುದ್ದಿ. ಲಖನೌನ ಯುವ ಪತ್ರಕರ್ತ ನೀಲಂಶು ಶುಕ್ಲಾ ಇನ್ನಿಲ್ಲ. ಅವರು ಕೆಲವು ದಿನಗಳಿಂದ ಕೋವಿಡ್-19ನೊಂದಿಗೆ ಹೋರಾಡುತ್ತಿದ್ದರು" ಎಂದು ಪ್ರಿಯಾಂಕಾ ಗಾಂಧಿ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
"ಪತ್ರಕರ್ತರು ಕೊರೊನಾ ವೈರಸ್ ಬಿಕ್ಕಟ್ಟಿನ ಮಧ್ಯೆಯೂ ಮಾಹಿತಿ ಒದಗಿಸುವ ಪ್ರಮುಖ ಕಾರ್ಯನಿರ್ವಹಿಸುತ್ತಿದ್ದಾರೆ. ಹೀಗಾಗಿ ಉತ್ತರಪ್ರದೆಶ ಸರ್ಕಾರವು ನೀಲಂಶು ಶುಕ್ಲಾ ಅವರ ಕುಟುಂಬಕ್ಕೆ ಆರ್ಥಿಕ ಸಹಾಯ ಮತ್ತು ಎಲ್ಲಾ ಪತ್ರಕರ್ತರಿಗೆ ವಿಮಾ ಸೌಲಭ್ಯ ನೀಡಬೇಕು" ಎಂದು ಆಗ್ರಹಿಸಿದ್ದಾರೆ.