ETV Bharat / bharat

ಕಂದಾಯ ಅಧಿಕಾರಿ ಸೇರಿ ಮೂವರಿಂದ ಯುವತಿ ಮೇಲೆ ಗ್ಯಾಂಗ್​ ರೇಪ್​!

author img

By

Published : Jun 9, 2020, 3:18 PM IST

18 ವರ್ಷದ ಯುವತಿ ಮೇಲೆ ಮೂವರು ಕಾಮುಕರು ಚಲಿಸುತ್ತಿದ್ದ ಕಾರಿನಲ್ಲೇ ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ಉತ್ತರಪ್ರದೇಶದ ಬಂಡಾದಲ್ಲಿ ನಡೆದಿದೆ.

UP girl raped
UP girl raped

ಬಂಡಾ(ಉತ್ತರಪ್ರದೇಶ): ಕಂದಾಯ ಅಧಿಕಾರಿ ಸೇರಿ ಮೂವರು ಚಲಿಸುತ್ತಿದ್ದ ಕಾರಿನಲ್ಲೇ 18 ವರ್ಷದ ಯುವತಿ ಮೇಲೆ ಅತ್ಯಾಚಾರವೆಸಗಿರುವ ಅಮಾನವೀಯ ಘಟನೆ ಉತ್ತರಪ್ರದೇಶದ ಬಂಡಾದಲ್ಲಿ ನಡೆದಿದೆ.

ಸಂತ್ರಸ್ತೆ ನೀಡಿರುವ ದೂರಿನ ಪ್ರಕಾರ ಕಂದಾಯ ಅಧಿಕಾರಿ ಸುಶಿ ಪಾಟೀಲ್​ ಹಾಗೂ ಇಬ್ಬರು ಆಕೆಯ ಮನೆಗೆ ತೆರಳಿ ಒತ್ತಾಯ ಪೂರ್ವಕವಾಗಿ ತನ್ನನ್ನು ಕಾರಿನಲ್ಲಿ ಹಾಕಿಕೊಂಡು ಹೋಗಿ, ಈ ಕೃತ್ಯವೆಸಗಿದ್ದಾಗಿ ತಿಳಿಸಿದ್ದಾಳೆ. ತನ್ನನ್ನು ಎಳೆದುಕೊಂಡು ಹೋಗುತ್ತಿದ್ದ ವೇಳೆ ತಾಯಿ ಪ್ರತಿರೋಧ ತೋರಿದ್ರೂ ಪ್ರಯೋಜನವಾಗಿಲ್ಲ ಎಂದು ಯುವತಿ ದೂರಿನಲ್ಲಿ ವಿವರಿಸಿರುವುದಾಗಿ ಪೊಲೀಸ್​ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಯುವತಿ ಮೇಲೆ ದುಷ್ಕೃತ್ಯವೆಸಗಿದ ಬಳಿಕ ಕಾರು ನಿಲ್ಲಿಸಿದ ವೇಳೆ ಅಲ್ಲಿಂದ ಪರಾರಿಯಾಗಿ ಬಂದು ಪೊಲೀಸ್​ ಠಾಣೆಗೆ ತೆರಳಿ ದೂರು ನೀಡಿದ್ದಾಳೆ. ಈಗಾಗಲೇ ಮೂವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಯುವತಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳಿಸಿರುವುದಾಗಿ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.