ಪ್ರಯಾಗರಾಜ್ (ಉತ್ತರ ಪ್ರದೇಶ): ರಾಮ ದೇವಾಲಯ ನಿರ್ಮಾಣ ಅಡಿಗಲ್ಲು ಸಮಾರಂಭ ಆಗಸ್ಟ್ 5 ರಂದು ನಡೆಯಲಿದೆ. ಈ ಸಮಾರಂಭಕ್ಕೆ ಧ್ವನಿ ವರ್ಧಕಗಳನ್ನ ನೀಡಲು ಸಂಸ್ಥೆಯೊಂದು ಮುಂದೆ ಬಂದಿದೆ.
ಪ್ರಯಾಗರಾಜ್ದ ಆಶಾ ಸಂಸ್ಥೆ ಈ ಧ್ವನಿವರ್ಧಕಗಳನ್ನ ನೀಡಲಿದೆ. ಅಯೋಧ್ಯೆ ಮತ್ತು ಫೈಜಾಬಾದ್‌ನಲ್ಲಿ ಸುಮಾರು 3,000 ಧ್ವನಿವರ್ಧಕಗಳನ್ನು ಅಳವಡಿಸಲಾಗುವುದು ಎಂದು ಕಂಪನಿಯ ನಿರ್ದೇಶಕ ಪ್ರವೀಣ್ ಮಾಲ್ವಿಯಾ ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿರುವ ಅವರು, ಆಗಸ್ಟ್ 5 ರಂದು ನಡೆಯುವ ಸಮಾರಂಭದಲ್ಲಿ ಅಳವಡಿಸುವ ಧ್ವನಿವರ್ಧಕಗಳಿಗೆ ನಾವು ಒಂದು ರೂಪಾಯಿಯನ್ನು ವಿಧಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆಗಸ್ಟ್ 5ರ ಸಮಾರಂಭದ ಹಿನ್ನೆಲೆಯಲ್ಲಿ ಸಮಾರಂಭ ನಡೆಯುವ ಸ್ಥಳವನ್ನ ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಲಾಗುತ್ತಿದೆ.
ಇನ್ನು ಅಯೋಧ್ಯೆದಲ್ಲಿ ಅಭೂತಪೂರ್ವ ಭದ್ರತೆಗೆ ಪೊಲೀಸ್ ಇಲಾಖೆ ಎಲ್ಲ ಕ್ರಮಗಳನ್ನ ಕೈಗೊಂಡಿದೆ. ಇನ್ನೊಂದೆಡೆ, ಅಯೋಧ್ಯೆಯ ಹಲವಾರು ಪ್ರದೇಶಗಳನ್ನು ಡಯಾಸ್ (ಮಣ್ಣಿನ ದೀಪಗಳು) ಮತ್ತು ವರ್ಣರಂಜಿತ ದೀಪಗಳಿಂದ ಅಲಂಕರಿಸಲಾಗಿದೆ. ಬಹು ನಿರೀಕ್ಷಿತ ಸಮಾರಂಭಕ್ಕೆ ಸುಮಾರು 1.25 ಲಕ್ಷ ದೀಪಗಳನ್ನ ನೀಡಲು ಕುಂಬಾರರು ಸಿದ್ಧರಾಗಿದ್ದಾರೆ.
ಆಗಸ್ಟ್ 5 ರಂದು ಪ್ರಧಾನಿ ದೇವಸ್ಥಾನದ ಶಿಲಾನ್ಯಾಸ ನೆರವೇರಿಸಲಿದ್ದಾರೆ. ಹಲವಾರು ರಾಜ್ಯಗಳ ಮುಖ್ಯಮಂತ್ರಿಗಳು, ಕೇಂದ್ರ ಸಚಿವ ಸಂಪುಟದ ಸಚಿವರು ಮತ್ತು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಕೂಡ ಈ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.