ಮುಜಾಫರ್ನಗರ(ಉತ್ತರ ಪ್ರದೇಶ): ಕಳೆದ ಕೆಲ ವರ್ಷಗಳಿಂದ ಗಂಡ - ಹೆಂಡತಿ ಪ್ರತ್ಯೇಕವಾಗಿ ವಾಸಿಸುತ್ತಿದ್ದು, ಇದೀಗ ಗಂಡನ ತಿಂಗಳ ನಿರ್ವಹಣಾ ಭತ್ಯೆಗಾಗಿ ಪತ್ನಿ ಸಾವಿರ ರೂಪಾಯಿ ನೀಡುವಂತೆ ಆದೇಶ ನೀಡಿದೆ.
ಉತ್ತರ ಪ್ರದೇಶದ ಕುಟುಂಬ ನ್ಯಾಯಾಲಯ ಈ ಆದೇಶ ನೀಡಿದೆ. ಪತ್ನಿ ನಿವೃತ್ತಿ ಸರ್ಕಾರಿ ನೌಕರಳಾಗಿದ್ದು, ಪ್ರತಿ ತಿಂಗಳು ಪಿಂಚಣಿ ರೂಪದಲ್ಲಿ 12,000 ರೂ ಪಡೆದುಕೊಳ್ಳುತ್ತಾಳೆ. ಹೀಗಾಗಿ ತನ್ನ ಹೆಂಡತಿಯಿಂದ ನಿರ್ವಹಣಾ ಭತ್ಯೆ ಕೋರಿ 1995ರ ಹಿಂದೂ ವಿವಾಹ ಕಾಯ್ದೆ ಪ್ರಕಾರ ಅರ್ಜಿ ಸಲ್ಲಿಕೆ ಮಾಡಿದ್ದನು. ಅದರ ವಿಚಾರಣೆ ನಡೆಸಿರುವ ಕುಟುಂಬ ನ್ಯಾಯಾಲಯ ಈ ಮಹತ್ವದ ಆದೇಶ ನೀಡಿದೆ.
ಕುಟುಂಬ ನ್ಯಾಯಾಲಯದ ನ್ಯಾಯಾಧೀಶರು ಅರ್ಜಿ ವಿಚಾರಣೆ ನಡೆಸಿ, ಪ್ರತಿ ತಿಂಗಳು ಪಿಂಚಣಿ ರೂಪದಲ್ಲಿ ಬರುವ 12 ಸಾವಿರ ರೂ.ದಲ್ಲಿ 1 ಸಾವಿರ ರೂ. ಗಂಡನಿಗೆ ನೀಡುವಂತೆ ಸೂಚಿಸಿದೆ.