ಸಹರಾನ್ಪುರ್(ಉತ್ತರ ಪ್ರದೇಶ): ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರ ತಂದೆ ಆನಂದ್ ಸಿಂಗ್ ಬಿಷ್ತ್ ದೆಹಲಿಯ ಎಐಐಎಂಎಸ್(AIIMS)ನಲ್ಲಿ ಸೋಮವಾರ ನಿಧನರಾಗಿದ್ದರು.
ಬಿಷ್ತ್ ಅವರ ಸಾವಿನ ನಂತರ ಸಂಬಂಧಿಕರು ಯೋಗಿ ತವರೂರಾದ ಪೌರಿ ಗರ್ಹ್ವಾಲ್ ಜಿಲ್ಲೆಯ ಹಳ್ಳಿಗೆ ಅಂತಿಮ ಸಂಸ್ಕಾರಕ್ಕಾಗಿ ಆಗಮಿಸಿದ್ದರು.
ಆದರೆ ಸಿಎಂ ಯೋಗಿ ಆದಿತ್ಯನಾಥ್ ಅವರ ಚಿಕ್ಕಮ್ಮ ಮತ್ತು ಅವರ ಮಗ ಉತ್ತರಾಖಂಡ್ ಗಡಿ ಬಳಿ ಆಗಮಿಸಿದ್ದ ವೇಳೆ ಪೊಲೀಸರು ನಿಲ್ಲಿಸಿ ವಾಪಸ್ ಕಳುಹಿಸಿದ್ದಾರೆ.
ಯೋಗಿಯ ತಂದೆಯ ಮೃತದೇಹವನ್ನು ದೆಹಲಿಯಿಂದ ಅವರ ಪೂರ್ವಜರ ಸ್ಥಳವಾದ ಉತ್ತರಾಖಂಡ್ನ ಹಳ್ಳಿಗೆ ತರಲಾಗಿತ್ತು. ಅಂತಿಮ ಸಂಸ್ಕಾರಕ್ಕಾಗಿ ಭಾಗಿಯಾಗಲು ಆದಿತ್ಯನಾಥ್ ಅವರ ಚಿಕ್ಕಮ್ಮ ಆಗಮಿಸಿದರಾದರೂ ಲಾಕ್ಡೌನ್ ಇರುವುದರಿಂದ ಅವರನ್ನು ಉತ್ತರಾಖಂಡ್ ಗಡಿ ದಾಟಲು ಅವಕಾಶ ನೀಡಲಿಲ್ಲ ಎಂದು ತಿಳಿದುಬಂದಿದೆ.
ಆದಿತ್ಯನಾಥ್ರ ಪೂರ್ವಜರ ಊರಿಗೆ ತೆರಳಲು ಉತ್ತರಪ್ರದೇಶದ ಸಹರಾನ್ಪುರ್ ಜಿಲ್ಲಾಧಿಕಾರಿ ಅಖಿಲೇಶ್ ಸಿಂಗ್ ಯೋಗಿ ಚಿಕ್ಕಮ್ಮರಿಗೆ ಪಾಸ್ ನೀಡಿದ್ದರು.
ಜಿಲ್ಲಾಧಿಕಾರಿಗಳು ನೀಡಿದ್ದ ಪಾಸ್ ಅನ್ನು ನಾವು ಅಧಿಕಾರಿಗಳಿ(ಉತ್ತರ ಖಂಡ)ತೋರಿಸಿದೆವು. ಆದರೆ ಅವರು ಅಂತ್ಯಸಂಸ್ಕಾರಕ್ಕೆ ಅವಕಾಶವಿಲ್ಲ ಎಂದು ನಮ್ಮ ಪ್ರವೇಶವನ್ನು ನಿರಾಕರಿಸಿ, ಹಿಂತಿರುಗಲು ಹೇಳಿದರೆಂದು ಯೋಗಿ ಆದಿತ್ಯನಾಥ್ ಚಿಕ್ಕಮ್ಮ ತಿಳಿಸಿದ್ದಾರೆ.
ಇನ್ನು ರಾಜ್ಯದಲ್ಲಿ ಲಾಕ್ಡೌನ್ ಇರುವುದರಿಂದ ತಾವೂ ಕೂಡ ತಮ್ಮ ತಂದೆಯ ಶವ ಸಂಸ್ಕಾರದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ತಿಳಿಸಿದ್ದರು.