ETV Bharat / bharat

ಯುಪಿಯಲ್ಲಿ ರೆಡಿಯಾಗುತ್ತಿವೆ ವಿಮಾನ ಕೂಡ ಲ್ಯಾಂಡ್ ಆಗಬಹುದಾದ ಎರಡು ಎಕ್ಸ್​​ಪ್ರೆಸ್​​ ವೇ - hindon

ಈಗಾಗಲೇ ಲಕ್ನೋ-ಆಗ್ರಾದಲ್ಲಿ ಒಂದು ಮಾರ್ಗದ ಎಕ್ಸ್​​ಪ್ರೆಸ್​​​ ಇದ್ದು, ಈಗ ಉತ್ತರ ಪ್ರದೇಶ ದೇಶದಲ್ಲಿ ಮೊದಲ ಬಾರಿಗೆ ಎರಡು ಮಾರ್ಗದ ಎಕ್ಸ್​​ಪ್ರೆಸ್ ​​ವೇಯನ್ನು ನಿರ್ಮಾಣ ಮಾಡುತ್ತಿದೆ. ಈ ದಾರಿಯಲ್ಲಿ ತುರ್ತು ಸಂದರ್ಭದಲ್ಲಿ ವಿಮಾನಗಳನ್ನು ಲ್ಯಾಂಡ್​ ಮತ್ತು ಟೇಕಾಫ್​ ಮಾಡಬಹುದು.

ಉತ್ತರ ಪ್ರದೇಶದಲ್ಲಿ ನಿರ್ಮಾಣವಾಗುತ್ತಿವೆ ಎರಡು ಎಕ್ಸ್​​ಪ್ರೆಸ್​​ ವೇಗಳು!

author img

By

Published : Jan 24, 2021, 7:47 PM IST

ಲಕ್ನೋ: ದೇಶದಲ್ಲಿ ವರ್ಷದಿಂದ ವರ್ಷಕ್ಕೆ ಸಾರಿಗೆ ವ್ಯವಸ್ಥೆಯಲ್ಲಿ ಅಭಿವೃದ್ಧಿಗಳು ಆಗ್ತಾನೆ ಇವೆ. ಇದೀಗ ಉತ್ತರ ಪ್ರದೇಶದಲ್ಲಿ ಅಂತಹದ್ದೇ ಒಂದು ಬೆಳವಣಿಗೆಯಾಗುತ್ತಿದ್ದು, 3300 ಮೀಟರ್​​ ಉದ್ದದ ಎರಡು ಎಕ್ಸ್​​ಪ್ರೆಸ್​ ವೇಗಳು ನಿರ್ಮಾಣವಾಗುತ್ತಿವೆ. ಈ ಮೂಲಕ ಉತ್ತರ ಪ್ರದೇಶವು ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಎರಡು ಎಕ್ಸ್​​ಪ್ರೆಸ್​​​ ವೇಗಳನ್ನು ನಿರ್ಮಾಣ ಮಾಡುತ್ತಿರುವ ರಾಜ್ಯವಾಗಲಿದೆ.

ಈ ಬಗ್ಗೆ ಮಾತನಾಡಿರುವ ಉತ್ತರ ಪ್ರದೇಶದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವನೀಶ್​​ ಕುಮಾರ್​​ ಅವಸ್ತಿ, ಉತ್ತರ ಪ್ರದೇಶದ ಪೂರ್ವಾಂಚಲ ಪ್ರದೇಶದ ಎಕ್ಸ್​​ಪ್ರೆಸ್​​ ವೇ ನಿರ್ಮಾಣ ಕಾರ್ಯ ಅತಿ ಶೀಘ್ರದಲ್ಲೇ ಮುಗಿಯಲಿದೆ. ಕುರೆಬಾರ್​ನಲ್ಲಿ 3300 ಮೀಟರ್​ ಉದ್ದದ ಎಕ್ಸ್​​​ಪ್ರೆಸ್​​ ವೇ ನಿರ್ಮಾಣ ಮುಗಿದಿದೆ. ಈ ಮಾರ್ಗದಲ್ಲಿ ಎಲ್ಲಾ ರೀತಿಯ ವಿಮಾನಗಳು ಸಹ ಲ್ಯಾಂಡ್ ಆಗಬಹುದು. ಭಾರತೀಯ ವಾಯುಪಡೆ ಸದ್ಯದಲ್ಲೇ ಪ್ರಯೋಗಾರ್ಥವಾಗಿ ವಿಮಾನ ಹಾರಾಟ ಮಾಡಲಿದೆ ಎಂದು ತಿಳಿಸಿದರು.

ಈಗಾಗಲೇ ಲಕ್ನೋ-ಆಗ್ರಾದಲ್ಲಿ ಒಂದು ಮಾರ್ಗದ ಎಕ್ಸ್​​ಪ್ರೆಸ್​​​ ಇದ್ದು, ಈಗ ಉತ್ತರ ಪ್ರದೇಶ ದೇಶದಲ್ಲಿ ಮೊದಲ ಬಾರಿಗೆ ಎರಡು ಮಾರ್ಗದ ಎಕ್ಸ್​​ಪ್ರೆಸ್ ​​ವೇಯನ್ನು ನಿರ್ಮಾಣ ಮಾಡುತ್ತಿದೆ. ಈ ದಾರಿಯಲ್ಲಿ ತುರ್ತು ಸಂದರ್ಭದಲ್ಲಿ ವಿಮಾನಗಳನ್ನು ಲ್ಯಾಂಡ್​ ಮತ್ತು ಟೇಕಾಫ್​ ಮಾಡಬಹುದು.
ಈ ಹಿಂದೆ ಭಾರತೀಯ ವಾಯುಪಡೆಯು ಯಮುನಾ ಎಕ್ಸ್‌ಪ್ರೆಸ್ ವೇ ಮತ್ತು ಆಗ್ರಾ ಎಕ್ಸ್‌ಪ್ರೆಸ್ ವೇಯನ್ನು ಪರೀಕ್ಷಿಸಿತ್ತು. ಮಿರಾಜ್ 2000, ಜಾಗ್ವಾರ್, ಸುಖೋಯ್ 30 ಮತ್ತು ಸೂಪರ್ ಹರ್ಕ್ಯುಲಸ್ ವಿಮಾನಗಳು ಲಕ್ನೋ-ಆಗ್ರಾ ಎಕ್ಸ್‌ಪ್ರೆಸ್ ‌ವೇನಲ್ಲಿ ಸಂಚರಿಸಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.