ಉನ್ನಾವೋ: ದೇಶವನ್ನೇ ಬೆಚ್ಚಿಬೀಳಿಸಿದ್ದ ಉನ್ನಾವೋ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಘಟನೆಯು ಉತ್ತರಪ್ರದೇಶದ ರಾಯ್ಬರೇಲಿ ಬಳಿ ಸಂಭವಿಸಿದೆ.
ಸಂತ್ರಸ್ತೆಯು ರಾಯ್ ಬರೇಲಿಯ ಜೈಲೊಂದರಲ್ಲಿರುವ ತನ್ನ ಮಾವನನ್ನು ಭೇಟಿಯಾಗಲು ಕಾರಿನಲ್ಲಿ ತೆರಳುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಕಾರಿನಲ್ಲಿ ಸಂತ್ರಸ್ತೆ, ಆಕೆಯ ತಾಯಿ, ಅತ್ತೆ ಹಾಗೂ ವಕೀಲರೊಬ್ಬರು ತೆರಳುತ್ತಿದ್ದಾಗ ಲಾರಿಯೊಂದು ಎದುರಿನಿಂದ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಕಾರಿನಲ್ಲಿದ್ದ ಇಬ್ಬರು ಮೃತಪಟ್ಟಿದ್ದು, ಗಾಯಗೊಂಡು ಆಸ್ಪತ್ರೆಯಲ್ಲಿರುವ ಸಂತ್ರಸ್ತೆಯ ಸ್ಥಿತಿ ಗಂಭೀರವಾಗಿದೆ. ಖಾಲಿ ಲಾರಿಯೊಂದು ಡಿಕ್ಕಿ ಹೊಡೆದಿದ್ದು, ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
-
UP Congress MLA, Aradhana Mishra: Unnao rape victim met with an accident today under suspicious circumstances, two members of her family have died in the accident. Congress party demands an investigation. pic.twitter.com/NvqrkjziEc
— ANI UP (@ANINewsUP) July 28, 2019 " class="align-text-top noRightClick twitterSection" data="
">UP Congress MLA, Aradhana Mishra: Unnao rape victim met with an accident today under suspicious circumstances, two members of her family have died in the accident. Congress party demands an investigation. pic.twitter.com/NvqrkjziEc
— ANI UP (@ANINewsUP) July 28, 2019UP Congress MLA, Aradhana Mishra: Unnao rape victim met with an accident today under suspicious circumstances, two members of her family have died in the accident. Congress party demands an investigation. pic.twitter.com/NvqrkjziEc
— ANI UP (@ANINewsUP) July 28, 2019
ಇನ್ನು ನಾವು ರಾಯ್ಬರೇಲಿಯ ಜೈಲಿಗೆ ತೆರಳುತ್ತಿರುವುದು ನಮ್ಮ ಊರಿನ ಎಲ್ಲರಿಗೂ ತಿಳಿದಿತ್ತು. ಈ ಘಟನೆಯ ಹಿಂದೆ ಆತ್ಯಾಚಾರ ಆರೋಪಿ ಬಿಜೆಪಿ ಶಾಸಕ ಕುಲ್ದೀಪ್ ಸೆಂಗಾರ್ ಕೈವಾಡವಿದೆ. ಕೇಸ್ನ್ನು ಇಲ್ಲಿಗೇ ಕೈಬಿಡಲಿ ಎಂದು ಈ ಕೃತ್ಯದ ಮೂಲಕ ಬೆದರಿಕೆ ಒಡ್ಡಿದ್ದಾನೆ ಎಂದು ಅತ್ಯಾಚಾರ ಸಂತ್ರಸ್ತೆಯ ಸಂಬಂಧಿಯೊಬ್ಬರು ಆರೋಪಿಸಿದ್ದಾರೆ.
ಹಾಗೆಯೇ ಘಟನೆ ಬಗ್ಗೆ ಹೆಚ್ಚಿನ ತನಿಖೆ ನಡೆಯಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ. ಉತ್ತರಪ್ರದೇಶ ಕಾಂಗ್ರೆಸ್ ಶಾಸಕಿ ಆರಾಧನಾ ಮಿಶ್ರಾ ಪ್ರತಿಕ್ರಿಯಿಸಿ, ಈ ಅಪಘಾತವು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಘಟನೆ ಬಗ್ಗೆ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ.