ETV Bharat / bharat

ವಿಶ್ವಸಂಸ್ಥೆ ಭದ್ರತಾ ಮಂಡಳಿ ಚುನಾವಣೆ ಪ್ರಕ್ರಿಯೆ ಹೇಗಿರುತ್ತೆ ಗೊತ್ತೆ..? - ವಿಶ್ವಸಂಸ್ಥೆಗೆ ಭಾರತ ಆಯ್ಕೆ

ಭದ್ರತಾ ಮಂಡಳಿಗೆ ಚೀನಾ, ಫ್ರಾನ್ಸ್, ರಶಿಯನ್ ಒಕ್ಕೂಟ, ಯುನೈಟೆಡ್ ಕಿಂಗಡಮ್ ಮತ್ತು ಅಮೆರಿಕ ದೇಶಗಳು ಖಾಯಂ ಸದಸ್ಯ ರಾಷ್ಟ್ರಗಳಾಗಿರುತ್ತವೆ. ಖಾಯಂ ಅಲ್ಲದ 10 ಸದಸ್ಯ ರಾಷ್ಟ್ರಗಳನ್ನು ಸಾಮಾನ್ಯ ಸಭೆಯು ಚುನಾವಣೆಯ ಮೂಲಕ ಆರಿಸುತ್ತದೆ.

United Nations Security Council
United Nations Security Council
author img

By

Published : Jun 18, 2020, 7:27 PM IST

ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಖಾಯಂ ಅಲ್ಲದ ಸದಸ್ಯ ರಾಷ್ಟ್ರವಾಗಿ ಭಾರತ 8ನೇ ಬಾರಿ ಚುನಾಯಿತವಾಗಿದೆ. 2021ರ ಜನೇವರಿ 1 ರಿಂದ ಭಾರತದ ಅಧಿಕಾರಾವಧಿ ಆರಂಭವಾಗಲಿದ್ದು, ಮುಂದಿನ 2 ವರ್ಷಗಳ ಅವಧಿಗೆ ಭಾರತದ ಸದಸ್ಯತ್ವ ಮುಂದುವರಿಯಲಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ಅಲ್ಲದ ಸದಸ್ಯ ಸ್ಥಾನಗಳಿಗೆ ನಡೆಯುವ ಚುನಾವಣೆ ಪ್ರಕ್ರಿಯೆ ಹೇಗಿರುತ್ತದೆ, ನಿಯಮಗಳೇನು ಎಂಬುದನ್ನು ತಿಳಿಯೋಣ.

ಖಾಯಂ ಅಲ್ಲದ ಸದಸ್ಯ ರಾಷ್ಟ್ರಗಳ ಚುನಾವಣೆ ಪ್ರಕ್ರಿಯೆ

ವಿಶ್ವಸಂಸ್ಥೆ ನಿಯಮಾವಳಿಯ ಆರ್ಟಿಕಲ್ 23 ರ ಅನುಬಂಧದ ತಿದ್ದುಪಡಿಯಂತೆ (ಡಿಸೆಂಬರ್ 17, 1963 ರಂದು ಮಾಡಲಾದ ತಿದ್ದುಪಡಿ (ಗೊತ್ತುವಳಿ 1991, ಎ (XVIII)), 31 ಆಗಸ್ಟ್​ 1965 ರಂದು ಜಾರಿಗೆ ಬಂದಂತೆ ಸಾಮಾನ್ಯ ಸಭೆಯು ಭದ್ರತಾ ಮಂಡಳಿಯ ಖಾಯಂ ಅಲ್ಲದ ಸದಸ್ಯ ರಾಷ್ಟ್ರಗಳ ಸಂಖ್ಯೆಯನ್ನು 6 ರಿಂದ 10 ಕ್ಕೆ ಏರಿಸಲಾಯಿತು.

ಭದ್ರತಾ ಮಂಡಳಿಗೆ ಚೀನಾ, ಫ್ರಾನ್ಸ್, ರಶಿಯನ್ ಒಕ್ಕೂಟ, ಯುನೈಟೆಡ್ ಕಿಂಗಡಮ್ ಮತ್ತು ಅಮೆರಿಕ ದೇಶಗಳು ಖಾಯಂ ಸದಸ್ಯ ರಾಷ್ಟ್ರಗಳಾಗಿರುತ್ತವೆ. ಖಾಯಂ ಅಲ್ಲದ 10 ಸದಸ್ಯ ರಾಷ್ಟ್ರಗಳನ್ನು ಸಾಮಾನ್ಯ ಸಭೆಯು ಚುನಾವಣೆಯ ಮೂಲಕ ಆರಿಸುತ್ತದೆ.

142ನೇ ನಿಯಮದ ಪ್ರಕಾರ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಪ್ರತಿ ವರ್ಷ 5 ಸದಸ್ಯರನ್ನು ಭದ್ರತಾ ಮಂಡಳಿಯ ಖಾಯಂ ಅಲ್ಲದ ಸದಸ್ಯರನ್ನಾಗಿ ಆಯ್ಕೆ ಮಾಡುತ್ತದೆ. 1963 ರಲ್ಲಿ ನಡೆದ 18ನೇ ಸಾಮಾನ್ಯ ಸಭೆಯಲ್ಲಿ ಖಾಯಂ ಅಲ್ಲದ ಸದಸ್ಯ ರಾಷ್ಟ್ರಗಳ ಆಯ್ಕೆಗೆ ಈ ಕೆಳಗಿನಂತೆ ಮಾನದಂಡಗಳನ್ನು ರೂಪಿಸಲಾಯಿತು.

- ಆಫ್ರಿಕಾ ಮತ್ತು ಏಶಿಯಾದ ಐದು ರಾಷ್ಟ್ರಗಳು

- ಪೂರ್ವ ಯುರೋಪಿನ ಒಂದು ದೇಶ

- ಲ್ಯಾಟಿನ್ ಅಮೆರಿಕೆಯ ಎರಡು ದೇಶಗಳು

- ಪಶ್ಚಿಮ ಯುರೋಪ್ ಮತ್ತು ಇತರೆಡೆಯ ಎರಡು ದೇಶಗಳು

ತಕ್ಷಣ ಮತ್ತೆ ಚುನಾವಣೆಗೆ ಸ್ಪರ್ಧಿಸುವಂತಿಲ್ಲ!

ವಿಶ್ವಸಂಸ್ಥೆಯ ನಿಯಮ 144 ರ ಪ್ರಕಾರ ನಿವೃತ್ತಿಯಾಗುತ್ತಿರುವ ಸದಸ್ಯ ರಾಷ್ಟ್ರವೊಂದು ತಕ್ಷಣ ಮುಂದಿನ ಚುನಾವಣೆಗೆ ಮತ್ತೆ ಸ್ಪರ್ಧಿಸುವಂತಿಲ್ಲ. ನಿಯಮ 92 ರ ಪ್ರಕಾರ ಈ ಚುನಾವಣೆಯು ಗುಪ್ತ ಮತದಾನದ ಮೂಲಕ ನಡೆಯುತ್ತದೆ ಹಾಗೂ ನಾಮನಿರ್ದೇಶನಕ್ಕೆ ಅವಕಾಶವಿರುವುದಿಲ್ಲ. ನಿಯಮ 83 ರ ಪ್ರಕಾರ ಭದ್ರತಾ ಮಂಡಳಿಯ ಸದಸ್ಯ ರಾಷ್ಟ್ರಗಳು ಮೂರರಲ್ಲಿ ಎರಡರಷ್ಟು ಬಹುಮತದಿಂದ ಆಯ್ಕೆಯಾಗಬೇಕಾಗುತ್ತದೆ.

ಭದ್ರತಾ ಮಂಡಳಿಯ ಖಾಯಂ ಅಲ್ಲದ ಸದಸ್ಯನಾಗಿದ್ದ ಭಾರತದ ಅವಧಿಗಳು

Yearಒಟ್ಟು ಮತಗಳು

ಭಾರತಕ್ಕೆ ಸಿಕ್ಕ

ಮತಗಳು

ಶೇಕಡಾವಾರು ಮತ

ಆಯಾ ಸಮಯದಲ್ಲಿದ್ದ

ಪ್ರಧಾನ ಮಂತ್ರಿಗಳು

1950-1951585696.5%ಜವಾಹರಲಾಲ್ ನೆಹರು
1967-19681198268.9%ಇಂದಿರಾ ಗಾಂಧಿ
1972-197311610792.2%ಇಂದಿರಾ ಗಾಂಧಿ
1977-197813813295.6%ಮೊರಾರ್ಜಿ ದೇಸಾಯಿ
1984-198515514291.6%ಇಂದಿರಾ ಗಾಂಧಿ
1991-199215414191.5%ಪಿವಿ ನರಸಿಂಹ ರಾವ್
2011-201219118797.9%ಮನಮೋಹನ್ ಸಿಂಗ್

2021-2022

(ಅಧಿಕಾರ ಆರಂಭದ

ದಿನಾಂಕ 01.01.2021)

19218495.8%ನರೇಂದ್ರ ಮೋದಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.