ETV Bharat / bharat

ಕೋವಿಡ್​ ತಡೆಗಟ್ಟಲು ಆಲ್​ ಇನ್​ ಒನ್ 'ಕೋವಿಪ್ರೊ'​ ಯಂತ್ರ ಅಭಿವೃದ್ಧಿ: ತೆಲಂಗಾಣ ವಿಧಾನಸಭೆಯಲ್ಲಿ ಬಳಕೆ - ಕೋವಿಡ್​ ತಡೆಗಟ್ಟಲು ಕೋವಿಪ್ರೊ'​ ಯಂತ್ರ]

ಮೇಕ್ ಇನ್ ಇಂಡಿಯಾ ಯೋಜನೆಯ ಭಾಗವಾಗಿ ಕೋವಿಡ್​ ನಿಯಂತ್ರಿಸಲು 'ಕೋವಿಪ್ರೊ' ಯಂತ್ರವನ್ನು ಹೈದರಾಬಾದ್‌ನಲ್ಲಿ ವಿನ್ಯಾಸಗೊಳಿಸಿ, ಅಭಿವೃದ್ಧಿಪಡಿಸಲಾಗಿದೆ. ನಗರದ ಚೆರ್ಲಪಲ್ಲಿಯಲ್ಲಿರುವ ಕಿಯೋಸ್ಕ್ ಸಂಸ್ಥೆಯ ಘಟಕದಲ್ಲಿ ಇದನ್ನು ತಯಾರಿಸಲಾಗಿದೆ. ತೆಲಂಗಾಣ ವಿಧಾನಸಭೆಯಲ್ಲಿ ಇದನ್ನು ಬಳಸಲಾಗ್ತಿದೆ.

Kovipro
ಕೋವಿಪ್ರೊ ಯಂತ್ರ
author img

By

Published : Sep 11, 2020, 4:05 PM IST

ಹೈದರಾಬಾದ್: ಕೊರೊನಾ ತಡೆಗಟ್ಟಲು ಹೈದರಾಬಾದ್ ಮೂಲದ ಬೃಹಸ್ಪತಿ ಟೆಕ್ನಾಲಜೀಸ್ ವಿಶಿಷ್ಟ ಯಂತ್ರವೊಂದನ್ನು ಅಭಿವೃದ್ಧಿಪಡಿಸಿದೆ. ಇದನ್ನು ತೆಲಂಗಾಣದ ಅಧಿವೇಶನದಲ್ಲಿ ಬಳಸಲಾಗುತ್ತಿದೆ.

'ಕೋವಿಪ್ರೊ ಆಲ್-ಇನ್-ಒನ್ ಕಿಯೋಸ್ಕ್' ಹೆಸರಿನ ಈ ಯಂತ್ರವೂ, ಫೇಸ್​ ರಿಕಾಗ್​ನಿಶನ್, ರಿಯಲ್ ಟೈಮ್​ ಟೆಂಪರೇಚರ್​ ರೆಕಾರ್ಡಿಂಗ್ ಮತ್ತು ಸ್ವಯಂಚಾಲಿತ ಹ್ಯಾಂಡ್​ ಸ್ಯಾನಿಟೈಸರ್ ಮತ್ತು ಯುವಿ ಕಿರಣಗಳಿಂದ ವೈರಸ್​ ನಿಯಂತ್ರಿಸುವ ತಂತ್ರಜ್ಞಾನವನ್ನು ಹೊಂದಿದೆ. ತೆಲಂಗಾಣ ವಿಧಾನಸಭೆಯ ಅಧಿವೇಶನದಲ್ಲಿ ಶಾಸಕರ ಸುರಕ್ಷತೆಗಾಗಿ 18 ಕೋವಿಪ್ರೋ ಯಂತ್ರಗಳನ್ನು ಸ್ಥಾಪಿಸಲಾಗಿದೆ. ಆರೋಗ್ಯ ಸಚಿವ ಇ. ರಾಜೇಂದರ್, ಕೈಗಾರಿಕಾ ಸಚಿವ ಕೆ.ಟಿ. ರಾಮರಾವ್ ಮತ್ತು ಇತರ ಸಚಿವರು ಮತ್ತು ಶಾಸಕರು ಕಿಯೋಸ್ಕ್ ಕೋವಿಪ್ರೋ ಯಂತ್ರ ಬಳಸಿ, ಈ ಸಾಧನದ ವೈಶಿಷ್ಟ್ಯಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.

ಮೇಕ್ ಇನ್ ಇಂಡಿಯಾ ಯೋಜನೆಯ ಭಾಗವಾಗಿ ಕೋವಿಪ್ರೊ ಯಂತ್ರವನ್ನು ಹೈದರಾಬಾದ್‌ನಲ್ಲಿ ವಿನ್ಯಾಸಗೊಳಿಸಿ, ಅಭಿವೃದ್ಧಿಪಡಿಸಲಾಗಿದೆ. ನಗರದ ಚೆರ್ಲಪಲ್ಲಿಯಲ್ಲಿರುವ ಕಿಯೋಸ್ಕ್ ಸಂಸ್ಥೆಯ ಘಟಕದಲ್ಲಿ ಇದನ್ನು ತಯಾರಿಸಲಾಗಿದ್ದು, ಇಲ್ಲಿ ದಿನಕ್ಕೆ 400 ಯಂತ್ರಗಳನ್ನು ಉತ್ಪಾದಿಸಲಾಗ್ತಿದೆ.

ಕೋವಿಪ್ರೋ ಯಂತ್ರವು ಡೇಟಾ ಶೇಖರಣೆಗಾಗಿ ಮೈಕ್ರೊ ಎಸ್​ಡಿ ಸ್ಲಾಟ್ ಹೊಂದಿದೆ ಮತ್ತು ಒಬ್ಬ ವ್ಯಕ್ತಿ ಇದರ ಆಪರೇಟಿಂಗ್ ಸಿಸ್ಟಮ್​ನ್ನು ಸ್ಥಾಪಿಸಬಹುದು. ಇದು ಸಾಮಾನ್ಯ 230 ವೋಲ್ಟ್ ಎಸಿ ಪವರ್​ ಬಳಸುತ್ತದೆ. ಎಲ್ಇಡಿ ಮಾನಿಟರ್ ಪ್ರಮುಖ ಮಾಹಿತಿ ಅಥವಾ ಜಾಹೀರಾತುಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ. ಕೊರೊನಾದ ಬಳಿಕ ಕೋವಿಪ್ರೊವನ್ನು ಮಾಹಿತಿ ಪ್ರದರ್ಶನಕ್ಕಾಗಿ ಬಳಸಬಹುದು.

ಕೊರೊನಾ ನಮ್ಮ ದೈನಂದಿನ ಜೀವನದಲ್ಲಿ ಹಲವು ಬದಲಾವಣೆಗಳನ್ನು ತಂದಿದೆ. ಸಾರ್ವಜನಿಕ ಸ್ಥಳಗಳಿಗೆ ಹೋಗುವುದು ಇಂದಿನ ದಿನಗಳಲ್ಲಿ ದೊಡ್ಡ ಸವಾಲಾಗಿ ಪರಿಣಮಿಸಿದೆ. ಮೆಟ್ರೋ, ಬಸ್,ರೈಲ್ವೆ ನಿಲ್ದಾಣಗಳು, ಕಚೇರಿಗಳು ಮುಂತಾದ ಸ್ಥಳಗಳಲ್ಲಿ ಪ್ರತಿಯೊಬ್ಬರ ಮೇಲೆ ನಿಗಾವಹಿಸಿ ಸೋಂಕು ರಹಿತಗೊಳಿಸಲು ಹಲವು ಸಾಧನಗಳ ಅಗತ್ಯವಿದೆ. ಆದರೆ, ಅವೆಲ್ಲದಕ್ಕೂ ಒಂದೇ ಪರಿಹಾರವನ್ನು ಕೋವಿಪ್ರೊ ಒದಗಿಸಿದೆ ಎಂದು ಬೃಹಸ್ಪತಿ ಟೆಕ್ನಾಲಜೀಸ್‌ನ ವ್ಯವಸ್ಥಾಪಕ ನಿರ್ದೇಶಕ ರಾಜಶೇಖರ್ ಪಾಪೋಲು ತಿಳಿಸಿದರು.

ಕಂಪನಿಯು ಒಂದು ಕೋವಿಪ್ರೊ ಯಂತ್ರಕ್ಕೆ 45 ಸಾವಿರ ರೂ. ಬೆಲೆ ನಿಗದಿಪಡಿಸಿದೆ. ಮುಂದಿನ 30 ದಿನಗಳಲ್ಲಿ ಈ ಯಂತ್ರ ಭಾರತದಾದ್ಯಂತ ಲಭ್ಯವಾಗಲಿದೆ. 100 ದಿನಗಳಲ್ಲಿ 10 ಸಾವಿರ ಕೋವಿಪ್ರೋ ಯಂತ್ರಗಳನ್ನು ಮಾರಾಟ ಮಾಡುವ ಗುರಿಯನ್ನು ಕಿಯೋಸ್ಕ್ ಹೊಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.