ನವದೆಹಲಿ: ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಕೇಂದ್ರ ಸಚಿವ ಸಂಪುಟದ ಸಭೆ ಇಂದು ನಡೆಯಲಿದೆ.
ಆಹಾರ ಸಾಮಗ್ರಿಗಳನ್ನ ಸೆಣಬಿನ ಚೀಲಗಳಲ್ಲಿ ಪ್ಯಾಕೇಜಿಂಗ್ ಮಾಡಲು ಮಾನದಂಡಗಳನ್ನು ವಿಸ್ತರಿಸಲು ಅಕ್ಟೋಬರ್ 29 ರಂದು ನಡೆದ ಕಳೆದ ಕ್ಯಾಬಿನೆಟ್ ಸಭೆಯಲ್ಲಿ ಅನುಮೋದನೆ ನೀಡಿತ್ತು. 100 ಪ್ರತಿಶತದಷ್ಟು ಆಹಾರ - ಧಾನ್ಯಗಳು ಮತ್ತು 20 ಪ್ರತಿಶತದಷ್ಟು ಸಕ್ಕರೆಯನ್ನು ಸೆಣಬಿನ ಚೀಲಗಳಲ್ಲಿ ಪ್ಯಾಕ್ ಮಾಡುವ ಬಗ್ಗೆ ಚರ್ಚಿಸಿತ್ತು.
ಕೇಂದ್ರ ಸರ್ಕಾರ ಮತ್ತೊಂದು ಪ್ಯಾಕೇಜ್ ಘೋಷಣೆ ಮಾಡುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಇಂದಿನ ಸಚಿವ ಸಂಪುಟ ಸಭೆ ಮಹತ್ವ ಪಡೆದುಕೊಂಡಿದೆ.