ETV Bharat / bharat

ಒಂದು ಕಾಲು ಕಳ್ಕೊಂಡೆನೆಂದು ವ್ಯಥೆ ಪಡದ ಯುವಕನ ಬದುಕಿನ 'ನೃತ್ಯ' - ಡ್ಯಾನ್ಸ್​​ ಮಾಡುವ ಮೂಲಕ ತನ್ನ ಗುರಿಯತ್ತಾ

ಸ್ವರೂಪ್​​ ಎಂಬ 29 ವರ್ಷದ ಯುವಕ ಆರು ತಿಂಗಳ ಹಿಂದೆ ರಸ್ತೆ ಅಪಘಾತದಲ್ಲಿ ಒಂದು ಕಾಲು ಕಳೆದುಕೊಂಡಿದ್ದ. ತನ್ನ ಪರಿಸ್ಥಿತಿಯ ಬಗ್ಗೆ ವ್ಯಥೆ ಅಥವಾ ಮರುಕ ಪಡದ ಆತ ಒಂದೇ ಕಾಲಿನಿಂದ ಡ್ಯಾನ್ಸ್​​ ಮಾಡುತ್ತಾ ಸಾಧನೆಯತ್ತ ಮುನ್ನುಗ್ಗುತ್ತಿದ್ದಾನೆ.

ಒಂದೇ ಕಾಲಿದ್ದರೂ ಗುರಿಯತ್ತಾ ಸಾಗುತ್ತಿರುವ ಯುವಕ

author img

By

Published : Aug 19, 2020, 5:44 PM IST

ವಯನಾಡ್: ಕೇರಳದ ವಯನಾಡ್​​ ಜಿಲ್ಲೆಯ ಪುಲಿಯರ್ಮಲಾ ಮೂಲದ ಯುವಕ ಒಂದೇ ಕಾಲಿನಿಂದ ಡ್ಯಾನ್ಸ್​ ಮಾಡುವ ಮೂಲಕ ಗಮನ ಸೆಳೆಯುತ್ತಿದ್ದಾನೆ.

ಒಂದೇ ಕಾಲಿದ್ದರೂ ಗುರಿಯತ್ತಾ ಸಾಗುತ್ತಿರುವ ಯುವಕ
ಆಗದು ಎಂದು ಕೈಕಟ್ಟಿ ಕುಳಿತರೆ ಸಾಗದು ಬದುಕಿನ ಬಂಡಿ..

ಸ್ವರೂಪ್​​ ಆರು ತಿಂಗಳ ಹಿಂದೆ ರಸ್ತೆ ಅಪಘಾತದಲ್ಲಿ ಒಂದು ಕಾಲು ಕಳೆದುಕೊಂಡಿದ್ದಾನೆ. ಫೆಬ್ರವರಿ 2020ರಲ್ಲಿ ಈತನ ಬೈಕ್​, ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಈತನಿಗೆ ಗಂಭೀರ ಗಾಯಗಳಾಗಿತ್ತು. ಬಳಿಕ ಮೂರು ತಿಂಗಳ ಕಾಲ ಚಿಕಿತ್ಸೆ ಪಡೆದರೂ ಒಂದು ಕಾಲನ್ನು ಅನಿವಾರ್ಯವಾಗಿ ವೈದ್ಯರು ಕತ್ತರಿಸಿ ತೆಗೆಯಬೇಕಾಗಿತ್ತು.

ಒಂದೇ ಕಾಲಿದ್ದರೂ ಗುರಿಯತ್ತ ಸಾಗುತ್ತಿರುವ ಯುವಕ

ಸಿನಿಮಾ, ಮಾಡೆಲಿಂಗ್ ಮತ್ತು ಡ್ಯಾನ್ಸ್​​ನಲ್ಲಿ ಹೆಸರು ಮಾಡಬೇಕೆಂಬ ಕನಸು ಮತ್ತು ಗುರಿ ಸ್ವರೂಪ್‌ಗಿದೆ. ಆದ್ರೆ ಈ ಅಪಘಾತದಿಂದ ಆತನ ಕನಸೆಲ್ಲಾ ಕಮರಿಹೋಗಿದೆ ನಿಜ. ಆದ್ರೂ ಛಲ ಬಿಡದ ಯುವಕ ಒಂದೇ ಕಾಲಿನಿಂದ ಡ್ಯಾನ್ಸ್​​ ಮಾಡುವ ಮೂಲಕ ತನ್ನ ಗುರಿಯತ್ತ ದಾಪುಗಾಲಿಟ್ಟಿದ್ದಾನೆ.

ಚಿಕಿತ್ಸೆಯ ನಂತರ ಸ್ವರೂಪ್ ಮನೆಗೆ ಬಂದಾಗ, ಪೋಷಕರು, ಸಂಬಂಧಿಕರು ಮತ್ತು ಸ್ನೇಹಿತರು ಬೆಂಬಲವಾಗಿ ನಿಂತರು. ಅಲ್ಲದೇ ತನ್ನ ಹಳೆಯ ಡ್ಯಾನ್ಸ್​​ ಕ್ಲಬ್​ ಅನ್ನು ಮತ್ತೆ ಪ್ರಾರಂಭಿಸಲು ಸಹಾಯ ಮಾಡಿದರು. ನಂತರ ಸ್ವರೂಪ್​ ನೃತ್ಯಾಭ್ಯಾಸ ಪ್ರಾರಂಭಿಸಿದ್ದಾನೆ. ಈತನ ಡ್ಯಾನ್ಸ್​ ವಿಡಿಯೋಗಳನ್ನು ಸ್ನೇಹಿತರು ಯುಟ್ಯೂಬ್‌ಗೆ ಅಪ್ಲೋಡ್ ಮಾಡುತ್ತಿದ್ದು, ಜನಮೆಚ್ಚುಗೆ ಗಳಿಸುತ್ತಿದ್ದಾನೆ. ಈಗ ಯುವಕನಿಗೆ ಕೃತಕ ಅಂಗದ ಅವಶ್ಯಕತೆಯಿದೆ. ಸ್ವರೂಪ್‌ ಮೊದಲಿನಂತೆ ನೃತ್ಯ​ ಮಾಡಬೇಕಾದ್ರೆ, ಸುಮಾರು 24 ಲಕ್ಷ ರೂ. ಖರ್ಚು ಮಾಡಿ ಚಿಕಿತ್ಸೆ ಪಡೆಯಬೇಕಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.