ETV Bharat / bharat

ಮಹಿಳೆಯರ ಮೇಲಿನ ಆನ್‌ಲೈನ್ ಹಿಂಸಾಚಾರದ ಬಗ್ಗೆ ಯುನೆಸ್ಕೋ ಜಾಗತಿಕ ಸಮೀಕ್ಷೆ - 20% of women respondents

ಮಹಿಳೆಯರ ರಕ್ಷಣೆಗೆ ಎಷ್ಟೇ ಕಾನೂನುಗಳನ್ನು ಜಾರಿಗೊಳಿಸಿದ್ರೂ, ಅವರ ಮೇಲಿನ ದೌರ್ಜನ್ಯ ಮಾತ್ರ ಕಡಿಮೆಯಾಗಿಲ್ಲ. ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ಆನ್​ಲೈನ್​ ಹಿಂಸಾಚಾರಗಳು ಹೆಚ್ಚಾಗುತ್ತಿವೆ. ಈ ಸಂಬಂಧ ಯುನೆಸ್ಕೋ ಜಾಗತಿಕ ಸಮೀಕ್ಷೆಯೊಂದನ್ನು ಮಾಡಿದೆ.

ಆನ್​ಲೈನ್​ ಹಿಂಸಾಚಾರಗಳು
ಆನ್​ಲೈನ್​ ಹಿಂಸಾಚಾರಗಳು
author img

By

Published : Dec 17, 2020, 2:40 PM IST

ಮಹಿಳೆಯರ ಮೇಲಿನ ಹಿಂಸಾಚಾರ ಸಂಬಂಧ ಯುನೆಸ್ಕೋ ಮಹತ್ವದ ಸಮೀಕ್ಷೆ ನಡೆಸಿ ವರದಿ ಬಹಿರಂಗಪಡಿಸಿದೆ. ಈ ಸಮೀಕ್ಷೆಯ ಪ್ರಕಾರ ಜಗತ್ತಿನಲ್ಲಿ ಶೇ. 73ರಷ್ಟು ಮಹಿಳೆಯರು ತಾವು ಆನ್‌ಲೈನ್ ಹಿಂಸಾಚಾರವನ್ನು ಅನುಭವಿಸಿದ್ದೇವೆ ಎಂದು ಹೇಳಿದ್ದಾರೆ. ದೈಹಿಕವಾಗಿ ಶೇ. 25ರಷ್ಟು ಮತ್ತು ಲೈಂಗಿಕ ದೌರ್ಜನ್ಯಕ್ಕೆಗೊಳಗಾದವರು ಶೇ.18ರಷ್ಟು ಹಾಗೂ ಶೇ.13ರಷ್ಟು ಮಹಿಳೆಯರು ಹಿಂಸಾಚಾರದ ಬೆದರಿಕೆಗಳನ್ನು ಸ್ವೀಕರಿಸಿದ್ದಾರೆಂದು ಸಮೀಕ್ಷೆ ಹೇಳುತ್ತಿದೆ.

ಶೇ. 20ರಷ್ಟು ಮಹಿಳೆಯರು ತಾವು ಆನ್​ಲೈನ್​ನಲ್ಲಿ ಅನುಭವಿಸಿದ ಹಿಂಸಾಚಾರವನ್ನು, ಆಫ್​ಲೈನ್​ನಲ್ಲೂ ಕೆಲವರು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಆನ್‌ಲೈನ್ ಹಿಂಸಾಚಾರವೂ ಹೆಚ್ಚು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ತಿಳಿದುಬಂದಿದೆ. ಆನ್‌ಲೈನ್ ಹಿಂಸಾಚಾರದ ಪರಿಣಾಮ ವೈದ್ಯಕೀಯ ಅಥವಾ ಮನೋವೈದ್ಯರ ಸಹಾಯವನ್ನು ಶೇ.12ರಷ್ಟು ಮಹಿಳೆಯರು ಕೋರಿದ್ದಾರೆ ಎಂದು ಸಮೀಕ್ಷೆಯಿಂದ ತಿಳಿದುಬಂದಿದೆ.

ಲಿಂಗ ತಾರತಮ್ಯದಿಂದ ಶೇ.47ರಷ್ಟು, ರಾಜಕೀಯ ಮತ್ತು ಚುನಾವಣೆಗಳಿಂದ ಶೇ.44, ಮಾನವ ಹಕ್ಕುಗಳು ಮತ್ತು ಸಾಮಾಜಿಕ ನೀತಿಯಿಂದ ಶೇ.31ರಷ್ಟು ಮಹಿಳೆಯರು ಶೋಷಣೆಗೆ ಒಳಗಾಗಿದ್ದಾರೆ. ಈ ಸಮೀಕ್ಷೆಯಲ್ಲಿ ಪ್ರತಿಕ್ರಿಯಿಸಿದ ಶೇ.41ರಷ್ಟು ಮಹಿಳೆಯರು ತಮ್ಮನ್ನು ಆನ್‌ಲೈನ್ ದಾಳಿಯಲ್ಲಿ ಗುರಿಯಾಗಿಸಿ, ತಪ್ಪಾದ ಮಾಹಿತಿ ಪ್ರಚಾರ ಮಾಡಿರುವುದಾಗಿ ಹೇಳಿದ್ದಾರೆ.

ಓದಿ: ಕಮಲ್‌ನಾಥ್ ಸರ್ಕಾರ ಉರುಳಿಸಿದ್ದು ಮೋದಿ: ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ

ಮಹಿಳೆಯರು ಹೆಚ್ಚಾಗಿ ಬಳಸುವ ಅಗ್ರ ಐದು ಅಪ್ಲಿಕೇಶನ್‌ಗಳಲ್ಲಿ ಫೇಸ್‌ಬುಕ್ ಅತ್ಯಂತ ಸುರಕ್ಷಿತವೆಂದು ರೇಟ್ ಮಾಡಲ್ಪಟ್ಟಿದೆ. ಟ್ವಿಟರ್‌ಗೆ ಹೋಲಿಸಿದರೆ ಇದು “ತುಂಬಾ ಅಸುರಕ್ಷಿತ” ಎಂದು ಹೆಚ್ಚಿನ ಮಹಿಳೆಯರು ಪ್ರತಿಕ್ರಿಯಿಸಿದ್ದಾರೆ. ಟ್ವಿಟರ್‌ನಿಂದ ಶೇ. 26ರಷ್ಟು ಮಹಿಳೆಯರು ಶೋಷಣೆಗೆ ಒಳಗಾದ್ರೆ, ಫೇಸ್​ಬುಕ್​ನಿಂದ ಶೇ.39ರಷ್ಟು ಒಳಗಾಗಿದ್ದಾರೆ.

ಶೇ. 30ರಷ್ಟು ಮಹಿಳಾ ಪತ್ರಕರ್ತರು ಸಾಮಾಜಿಕ ಮಾಧ್ಯಮದಲ್ಲಿ ಸ್ವಯಂ ಸೆನ್ಸಾರ್ ಮಾಡುವ ಮೂಲಕ ತಾವು ಅನುಭವಿಸುವ ಆನ್‌ಲೈನ್ ಹಿಂಸಾಚಾರಕ್ಕೆ ಸ್ಪಂದಿಸಿದ್ದಾರೆ ಎಂದು ಸಮೀಕ್ಷೆ ಸೂಚಿಸುತ್ತದೆ. ಶೇ. 20ರಷ್ಟು ಮಹಿಳೆಯರು ಎಲ್ಲಾ ಆನ್‌ಲೈನ್ ಸಂವಹನದಿಂದ ಹಿಂದೆ ಸರಿದ್ರೆ, ಶೇ.18ರಷ್ಟು ತಮ್ಮ ಫಾಲೋವರ್ಸ್​ನನ್ನು ಕಡಿಮೆ ಮಾಡಿಕೊಂಡಿದ್ದಾರೆ.

ಈ ಸಮೀಕ್ಷೆಯಿಂದ ಸುಮಾರು 15 ದೇಶಗಳಲ್ಲಿ ಮಹಿಳೆಯರ ಮೇಲಿನ ಆನ್​ಲೈನ್​ ಹಿಂಸಾಚಾರ ಹೆಚ್ಚಾಗಿದೆ ಎಂದು ತಿಳಿದುಬಂದಿದೆ. ಪತ್ರಿಕಾ ಸ್ವಾತಂತ್ರ್ಯ, ಪತ್ರಕರ್ತರ ಸುರಕ್ಷತೆ ಮತ್ತು ಪತ್ರಿಕೋದ್ಯಮದಲ್ಲಿ ಮಹಿಳೆಯರ ಸಕ್ರಿಯ ಭಾಗವಹಿಸುವಿಕೆಯೇ ಈ ರೀತಿಯ ಕಪಟ ಬೆದರಿಕೆಗಳನ್ನು ಎದುರಿಸಲು ಕಾರಣ ಎಂದು ತಿಳಿದುಬಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.