ETV Bharat / bharat

ಭಾರತದಲ್ಲಿ ನಿರುದ್ಯೋಗದ  ಸಮಸ್ಯೆ.. ಕೇಂದ್ರ ಸರ್ಕಾರದ ಕ್ರಮಗಳು ಹೀಗಿವೆ.. - Steps taken by the Government to create employment

ಬಡತನ, ಹಸಿವು, ಭ್ರಷ್ಟಾಚಾರ, ನಿರುದ್ಯೋಗವೂ ಸೇರಿ ಹಲವು ಜೀವಂತ ಸಮಸ್ಯೆ ನಮ್ಮ ಕಣ್ಮುಂದಿವೆ. ನಿರುದ್ಯೋಗ ಇನ್ನಷ್ಟು ಸಮಸ್ಯೆಗಳ ಹುಟ್ಟಿಗೆ ಕಾರಣವಾಗುತ್ತಿದೆ. ಜನರ ಕೈಗೆ ಉದ್ಯೋಗ ಲಭಿಸಿದ್ರೆ ಉಳಿದ ಹಲವು ಸಮಸ್ಯೆಗೆ ಪರಿಹಾರ ದೊರಕುತ್ತದೆಯೋ ಏನೋ..

ಭಾರತದಲ್ಲಿ ನಿರುದ್ಯೋಗ
ಭಾರತದಲ್ಲಿ ನಿರುದ್ಯೋಗ
author img

By

Published : Sep 14, 2020, 8:27 PM IST

ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಕಾರ್ಮಿಕ ಬ್ಯೂರೋ ನಡೆಸಿದ ಅಂಕಿ-ಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಹಾಗೂ ಉದ್ಯೋಗ ಮತ್ತು ನಿರುದ್ಯೋಗ ಸಮೀಕ್ಷೆ, ರಾಷ್ಟ್ರೀಯ ಅಂಕಿ-ಅಂಶಗಳ ಕಚೇರಿ (ಎನ್‌ಎಸ್‌ಒ) ನಡೆಸಿದ ವಾರ್ಷಿಕ ಆವರ್ತಕ ಕಾರ್ಮಿಕ ಬಲ ಸಮೀಕ್ಷೆಯ (ಪಿಎಲ್‌ಎಫ್‌ಎಸ್) ಫಲಿತಾಂಶಗಳ ಪ್ರಕಾರ, ದೇಶದಲ್ಲಿ 15 ವರ್ಷ ಮತ್ತು ಮೇಲ್ಪಟ್ಟ ವ್ಯಕ್ತಿಗಳಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಿದೆ ಎಂದು ತಿಳಿದು ಬಂದಿದೆ.

2018-19ರ ಪಿಎಲ್ಎಫ್ಎಸ್​ನ ವರದಿಯ ಪ್ರಕಾರ ಶೇ.5.80ರಷ್ಟು ನಿರುದ್ಯೋಗ ಸಮಸ್ಯೆ ಇತ್ತು. 2017-18ರಲ್ಲಿ ಶೇ. 6.00,2015-16ರಲ್ಲಿ ಲೇಬರ್ ಬ್ಯೂರೋ ಸಮೀಕ್ಷೆ ಪ್ರಕಾರ ಶೇ.3.70ರಷ್ಟಿದೆ. 2013-14ರಲ್ಲಿ (ಲೇಬರ್ ಬ್ಯೂರೋ) ಶೇ.3.40ರಷ್ಟು, 2012-13 ರಲ್ಲಿ (ಲೇಬರ್ ಬ್ಯೂರೋ) ಶೇ. 4.00ರಷ್ಟು ನಿರುದ್ಯೋಗವಿತ್ತು.

ಉದ್ಯೋಗಾವಕಾಶ ಸೃಷ್ಟಿಸಲು ಸರ್ಕಾರ ಕೈಗೊಂಡ ಕ್ರಮ : ಖಾಸಗಿ ವಲಯದ ಆರ್ಥಿಕತೆ ಉತ್ತೇಜಿಸುವುದು, ಗಣನೀಯ ಪ್ರಮಾಣದ ಹೂಡಿಕೆ ಒಳಗೊಂಡ ವಿವಿಧ ಯೋಜನೆಗಳನ್ನು ತ್ವರಿತ ಜಾರಿಗೊಳಿಸುವುದು. ಯೋಜನೆಗಳಿಗೆ ಸಾರ್ವಜನಿಕ ವೆಚ್ಚ ಹೆಚ್ಚಿಸುವುದು ಮುಂತಾದ ಕ್ರಮಗಳನ್ನು ದೇಶದಲ್ಲಿ ಉದ್ಯೋಗ ಸೃಷ್ಟಿಸಲು ಸರ್ಕಾರ ಕೈಗೊಂಡಿದೆ.

ಯೋಜನೆಗಳು :

ಪ್ರಧಾನ ಮಂತ್ರಿ ಉದ್ಯೋಗ ಉತ್ಪಾದನಾ ಕಾರ್ಯಕ್ರಮ (ಪಿಎಂಇಜಿಪಿ)

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಎಂಜಿಎನ್‌ಆರ್‌ಇಜಿಎಸ್)

ಪಂ. ದೀನ್ ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆ (ಡಿಡಿಯು-ಜಿಕೆವೈ)

ದೀನ್‌ ದಯಾಲ್ ಅಂತ್ಯೋದಯ ಯೋಜನೆ-ರಾಷ್ಟ್ರೀಯ ನಗರ ಜೀವನೋಪಾಯ ಮಿಷನ್ (DAY-NULM)

ಪ್ರಧಾನಮಂತ್ರಿ ಮುದ್ರಾ ಯೋಜನೆ (ಪಿಎಂಎಂವೈ) ಯನ್ನು ಸ್ವಯಂ ಉದ್ಯೋಗಕ್ಕೆ ಅನುಕೂಲವಾಗುವಂತೆ ಸರ್ಕಾರದ ಮಧ್ಯೆ ಪ್ರಾರಂಭಿಸಿದೆ. ಪಿಎಂಎಂವೈ ಮೇಲಾಧಾರ ಮುಕ್ತ ಸಾಲಗಳ ಅಡಿಯಲ್ಲಿ ರೂ. 10 ಲಕ್ಷ, ಸೂಕ್ಷ್ಮ/ಸಣ್ಣ ವ್ಯಾಪಾರ ಉದ್ಯಮಗಳಿಗೆ ಮತ್ತು ವ್ಯಕ್ತಿಗಳಿಗೆ ತಮ್ಮ ವ್ಯವಹಾರ ಚಟುವಟಿಕೆಗಳನ್ನು ಹೊಂದಿಸಲು ಅಥವಾ ವಿಸ್ತರಿಸಲು ಅನುವು ಮಾಡಿಕೊಡುತ್ತದೆ.

ಭಾರತ ಸರ್ಕಾರ ರೂ. 20 ಲಕ್ಷ ಕೋಟಿ ಪ್ಯಾಕೇಜ್​ ಘೋಷಿಸಿದ್ದು, ಜೊತೆಗೆ ಆತ್ಮನಿರ್ಭರ್​​ ಯೋಜನೆ ಕೂಡ ಜಾರಿಗೊಳಿಸಿದೆ. ಇದು ನಿರುದ್ಯೋಗ ಕಡಿಮೆ ಮಾಡುತ್ತದೆ ಮತ್ತು ದೇಶದಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ.

ಸರ್ಕಾರವು ರಾಷ್ಟ್ರೀಯ ವೃತ್ತಿಜೀವನ ಸೇವೆ(ಎನ್‌ಸಿಎಸ್) ಯೋಜನೆಯನ್ನು ಜಾರಿಗೆ ತಂದಿದೆ. ಇದು ಡಿಜಿಟಲ್ ಪೋರ್ಟಲ್​ನನ್ನು ಒಳಗೊಂಡಿರುತ್ತದೆ. ಇದು ಉದ್ಯೋಗಾಕಾಂಕ್ಷಿಗಳು ಮತ್ತು ಉದ್ಯೋಗದಾತರಿಗೆ ಪರಿಣಾಮಕಾರಿ ಮತ್ತು ಸ್ಪಂದಿಸುವ ರೀತಿ ರಾಷ್ಟ್ರವ್ಯಾಪಿ ಆನ್‌ಲೈನ್ ವೇದಿಕೆ ಒದಗಿಸುತ್ತದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.