ನವದೆಹಲಿ: ಏಪ್ರಿಲ್ 20 ರಿಂದ ಲಾಕ್ ಡೌನ್ ಸಡಿಲಿಕೆ ಮಾಡುತ್ತಾ ಬರುತ್ತಿದ್ದರೂ ದೇಶದ ನಿರುದ್ಯೋಗ ಸಮಸ್ಯೆಯ ಮೇಲೆ ಯಾವುದೇ ಸಕಾರಾತ್ಮ ಪರಿಣಾಮ ಬೀರಿಲ್ಲ. ಅದು ಹಿಂದಿನಂತೆಯೇ ಇದೆ ಎಂದು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (ಸಿಎಮ್ಐಇ) ಯ ವರದಿ ತಿಳಿಸಿದೆ.
ಏಪ್ರಿಲ್ 26 ಕ್ಕೆ ದೇಶದಲ್ಲಿ ಕಾರ್ಮಿಕರ ಭಾಗವಹಿಸುವಿಕೆಯ ಪ್ರಮಾಣ ಶೇ. 35.4 ಇತ್ತು, ಮೇ 3ಕ್ಕೆ ಅದು 36.2ಕ್ಕೆ ಏರಿಕೆಯಾಗಿತ್ತು. ಬಳಿಕ ಮೇ 10ಕ್ಕೆ ಶೇ. 37.6 ಇದ್ದ ಕಾರ್ಮಿಕರ ಭಾಗವಹಿಸುವಿಕೆ ಮಟ್ಟ, ಮೇ 17ರ ಹೊತ್ತಿಗೆ ಶೇ. 38.8ಕ್ಕೆ ಏರಿಕೆಯಾಗಿದೆ. ಕಾರ್ಮಿಕರ ಭಾಗವಹಿಸುವಿಕೆಯ ಪ್ರಮಾಣ ಏರಿಕೆಯಾದರೂ. ದೇಶದ ನಿರುದ್ಯೋಗ ಪ್ರಮಾಣ ಹಿಂದಿನಂತೆಯೇ ಇದೆ ಎಂದು ಸಿಎಮ್ಐಇ ವರದಿಯಲ್ಲಿ ಉಲ್ಲೇಖಿಸಿದೆ.
ನಿರುದ್ಯೋಗ ಮಟ್ಟದಲ್ಲಿ ಯಾವುದೇ ಬದಲಾವಣೆಯಾಗದಿರುವುದು ಲಾಕ್ ಡೌನ್ ಮುಕ್ತಾಯವಾದ ಬಳಿಕ ದೇಶದ ಆರ್ಥಿಕತೆಯನ್ನು ಪುನರಾರಂಭಿಸಲು ಸರ್ಕಾರಕ್ಕೆ ದೊಡ್ಡ ಸವಾಲಾಗಲಿದೆ ಎಂದು ವರದಿ ಹೇಳಿದೆ.