ನ್ಯೂಯಾರ್ಕ್ (ಅಮೆರಿಕ): ಭಾರತ - ಚೀನಾ ಸಂಘರ್ಷ ತಾರಕಕ್ಕೇರಿದೆ. ಪೂರ್ವ ಲಡಾಖ್ನಲ್ಲಿ ಭಾರತೀಯ ಸೇನೆ ಹಾಗೂ ಚೀನಾ ಸೇನೆ ನಡುವೆ ನಡೆದ ಸಂಘರ್ಷದಲ್ಲಿ ಒಬ್ಬ ಸೇನಾಧಿಕಾರಿ ಸೇರಿದಂತೆ ಮೂವರು ಯೋಧರು ಹುತಾತ್ಮರಾಗಿದ್ದಾರೆ ಎಂದು ಸೇನೆ ಸ್ಪಷ್ಟೀಕರಣ ನೀಡಿದೆ.
ಈ ಕುರಿತು ಮಾತನಾಡಿರುವ ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಅಂಟೋನಿಯೋ ಗುಟೆರಸ್ ಎರಡೂ ರಾಷ್ಟ್ರಗಳ ನಡುವೆ ಗರಿಷ್ಠ ಸಂಯಮ ಅಗತ್ಯವಿದೆ ಎಂದಿದ್ದಾರೆ. ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬೇಕೆಂದು ಸಲಹೆ ನೀಡಿದ್ದಾರೆ.
ವಿಶ್ವಸಂಸ್ಥೆಯ ಸೆಕ್ರೆಟರಿ ಜನರಲ್ ಎರಿ ಕನೆಕೊ '' ನಮಗೆ ಚೀನಾ ಹಾಗೂ ಭಾರತದ ಬಗ್ಗೆ ಕಾಳಜಿಯಿದೆ. ಲೈನ್ ಆಫ್ ಆಕ್ಚುವಲ್ ಕಂಟ್ರೋಲ್ನಲ್ಲಿ ಎರಡೂ ರಾಷ್ಟ್ರಗಳು ಸಂಯಮದಿಂದ ಇರಬೇಕು. ಎರಡೂ ರಾಷ್ಟ್ರಗಳಿಂದ ಸಕಾರಾತ್ಮಕ ಪ್ರತಿಕ್ರಿಯೆ ತೆಗೆದುಕೊಳ್ಳುತ್ತೇವೆ'' ಎಂದಿದ್ದಾರೆ.
ಮೇ 5ರಂದು ಮೊದಲ ಬಾರಿಗೆ ಸ್ವಲ್ಪ ಮಟ್ಟಿನ ಗೊಂದಲಗಳು ಚೀನಾ- ಭಾರತ ಗಡಿಯ ಪ್ಯಾಂಗ್ಯಾಂಗ್ ಸೋ ಎಂಬಲ್ಲಿ ಕಾಣಿಸಿಕೊಂಡಿತ್ತು. ಅಲ್ಲಿಂದ ಶುರುವಾದ ಗೊಂದಲ ಮತ್ತೆ ಜೂನ್ ತಿಂಗಳ ಮೊದಲ ವಾರದಲ್ಲಿ ಉಭಯ ರಾಷ್ಟ್ರಗಳ ನಡುವೆ ಕೆಲವೊಂದು ಮಾತುಕತೆಗಳಿಗೆ ಕಾರಣವಾಗಿತ್ತು. ಆದರೆ, ಮಾತುಕತೆಗಳ ನಂತರ ಯಾವುದೇ ನಿರ್ಣಯಕ್ಕೆ ಬರಲು ಎರಡೂ ರಾಷ್ಟ್ರಗಳಿಂದ ಸಾಧ್ಯವಾಗಿರಲಿಲ್ಲ. ಇದರ ಬೆನ್ನೆಲ್ಲೇ ಗಾಲ್ವಾನ್ ಕಣಿವೆಯಲ್ಲಿ ಸಂಘರ್ಷ ಜರುಗಿದೆ.