ETV Bharat / bharat

ಸಲೂನ್ ಮಾಲೀಕನ ಪುತ್ರಿಯನ್ನು UNADAP ರಾಯಭಾರಿಯಾಗಿ ಆಯ್ಕೆ ಮಾಡಿದ ವಿಶ್ವಸಂಸ್ಥೆ!

ವೈಯಕ್ತಿಕ ಹಣದಿಂದ 600 ಕುಟುಂಬಗಳಿಗೆ ನೆರವಾಗಿದ್ದ ಸಲೂನ್ ಮಾಲೀಕನ ಪುತ್ರಿ 13 ವರ್ಷದ ಎಂ.ನೇತ್ರಾ, ಯುಎನ್‌ಎಡಿಎಪಿ ರಾಯಭಾರಿಯಾಗಿ ಆಯ್ಕೆಯಾಗಿದ್ದಾಳೆ.

salon owner for his selfless service
UNADAP ರಾಯಭಾರಿ
author img

By

Published : Jun 5, 2020, 9:50 PM IST

ಚೆನ್ನೈ(ತಮಿಳುನಾಡು): ಮಧುರೈನ ಸಲೂನ್​ ಮಾಲೀಕ ಸಿ.ಮೋಹನ್ ಎಂಬುವವರ 13 ವರ್ಷದ ಮಗಳು ಎಂ.ನೇತ್ರಾ ಅವರನ್ನು ಯುನೈಟೆಡ್ ನೇಷನ್ಸ್ ಅಸೋಸಿಯೇಶನ್ ಫಾರ್ ಡೆವಲಪ್​ಮೆಂಟ್​ ಅಂಡ್ ಪೀಸ್(ಯುಎನ್‌ಎಡಿಎಪಿ), ಸದ್ಭಾವನಾ ರಾಯಭಾರಿಯಾಗಿ ಆಯ್ಕೆಯಾಗಿದ್ದಾರೆ.

ನ್ಯೂಯಾರ್ಕ್‌ನಲ್ಲಿ ನಡೆಯುವ ವಿಶ್ವಸಂಸ್ಥೆಯ ಸಮಾವೇಶ ಮತ್ತು ಜಿನೀವಾದಲ್ಲಿ ಸಿವಿಲ್ ಸೊಸೈಟಿ ಫೋರಂ ಮತ್ತು ಸಮ್ಮೇಳನಗಳನ್ನು ಉದ್ದೇಶಿಸಿ ಮಾತನಾಡಲು ನೇತ್ರಾಗೆ ಅವಕಾಶ ನೀಡಲಾಗುವುದು ಎಂದು ಯುಎನ್‌ಎಡಿಎಪಿ ತಿಳಿಸಿದೆ.

  • Nethra, a 13-year-old girl from Madurai has been appointed as 'Goodwill Ambassador to the Poor' for United Nations Association for Development&Peace. She convinced her father,a salon shop owner,to give Rs 5 lakh that he saved for her education to needy during lockdown: UNADAP pic.twitter.com/hVRw2vWjcL

    — ANI (@ANI) June 5, 2020 " class="align-text-top noRightClick twitterSection" data=" ">

ನೇತ್ರಾ ಅವರ ತಂದೆ ಮೋಹನ್ ಮಧುರೈನಲ್ಲಿ ಸಲೂನ್ ಮಾಲೀಕನಾಗಿದ್ದಾರೆ. ಲಾಕ್​ಡೌನ್​ನಿಂದ ಸಂಕಷ್ಟದ ವೇಳೆ ತಾವು ಕೂಡಿಟ್ಟಿದ್ದ 5 ಲಕ್ಷ ರೂಪಾಯಿ ಹಣ ಬಳಸಿ ಸುಮಾರು 600 ಕುಟುಬಂಗಳಿಗೆ ಅಗತ್ಯ ಸಾಮಗ್ರಿ ನೀಡಿದ್ದಾರೆ. ಲಾಕ್​ಡೌನ್​ನಿಂದ 2 ತಿಂಗಳು ಸಲೂನ್ ಬಾಗಿಲು ಹಾಕಿದ್ದರೂ ಮೊಹನ್ ಕಷ್ಟದಲ್ಲಿರುವವರಿಗೆ ನೆರವಾಗಿದ್ದಾರೆ. ಪುತ್ರಿಯ ಒತ್ತಾಯದಿಂದಲೇ ತಂದೆ ಸಹಾಯ ಮಾಡಲು ಮುಂದಾಗಿದ್ದರು.

ಮೋಹನ್ ಅವರ ಕಾರ್ಯವನ್ನು ಮೆಚ್ಚಿಕೊಂಡಿದ್ದ ಪ್ರಧಾನಿ ಮೋದಿ ತಿಂಗಳಾಂತ್ಯದ ಮನ್​ ಕಿ ಬಾತ್ ಕಾರ್ಯಕ್ರಮದಲ್ಲಿ ಮಾತನಾಡಿದ್ದರು. 13 ವರ್ಷದ ಮಗಳ ಒತ್ತಾಯದ ನಂತರ ತಂದೆ ತಾವು ಕೂಡಿಟ್ಟ ಹಣವನ್ನು ಉತ್ತಮ ಕಾರ್ಯಕ್ಕೆ ಬಳಕೆ ಮಾಡಿದ್ದಾರೆ ಎಂದು ಮೋದಿ ಮೆಚ್ಚುಗೆ ಸೂಚಿಸಿದ್ದರು. ಇದಲ್ಲದೆ ಡಿಕ್ಸನ್​ನಿಂದ ನೇತ್ರಾಗೆ 1 ಲಕ್ಷ ರೂ. ವಿದ್ಯಾರ್ಥಿ ವೇತನ ಘೋಷಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.