ಮುಂಬೈ: ಗುರುವಾರ ಅಸ್ತಿತ್ವಕ್ಕೆ ಬಂದಿರುವ ಉದ್ಧವ್ ಠಾಕ್ರೆ ಸರ್ಕಾರ ಇಂದು ತನ್ನ ಬಹುಮತ ಸಾಬೀತುಪಡಿಸಲಿದೆ. ಅತ್ಯಂತ ವ್ಯವಸ್ಥಿತ ಹಾಗೂ ಶಾಂತಿಯುತವಾಗಿ ವಿಶ್ವಾಸಮತ ಸಾಬೀತು ಪಡಿಸಲು ಎಲ್ಲ ಕ್ರಮಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎರಡು ದಿನಗಳ ಅಧಿವೇಶನ ಇದಾಗಿದ್ದು, ಇಂದಿನಿಂದ ಅಧಿವೇಶನ ಆರಂಭಗೊಳ್ಳಲಿದೆ. ಮೊದಲ ದಿನ ನೂತನ ಸರ್ಕಾರ ತನ್ನ ಬಹುಮತ ಸಾಬೀತುಪಡಿಸಲಿದ್ದು, ಹೊಸ ಸಚಿವರನ್ನ ಸದನಕ್ಕೆ ಪರಿಚಯಿಸಲಿದೆ.
ಇನ್ನು ಭಾನುವಾರ ವಿಧಾನಸಭೆಯ ಸ್ಪೀಕರ್ ಆಯ್ಕೆ ನಡೆಯಲಿದೆ. ಬಳಿಕ ರಾಜ್ಯಪಾಲರ ಭಾಷಣ ಇರಲಿದೆ ಎಂದು ಮಹಾರಾಷ್ಟ್ರ ವಿಧಾನಸಭೆ ಮೂಲಗಳು ಮಾಹಿತಿ ನೀಡಿವೆ. ಸ್ಪೀಕರ್ ಆಯ್ಕೆ ಬಳಿಕ ಅವರು ಪ್ರತಿಪಕ್ಷದ ನಾಯಕನ ಹೆಸರನ್ನು ಘೋಷಿಸಲಿದ್ದಾರೆ.
ಒಂದು ತಿಂಗಳಲ್ಲಿ ಮಹಾರಾಷ್ಟ್ರ ಜನತೆ ಗುರುವಾರ ಎರಡನೇ ಸರ್ಕಾರವನ್ನು ನೋಡಿದ್ದು, ಎನ್ಸಿಪಿ - ಶಿವಸೇನೆ-ಕಾಂಗ್ರೆಸ್ ಮಹಾಮೈತ್ರಿಕೂಟದಲ್ಲಿ ಉದ್ಧವ್ ಠಾಕ್ರೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.ಠಾಕ್ರೆ ಮೊದಲ ಸಂಪುಟದಲ್ಲೇ ಶಿವಾಜಿ ರಾಜಧಾನಿ ಅಭಿವೃದ್ಧಿಗೆ 20 ಕೋಟಿ ರೂ. ಮಂಜೂರುಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 105 ಸೀಟು ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಶಿವಸೇನೆ 56, ಎನ್ಸಿಪಿ 54 ಹಾಗೂ ಕಾಂಗ್ರೆಸ್ 44 ಕ್ಷೇತ್ರ ತನ್ನದಾಗಿಸಿಕೊಂಡಿತ್ತು. ಬಿಜೆಪಿ ಮೈತ್ರಿ ಕಡಿದುಕೊಂಡು ಶಿವಸೇನೆ ಸದ್ಯ ಎನ್ಸಿಪಿ ಹಾಗೂ ಕಾಂಗ್ರೆಸ್ ಬೆಂಬಲದಿಂದ ಸರ್ಕಾರ ರಚಿಸಿದೆ.