ಚೆನ್ನೈ: ಪ್ರೇಮ ವಿವಾಹ ವಿಚಾರದ ವಿಷಯಕ್ಕೆ ಸಂಬಂಧಿಸಿದಂತೆ ಇಬ್ಬರು ಮಹಿಳೆಯರನ್ನು ಬರ್ಬರವಾಗಿ ಕೊಲೆ ಮಾಡಿರುವ ಪ್ರಕರಣ ತಮಿಳುನಾಡಿನ ತಿರುನೆಲ್ವೇಲಿಯಲ್ಲಿ ನಡೆದಿದೆ.
ಮೊದಲು ಇಬ್ಬರು ಮಹಿಳೆಯರ ಮೇಲೆ ಕಚ್ಚಾ ಬಾಂಬ್‌ನಿಂದ ದಾಳಿ ಮಾಡಿದ ನಂತರ ಶಿರಚ್ಛೇದ ಮಾಡಿ ಕ್ರೌರ್ಯ ಮೆರೆದಿದ್ದಾರೆ. ಶಣ್ಮುಗಥೈ ಮತ್ತು ಆಕೆಯ ಸಂಬಂಧಿ ಶಾಂತಿ ಕೊಲೆಗೀಡಾದವರು. ನಂಬಿರಾಜನ್ ಎಂಬುವರು ಪ್ರೇಮ ವಿವಾಹವಾಗಿದ್ದಕ್ಕೆ ಈತನ ಮಾವನ ಮನೆಯವರು ನಂಬಿರಾಜನ್ನ್ನು 2019 ರಲ್ಲಿ ಹತ್ಯೆ ಮಾಡಿದ್ದರು. ಇದಕ್ಕೆ ಸೇಡು ಎಂಬಂತೆ ನಂಬಿರಾಜನ್ ಅವರ ರಕ್ತಸಂಬಂಧಿ ಈ ವರ್ಷದ ಮಾರ್ಚ್ ತಿಂಗಳಲ್ಲಿ ನಂಬಿರಾಜನ್ ಮಾವನ ಕುಟುಂಬದ ಸದಸ್ಯರನ್ನು ಕೊಲೆ ಮಾಡಿದ್ದ.
ಈ ಎಲ್ಲಾ ಘಟನೆ ಹಿನ್ನೆಲೆ ನಿನ್ನೆ ಈ ದುರಂತ ನಡೆದಿದೆ. ಇದರಲ್ಲಿ ನಂಬಿರಾಜನ್ ಅವರ ತಾಯಿ ಷಣ್ಮುಗಥೈ ಮತ್ತು ಅವರ ಸಂಬಂಧಿ ಶಾಂತಿ ಬಲಿಯಾಗಿದ್ದಾರೆ. ಪ್ರೇಮ ವಿವಾಹಕ್ಕೆ ಸಂಬಂಧಿಸಿದಂತೆ ಈವರೆಗೆ ಐದು ಜನರ ಕೊಲೆಯಾದಂತಾಗಿದೆ. ಈ ಕೃತ್ಯದಲ್ಲಿ ಭಾಗಿಯಾಗಿರುವ ಆರೋಪಿಗಳನ್ನು ಬಂಧಿಸಲು ಪೊಲೀಸರು ವಿಶೇಷ ತಂಡಗಳನ್ನು ರಚಿಸಿದ್ದಾರೆ.