ETV Bharat / bharat

ಎರಡಂತಸ್ತಿನ ಕಟ್ಟಡ ಕುಸಿತ: ಯುವಕನ ಸಮಯಪ್ರಜ್ಞೆಯಿಂದ ಉಳಿಯಿತು 75 ಮಂದಿ ಪ್ರಾಣ​! - ಕಟ್ಟಡ ಕುಸಿತ ಸುದ್ದಿ

ಕೂಪಾರ್​ ಪ್ರದೇಶದಲ್ಲಿನ 42 ವರ್ಷ ಹಳೆಯ ಕಟ್ಟಡವು ಗುರುವಾರ ಕುಸಿದಿದೆ. ಎರಡಂತಸ್ತಿನ ಕಟ್ಟಡದ ಒಂದು ಭಾಗ ಕುಸಿದು ಸ್ವಲ್ಪದರಲ್ಲೇ 75 ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಯುವಕನ ಸಮಯಪ್ರಜ್ಞೆ ಇವರೆಲ್ಲರನ್ನು ಪ್ರಾಣಾಪಾಯದಿಂದ ಪಾರು ಮಾಡಿದೆ.

two-storey-building-collapses-in-dombivli
2 ಅಂತಸ್ಥಿನ ಕಟ್ಟಡ ಕುಸಿತ: ಯುವಕನ ಸಮಯಪ್ರಜ್ಞೆಗೆ 75 ಮಂದಿ ಬಚಾವ್​..!
author img

By

Published : Oct 30, 2020, 7:54 PM IST

ಥಾಣೆ (ಮಹಾರಾಷ್ಟ್ರ): ಇಲ್ಲಿನ ದೊಬಿವಿಲ್​​​​ ಪಟ್ಟಣದ ಕೂಪಾರ್​​​ ಬಳಿ ಎರಡಂತಸ್ತಿನ ಅಂತಸ್ತಿನ ಕಟ್ಟಡದ ಒಂದು ಪಾರ್ಶ್ವ ಕುಸಿದು ಸ್ವಲ್ಪದರಲ್ಲೇ 75 ಮಂದಿ ಪ್ರಣಾಪಾಯದಿಂದ ಪಾರಾಗಿರುವ ಘಟನೆ ಗುರುವಾರ ನಡೆದಿದೆ.

ಕೂಪಾರ್​ ಪ್ರದೇಶದಲ್ಲಿನ 42 ವರ್ಷ ಹಳೆಯ ಕಟ್ಟಡವು ಗುರುವಾರ ಬೆಳಗಿನಜಾವ 4.30ರ ಸುಮಾರಿಗೆ ಕುಸಿದಿದೆ. 18 ವರ್ಷದ ಕುನಾಲ್ ಎಂಬ ಯುವಕ ಬೆಳಗಿನ ಜಾವದ ವರೆಗೂ ವೆಬ್ ಸೀರಿಸ್ ನೋಡುತ್ತಿದ್ದ. ಈ ವೇಳೆ ಕಟ್ಟಡದ ಒಂದು ಭಾಗ ಕುಸಿಯುತ್ತಿರುವುದು ನೋಡಿದ್ದಾನೆ. ಇದಾದ ಬಳಿಕ ಆತ ಎಲ್ಲರಿಗೂ ಕೂಗಿ ಹೇಳಿ, ಕಟ್ಟಡದೊಳಗಿದ್ದವರಿಗೆ ಅಲ್ಲಿಂದ ಹೊರಬರುವಂತೆ ತಿಳಿಸಿದ್ದಾನೆ.

ಬೆಳಗಿನ ಜಾವ ಕಟ್ಟಡ ಕುಸಿಯುತ್ತಿರುವ ಸದ್ದು ಕೇಳಿದ ನಿವಾಸಿಗಳು ಜೀವ ಉಳಿಸಿಕೊಳ್ಳಲಿ ಕಟ್ಟಡದಿಂದ ಹೊರ ಓಡಿ ಬಂದಿದ್ದಾರೆ. ಸುಮಾರು 18 ಕುಟುಂಬಗಳು ಕಟ್ಟಡದಿಂದ ಹೊರ ಓಡಿಬಂದ ಕೆಲವೇ ಕ್ಷಣದಲ್ಲಿ ಕಟ್ಟಡ ನೆಲಕ್ಕುರುಳಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾರೊಬ್ಬರೂ ಗಾಯಗೊಂಡಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

For All Latest Updates

TAGGED:

Maharashtra,
ETV Bharat Logo

Copyright © 2025 Ushodaya Enterprises Pvt. Ltd., All Rights Reserved.