ETV Bharat / bharat

ಪಂಚಕುಲದ ಆಶ್ರಮದಲ್ಲಿ ಇಬ್ಬರು ಬಾಲಕಿಯರ ಮೇಲೆ ಬಾಬಾನಿಂದ ಹೀನ ಕೃಚ್ಯ!

ರಾಯ್​ಪುರ ರಾಣಿಯ ಛೋಟಾ ತ್ರಿಲೋಕ್​ಪುರ್​ ಆಶ್ರಮದಲ್ಲಿ ಸೇವೆ ಸಲ್ಲಿಸಲು ಬಂದಿದ್ದ ಇಬ್ಬರು ಬಾಲಕಿಯರ ಮೇಲೆ ಆಶ್ರಮದ ಬಾಬಾ ಅತ್ಯಾಚಾರ ಎಸಗಿರುವ ಆರೋಪ ಪ್ರಕರಣ ತವಡಾಗಿ ಬೆಳಕಿಗೆ ಬಂದಿದೆ.

panchkula police station
ಪಂಚಕುಲ ಪೊಲೀಸ್​ ಠಾಣೆ
author img

By

Published : Jan 29, 2020, 6:17 PM IST

ಹರಿಯಾಣ/ಪಂಚಕುಲ: ಆಶ್ರಮದಲ್ಲಿ ಸೇವೆ ಸಲ್ಲಿಸಲು ಬಂದಿದ್ದ ಇಬ್ಬರು ಬಾಲಕಿಯರನ್ನು ಅದೇ ಆಶ್ರಮದ ಬಾಬಾ 3 ದಿನಗಳ ಕಾಲ ನಿರಂತರವಾಗಿ ಬೆದರಿಸಿ ಅತ್ಯಾಚಾರ ಎಸಗಿರುವ ಆರೋಪ ಪ್ರಕರಣ ಕಲ್ಕಾದ ರಾಯ್​ಪುರ ರಾಣಿ ಬ್ಲಾಕ್​ನಲ್ಲಿ ನಡೆದಿದೆ.

ಪಂಚಕುಲ ಪೊಲೀಸ್​ ಠಾಣೆ

ಬಾಲಕಿಯರು ನೀಡಿರುವ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಬಾಬಾನ ಬಂಧನಕ್ಕೆ ಶೋಧ ನಡೆಸಿದ್ದಾರೆ.

ಈ ಇಬ್ಬರು ಬಾಲಕಿಯರು ಹಿಮಾಚಲ ಪ್ರದೇಶದ ಬಡ್ಡಿ ಮೂಲದವರು ಎಂದು ತಿಳಿದುಬಂದಿದೆ. ರಾಯ್​ಪುರ ರಾಣಿಯ ಛೋಟಾ ತ್ರಿಲೋಕ್​ ಪುರ್​ ಆಶ್ರಮದಲ್ಲಿ ಸೇವೆ ಸಲ್ಲಿಸಲು ಕರೆಸಿಕೊಂಡಿದ್ದ ಬಾಬಾ ತಮ್ಮನ್ನು ಬೆದರಿಸಿ ಅತ್ಯಾಚಾರ ಮಾಡಿರುವುದಾಗಿ ಬಾಲಕಿಯರು ದೂರು ಸಲ್ಲಿಸಿರುವುದಾಗಿ ಪಂಚಕುಲ ಪೊಲೀಸ್​ ಠಾಣೆಯ ಅಧಿಕಾರಿ ನೇಹಾ ಚೌಹಾನ್ ತಿಳಿಸಿದ್ದಾರೆ.

ಬಾಬಾ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.