ಜೈಪುರ( ರಾಜಸ್ಥಾನ): ಚಿತ್ತೋರ್ಗರ್ ಜಿಲ್ಲೆಯ ಗಂಗರಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಕೊಜುಂಡಾ ಗ್ರಾಮದಲ್ಲಿ ದಲಿತ ವ್ಯಕ್ತಿಯೊಬ್ಬರನ್ನು ಥಳಿಸಿದ ಆರೋಪದ ಹಿನ್ನೆಲೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಕೊಜುಂಡಾ ಗ್ರಾಮದ ಸುರೇಶ್ ಮತ್ತು ರತನ್ ಬಂಧಿತ ಆರೋಪಿಗಳು. ಜೂನ್ 25 ರಂದು ದಲಿತ ವ್ಯಕ್ತಿಯೊಬ್ಬರು ಸುರೇಶ್ ಮತ್ತು ರತನ್ ಬಳಿ ತಂತಿ ಕೇಳಿದ್ದಕ್ಕೆ ಕೋಪಗೊಂಡು ವ್ಯಕ್ತಿಯನ್ನು ಥಳಿಸಲಾಗಿದೆ.
ಈ ಘಟನೆ ಕುರಿತ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ವಿಡಿಯೋ ವೈರಲ್ ಆದ ಸುಮಾರು 8 ದಿನಗಳ ನಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಶೇಷ ತನಿಖಾ ತಂಡ ರಚಿಸಿ, ನಿನ್ನೆ ಆರೋಪಿಗಳನ್ನು ಬಂಧಿಸಿದ್ದಾರೆ.