ಮುಲುಗು: ತೆಲಂಗಾಣದ ಮುಲುಗು ಜಿಲ್ಲೆಯ ನರಸಿಂಹಸಾಗರ್ ಅರಣ್ಯ ಪ್ರದೇಶದಲ್ಲಿ ಪೊಲೀಸರು ನಡೆಸಿದ ಎನ್ಕೌಂಟರ್ನಲ್ಲಿ ಇಬ್ಬರು ನಕ್ಸಲರನ್ನು ಹೊಡೆದುರುಳಿಸಲಾಗಿದೆ.
ಮೃತ ನಕ್ಸಲರ ಗುರುತು ಪತ್ತೆಯಾಗಿಲ್ಲ. ಇವರು ಅಕ್ಟೋಬರ್ 10 ರಂದು ಟಿಆರ್ಎಸ್ ಮುಖಂಡ ಎಂ.ಭೀಮೇಶ್ವರ ರಾವ್ (48) ಅವರನ್ನು ಕೊಲೆ ಮಾಡಿದ್ದ ನಕ್ಸಲರ ಗುಂಪಿನವರಾ ಎಂಬುದರ ಕುರಿತು ಮಾಹಿತಿ ಕಲೆ ಹಾಕುತ್ತಿರುವುದಾಗಿ ಎಸ್ಪಿ ಸಂಗ್ರಾಮ್ ಸಿಂಗ್ ಜಿ ಪಾಟೀಲ್ ತಿಳಿಸಿದ್ದಾರೆ.
ತೆಲಂಗಾಣ-ಛತ್ತೀಸ್‌ಗಢದ ಗಡಿಯಲ್ಲಿರುವ ಅರಣ್ಯ ಪ್ರದೇಶದಲ್ಲಿ ಕಳೆದ ಕೆಲ ತಿಂಗಳುಗಳಲ್ಲಿ ತೆಲಂಗಾಣ ಪೊಲೀಸರು ಕೈಗೊಂಡ ಐದನೇ ಎನ್ಕೌಂಟರ್ ಇದಾಗಿದೆ.