ETV Bharat / bharat

ಕಾರು ಸಹಿತ ಇಬ್ಬರು ಯುವಕರ ಅಪಹರಣ.. ವಾಹನ, ಓರ್ವ ಯುವಕ ಪತ್ತೆ - ಕಾನ್ಪುರ್ ದೇಹತ್​ನಲ್ಲಿ ಯುವಕರ ಅಪಹರಣ

ರಸ್ತೆಯಲ್ಲಿ ಹೋಗುತ್ತಿದ್ದ ವೇಳೆ ಕಾರು ಅಡ್ಡಗಟ್ಟಿ ವಾಹನ ಸಮೇತ ಇಬ್ಬರು ಯುವಕರನ್ನು ಅಪಹರಣ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

Two man kidnapping from the national highway
ಕಾರು ಸಹಿತ ಇಬ್ಬರು ಯುವಕರ ಅಪಹರಣ
author img

By

Published : Sep 27, 2020, 8:20 AM IST

ಕಾನ್ಪುರ್ (ಉತ್ತರ ಪ್ರದೇಶ): ಕಾರು ಸಮೇತ ಇಬ್ಬರು ಯುವಕರನ್ನು ಅಪಹರಿಸಿದ ದುಷ್ಕರ್ಮಿಗಳು, ಕಾರು ಮತ್ತು ಓರ್ವ ಯುವಕನನ್ನು ಕಾನ್ಪುರದಲ್ಲಿ ಬಿಟ್ಟು ಮತ್ತೋರ್ವನನ್ನು ಕರೆದೊಯ್ದಿದ್ದಾರೆ.

ಶಿವಂ ಮತ್ತು ರವೀಂದ್ರ ಎಂಬ ಇಬ್ಬರು ಯುವಕರು ಅಕ್ಬರ್​ಪುರ ಬಳಿ ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ಮೂವರು ದುಷ್ಕರ್ಮಿಗಳು ಬೈಕ್​ನಲ್ಲಿ ಬಂದು ಕಾರನ್ನು ಹಿಂದಿಕ್ಕಿದ್ದಾರೆ. ಬೈಕ್​ನಿಂದ ಇಳಿದು ಬಂದ ಇಬ್ಬರು ದುಷ್ಕರ್ಮಿಗಳು ಏಕಾಏಕಿ ಕಾರಿನಲ್ಲಿ ಕುಳಿತು, ಕಾರು ಚಾಲನೆ ಮಾಡುತ್ತಿದ್ದ ಶಿವಂನನ್ನು ಹಿಂದಿನ ಸೀಟ್​ಗೆ ತಳ್ಳಿ ಕಾನ್ಪುರದತ್ತ ಕಾರು ಚಲಾಯಿಸಿದ್ದಾರೆ.

ಘಟನೆಯನ್ನು ನೋಡಿದ ಸ್ಥಳೀಯನೋರ್ವ ಶಿವಂ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾನೆ. ಈ ಬಗ್ಗೆ ಪೋಷಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸಿಸಿಟಿವಿ ದೃಶ್ಯ ಪರಿಶೀಲನೆ ನಡೆಸಿದ ಪೊಲೀಸರು ಅಪಹರಣಕಾರರಿಗಾಗಿ ಕಾನ್ಪುರದಲ್ಲಿ ಹುಡುಕಾಟ ನಡೆಸುತ್ತಿದ್ದರು.

ಈ ವೇಳೆ ಕಾರು ಮತ್ತು ಶಿವಂ ಕಾನ್ಪುರದಲ್ಲಿ ಪತ್ತೆಯಾಗಿದ್ದು, ಮತ್ತೋರ್ವ ರವೀಂದ್ರ ಎಂಬುವನನ್ನು ಅಪಹರಣ ಮಾಡಿದ್ದಾರೆ. ಶಿವಂನಿಂದ ಮಾಹಿತಿ ಕಲೆ ಹಾಕಿರುವ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.