ಪಣಜಿ: ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ಗೋವಾದಲ್ಲಿ ಇಬ್ಬರು ಕಾಮುಕರನ್ನು ಪೊಲೀಸರು ಬಂಧಿಸಿದ್ದಾರೆ.
12 ವರ್ಷದ ಬಾಲಕಿ ಮೇಲೆ ಇಬ್ಬರು ಕಾರ್ಮಿಕರು ದುಷ್ಕೃತ್ಯವೆಸಗಿದ್ದಾಗಿ ತಿಳಿದು ಬಂದಿದೆ. ಮನೆಯಲ್ಲಿ ಬಾಲಕಿ ನಿದ್ದೆ ಮಾಡುತ್ತಿದ್ದ ವೇಳೆ ಮನೆಯೊಳಗೆ ನುಗ್ಗಿರುವ ಇಬ್ಬರು ಈ ಕೃತ್ಯವೆಸಗಿದ್ದಾರೆ.
ಬಿಹಾರದಿಂದ ಕೆಲಸ ಆರಿಸಿಕೊಂಡು ಬಂದಿದ್ದ ಇಬ್ಬರು ನಿನ್ನೆ ಸಂಜೆ ಈ ಕೃತ್ಯವೆಸಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಬಾಲಕಿ ತಂದೆ ದೂರು ದಾಖಲಿಸಿದ್ದು, ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿಕೊಂಡಿರುವುದಾಗಿ ಪೊಲೀಸ್ ಇನ್ಸ್ಪೆಕ್ಟರ್ ಸಂತೋಷ ದೇಸಾಯಿ ತಿಳಿಸಿದ್ದಾರೆ.
ಕೃತ್ಯವೆಸಗಿರುವವರಲ್ಲಿ ಓರ್ವ 18 ವರ್ಷದ ಕಾರ್ಮಿಕನಾಗಿದ್ದು, ಇನ್ನೊಬ್ಬನ್ನ 20 ವರ್ಷದ ಜೀತೇಂದ್ರ ಚೌದರಿ ಎಂದು ಗುರುತಿಸಲಾಗಿದೆ. ಈಗಾಗಲೇ ಪೊಲೀಸರು ಇವರನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.