ETV Bharat / bharat

ಬಿಜೆಪಿ ಮುಖಂಡನ ಹತ್ಯೆ: ಇಬ್ಬರು ಆರೋಪಿಗಳ ಅರೆಸ್ಟ್​

ಉತ್ತರ ಪ್ರದೇಶದ ಬಾಗಪತ್​ನಲ್ಲಿ ಬಿಜೆಪಿ ಮುಖಂಡನೋರ್ವನ ಹತ್ಯೆಯಾಗಿದ್ದು ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಉಳಿದ ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

Two held in connection with ex-BJP leader's murder in UP
ಬಂಧಿತ ಆರೋಪಿಗಳು
author img

By

Published : Aug 12, 2020, 4:33 PM IST

ಬಾಗಪತ್​​ (ಉತ್ತರ ಪ್ರದೇಶ): ಬಿಜೆಪಿ ಮುಖಂಡ ಸಂಜಯ್ ಖೋಖರ್ ಹತ್ಯೆ ಪ್ರಕರಣ ಸಂಬಂಧ ಇಬ್ಬರನ್ನು ಬಂಧಿಸಲಾಗಿದ್ದು, ಉಳಿದ ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ ಎಂದು ಪೊಲೀಸ್ ಮಹಾನಿರ್ದೇಶಕ ಹೆಚ್​ಸಿ ಅಶ್ವತಿ ತಿಳಿಸಿದ್ದಾರೆ.

ಮಂಗಳವಾರ ಬಾಗಪತ್ ಪ್ರದೇಶದಲ್ಲಿ ಸಂಜಯ್ ಖೋಖರ್ ಬೆಳಿಗ್ಗೆ ವಾಯುವಿಹಾರಕ್ಕೆ ಹೋಗಿದ್ದಾಗ ಅಪರಿಚಿತರು ಗುಂಡಿಕ್ಕಿ ಪಾರಾರಿಯಾಗಿದ್ದರು.

Two held in connection with ex-BJP leader's murder in UP
ಬಂಧಿತ ಆರೋಪಿಗಳು

ಪ್ರಕರಣಕ್ಕೆ ಸಂಬಂಧಪಟ್ಟಂತೆ ಸ್ಥಳೀಯ ಪೊಲೀಸರು ಎಫ್​ಐಆರ್​ ದಾಖಲಿಸಿ, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರು 2020ರಲ್ಲಿ ನಡೆದ ಪ್ರಕರಣವೊಂದರ ಆರೋಪಿಗಳು ಎಂದು ತಿಳಿದುಬಂದಿದೆ. ವೈಯಕ್ತಿಕ ಹಾಗೂ ಹಳೆ ದ್ವೇಷದ ಹಿನ್ನೆಲೆ ಕೊಲೆ ಮಾಡಿದ್ದಾರೆಂದು ಶಂಕಿಸಲಾಗಿದೆ. ಇದೀಗ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು, ಉಳಿದವರಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್​ ಅಧಿಕಾರಿ ಹೆಚ್​ಸಿ ಅಶ್ವತಿ ತಿಳಿಸಿದ್ದಾರೆ.

ಘಟನೆ ಸಂಬಂಧ ಚಾಪ್ರೌಲಿಯ ಪೊಲೀಸ್​ ಇನ್ಸ್​ಪೆಕ್ಟರ್​​ನನ್ನು ಅಮಾನತುಗೊಳಿಸಲಾಗಿದೆ ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.