ಹೈದರಾಬಾದ್ : ಬ್ಯಾಂಕ್ ಬಳಿ ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಹೇಳಿದ ಪೊಲೀಸ್ ಕಾನ್ಸ್‌ಟೇಬಲ್ ಮೇಲೆ ಮ್ಯಾಕಾನಿಕ್ ಹಾಗೂ ಅವರ ಸ್ನೇಹಿತ ಸೇರಿ ಮಾರಾಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆ ಹೈದರಾಬಾದಿನಲ್ಲಿ ನಡೆದಿದೆ.
ಇಬ್ಬರು ಯುವಕರು ಕಬ್ಬಿಣದ ರಾಡ್ನಿಂದ ಹಲ್ಲೆ ಮಾಡಿದ್ದರಿಂದ ಪೊಲೀಸ್ ಪೇದೆ ಪ್ರಜ್ಞೆ ಕೆಳಕ್ಕೆ ಬಿದ್ದಿದ್ದರು. ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬುಧವಾರ ಪೊಲೀಸ್ ಮೇಲೆ ಹಲ್ಲೆ ಮಾಡಿದ ಆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಕಾನ್ಸ್‌ಟೇಬಲ್ ಮತ್ತು ಹೋಮ್ಗಾರ್ಡ್ ಕೋವಿಡ್-19 ಭೀತಿಯಿಂದ ಲಾಕ್ಡೌನ್ ಇರುವುದರಿಂದ ಬಂದೋಬಸ್ತ್ ಕಾರ್ಯನಿರ್ವಹಿಸುತ್ತಿದ್ದರು. ಕೊರೊನಾ ರಿಲೀಫ್ ಫಂಡ್ನಿಂದ ಬಿಡುಗಡೆಯಾಗಿದ್ದ ಪರಿಹಾರ ಹಣವನ್ನು ಬಿಡಿಸಿಕೊಳ್ಳಲು ಬ್ಯಾಂಕ್ ಮುಂದೆ ತುಂಬಾ ಜನಜಂಗುಳಿ ಸೇರಿತ್ತು.
ಮೆಕ್ಯಾನಿಕ್ ಆಗಿರುವ ಮೊದಲ ಆರೋಪಿ ಕೂಡ ಬ್ಯಾಂಕ್ ಬಳಿ ಹಣ ತೆಗೆದುಕೊಳ್ಳಲು ಸಾಲಿನಲ್ಲಿ ನಿಂತಿದ್ದ. ಈ ವೇಳೆ ಸಾಲಿನಲ್ಲಿ ಸಾಮಾಜಿಕ ಅಂತರ ಕಾಯಲು ಸೂಚಿಸಿದ್ದಕ್ಕೆ ಪೊಲೀಸರ ಮೇಲೆ ಆತ ಕೋಪದಿಂದ ವರ್ತಿಸಿದ್ದಾನೆ. ಈ ಘಟನೆಯನ್ನು ಮನದಲ್ಲಿಟ್ಟುಕೊಂಡಿದ್ದ ಮೆಕ್ಯಾನಿಕ್ ತನ್ನ ಸ್ನೇಹಿತನೊಂದಿಗೆ ಸೇರಿ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾನೆ. ಈ ಕುರಿತು ಹಲ್ಲೆ ಮಾಡಿದ ಇಬ್ಬರು ಆರೋಪಿಗಳ ಮೇಲೆ ಕೊಲೆ ಯತ್ನ ಪ್ರಕರಣ ದಾಖಲಿಸಿದೆ.