ಮಧ್ಯಪ್ರದೇಶ: ಭೋಪಾಲ್‌ನಲ್ಲಿ ಶುಕ್ರವಾರ ಇಬ್ಬರು ಮಹಿಳಾ ವೈದ್ಯರು ಸೇರಿದಂತೆ ಹದಿನಾಲ್ಕು ಜನರು ಕೊರೊನಾ ವೈರಸ್ಗೆ ತುತ್ತಾಗಿದ್ದಾರೆ.
ಭೋಪಾಲ್‌ನಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ 112ಕ್ಕೆ ಏರಿಕೆಯಾಗಿದ್ದು, ಮಧ್ಯಪ್ರದೇಶದಲ್ಲಿ ಸೋಂಕಿತರ ಸಂಖ್ಯೆ ಒಟ್ಟಾರೆ 440ಕ್ಕೆ ತಲುಪಿದೆ ಎಂದು ಆರೋಗ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೊರೊನಾ ವೈರಸ್ ಪಾಸಿಟಿವ್ ಬಂದಿರುವ ಇಬ್ಬರು ಮಹಿಳಾ ವೈದ್ಯರು ಭೋಪಾಲ್ನ ಪ್ರಮುಖ ಸರ್ಕಾರಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.