ಕಾಂಕೇರ್(ಛತ್ತೀಸ್ಗಡ): ಐಇಡಿ(ಸುಧಾರಿತ ಸ್ಪೋಟಕ ಸಾಧನ) ಬಳಸಿ ಟ್ಯಾಂಕರ್ ಸ್ಫೋಟಿಸಿದ್ದು,ಇಬ್ಬರು ನಾಗರಿಕರು ಮೃತಪಟ್ಟ ಘಟನೆ ಇಲ್ಲಿಗೆ ಸಮೀಪದ ತಡೋಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸುಧಾರಿತ ಐಇಡಿ ಬಳಸಿ ಟ್ಯಾಂಕರ್ ಸ್ಫೋಟಿಸಿದ್ದು, ಘಟನೆಯನ್ನು ಇಬ್ಬರು ನಾಗರಿಕರು ಸಾವನ್ನಪ್ಪಿರುವ ಬಗ್ಗೆ ಎಸ್ಪಿ ಎಲ್.ಧ್ರುವ ಮಾಹಿತಿ ನೀಡಿದ್ದಾರೆ.
ಇಂದು ಬೆಳಗ್ಗೆ ಹತ್ತು ಗಂಟೆ ಸುಮಾರಿಗೆ ಈ ದಾಳಿ ನಡೆದಿದೆ. ತುಮಪಲ್ ಗ್ರಾಮದಿಂದ ಎರಡು ಕಿ.ಮೀ ದೂರದಲ್ಲಿ ಈ ದಾಳಿಯಾಗಿದ್ದು ರೈಲ್ವೇ ಪಟ್ಟಿಯ ಸನಿಹದಲ್ಲೇ ಕೃತ್ಯ ಎಸಗಿದ್ದಾರೆ.
ನಕ್ಸಲರು ಈ ಕೃತ್ಯ ಎಸಗಿರುವ ಬಗ್ಗೆ ಶಂಕೆ ವ್ಯಕ್ತಪಡಿಸಲಾಗಿದೆ.